Rahul Gandhi in Manipur: ಸಂತ್ರಸ್ತರಿಗೆ ‘ರಾಗಾ’ ಸಾಂತ್ವನ, ಇಂದು ವಿವಿಧ ಪಕ್ಷಗಳ ಮುಖಂಡರ ಭೇಟಿ | Congress Rahul Gandhi Visit Manipur: He Will Meet 10 Like Minded Parties Leaders and others

India

oi-Shankrappa Parangi

|

Google Oneindia Kannada News

ನವದೆಹಲಿ, ಜೂನ್ 30: ಮಣಿಪಾಲ್‌ ನಲ್ಲಿ ತೀವ್ರ ಹಿಂಸಾಚಾರ ನಡೆದ ಬೆನ್ನಲ್ಲೆ ಆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಶುಕ್ರವಾರ ಮೊಯಿರಾಂಗ್‌ಗೆ ತೆರಳಿದ ಅವರು, ಹಿಂಸಾಚಾರದಿಂದ ತೊಂದರೆಗೀಡಾದ ಸಂತ್ರಸ್ತರನ್ನು ಅವರು ಭೇಟಿ ಮಾಡಿದರು. ಅನೇಕ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದರು.

ಮೊಯಿರಾಂಗ್ ನಿಂದ ಮರಳಿ ಇಂಫಾಲ್ ಬರಲಿರುವ ರಾಹುಲ್ ಗಾಂಧಿಯವರು ಹತ್ತು ಸಮಾನ ಮನಸ್ಕ ಪಕ್ಷದ ನಾಯಕರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ವೇಳೆಯುನೈಟೆಡ್ ನಾಗಾ ಕೌನ್ಸಿಲ್ (UNC) ನಾಯಕರು ಹಾಗೂ ನಾಗರಿಕ ಸಮಾಜ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೀಶಮ್ ಮೇಘಚಂದ್ರ ಮಾಹಿತಿ ನೀಡಿದರು.

Congress Rahul Gandhi Visit Manipur: He Will Meet 10 Like Minded Parties Leaders and others

ರಾಹುಲ್ ಗಾಂಧಿ ಅವರು ಶುಕ್ರವಾರ ಅನೇಕ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಲಿದ್ದಾರೆ. ತದನಂತರ ಮೊಯಿರಾಂಗ್‌ನಲ್ಲಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ ಅವರು ಇಂಫಾಲ್‌ಗೆ ಮರಳುತ್ತಾರೆ.

ಹಿಂಸಾಚಾರದ ಸ್ಥಳದಲ್ಲಿ ರಾಹುಲ್ ಗಾಂಧಿ

ಹಲವು ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹೀಗಾಗಿ ಶಾಂತಿ ಬಯಸಿರುವ ನಾಗರಿಕ ಸಮಾಜ ಸಂಘಟನೆ, ಯುನೈಟೆಡ್ ನಾಗಾ ಕೌನ್ಸಿಲ್‌ನ ನಾಯಕರು ಹಾಗೂ 10 ಸಮಾನ ಮನಸ್ಕ ರಾಜಕೀಯ ಪಕ್ಷಗಳು ಈಗಾಗಲೇ ರಾಹುಲ್ ಗಾಂಧಿಯವರಿಗಾಗಿ ಇಂಫಾಲ್ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದರು.

ನೆನ್ನೆ ಗುರುವಾರ ರಾಹುಲ್ ಗಾಂಧಿಯವರು ಜನಾಂಗೀಯ ಹಿಂಸಾಚಾರವನ್ನು ಕಂಡ ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಮೊದಲ ದಿನ ಮಣಿಪುರದ ಚುರಾಚಂದ್‌ಪುರಕ್ಕೆ ತೆರಳಿದ್ದರು. ಅಲ್ಲಿನ ಸದ್ಯದ ಪರಸ್ಥಿತಿ ಮಾಹಿತಿಯನ್ನು ಸ್ಥಳೀಯ ನಾಯಕರಿಂದ ಪಡೆದರು.

Congress Rahul Gandhi Visit Manipur: He Will Meet 10 Like Minded Parties Leaders and others

ಈ ಜನಾಂಗೀಯ ಹಿಂಸೆ ಹೆಚ್ಚಾಗುತ್ತಿದ್ದಂತೆ ಆ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು, ಸದ್ಯ ಮಣಿಪುರಕ್ಕೆ ಚಿಕಿತ್ಸೆ ಬೇಕಿದೆ. ಅಲ್ಲಿ ಹಿಂಸೆ, ಹೋರಾಟಕ್ಕೆ ಬದಲಾಗಿ ಶಾಂತಿಗೆ ಮಾತ್ರ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದರು.

ಇದೀಗ ಮಣಿಪುರದ ನನ್ನ ಎಲ್ಲಾ ಸಹೋದರ ಸಹೋದರಿಯರನ್ನು ಅಳಲು ಕೇಳಲು ಬಂದಿದ್ದೇನೆ. ಎಲ್ಲ ಸಮುದಾಯಗಳ ಜನರು ಮನಃಸ್ಪೂರ್ವಕವಾಗಿ ಸ್ವಾಗತಿಸಿದ್ದಾರೆ, ಪ್ರೀತಿ ತೋರುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನನ್ನ ಭೇಟಿ ತಡೆಯಲು ಯತ್ನಿಸುತ್ತಿರುವ ಸರ್ಕಾರ ನಡೆ ವಿಷಾಧನೀಯ ಎಂದು ರಾಹುಲ್ ಗಾಂದಿ ಹೇಳಿದರು.

‘ಗೋ ಬ್ಯಾಕ್ ರಾಗಾ’

ಗುರುವಾರ ಇಂಫಾಲ್‌ಗೆ ಬಂದಿಳಿದ ರಾಹುಲ್ ಗಾಂಧಿ ಅವರು ಚುರಚಂದ್‌ಪುರಕ್ಕೆ ಹೋಗದಂತೆ ಸ್ಥಳದಲ್ಲಿದ್ದ ಪೊಲೀಸರು ತಡೆಯೊಡ್ಡಿದ್ದಾರೆ. ಈ ಘಟನೆ ಬಳಿಕ ದೆಹಲಿಗೆ ಮರಳಿದ್ದ ರಾಹುಲ್ ಗಾಂಧಿ ಅವರಿಗೆ ಭದ್ರತೆ ಕಾರಣಗಳಿಂದಾಗಿ ನಿಮ್ಮನ್ನು ಬಿಡಲಾಗಲಿಲ್ಲ ಎಂದು ಇಲಾಖೆ ತಿಳಿಸಿದೆ ಎನ್ನಲಾಗಿದೆ.

ಇಂಫಾಲದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿಯೇ ಬಿಷ್ಣುಪುರ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕರ ಜೊತೆ ಬರುತ್ತಿದ್ದ ಬೆಂಗಾವಲು ಪಡೆಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

ಬೆಂಗಾವಲು ಪಡೆ ತಡೆದ ಪೊಲೀಸರು, ಭದ್ರತೆ ಕುರಿತಂತೆ ರಾಹುಲ್ ಗಾಂಧಿಯವರು ಕಳವಳ ವ್ಯಕ್ತಪಡಿಸಿದ್ದಾರೆ. ಮೈತೇಯಿ ಬುಡಕಟ್ಟು ಸಮುದಾಯದ ಪ್ರತಿಭಟನೆ ಮತ್ತು ಗಲಭೆಗಳಿಂದ ಹೆಚ್ಚು ತೊಂದರೆ ಚುರಾಚಂದಪುರ ಜಿಲ್ಲೆ ವ್ಯಾಪ್ತಿಯಲ್ಲಿ ಆಗಿದೆ. ಇಲ್ಲಿಗೆ ಭೇಟಿ ನೀಡುತ್ತಿದ್ದಂತೆ ರಾಹುಲ್ ಗಾಂಧಿಯವರಿಗೆ ಪ್ರತಿಭಟನೆಯ ಬಿಸಿ ಸಹ ತಟ್ಟಿದೆ.

ಬಿಷ್ಣುಪುರದಲ್ಲಿ ಕಾಂಗ್ರೆಸ್ ನಾಯಕನ ಬೆಂಗಾವಲು ಪಡೆಗಳ ವಾಹನ ಸುತ್ತುವರಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ‘ರಾಹುಲ್ ಗಾಂಧಿ ಗೋ ಬ್ಯಾಕ್’ ಎಂಬ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಅಶ್ರುವಾಯು ಸಿಡಿಸಿದರು.

English summary

Congress Rahul Gandhi visit manipur: He will meet 10 like minded parties leaders and others.

Story first published: Friday, June 30, 2023, 11:24 [IST]

Source link