Rahul Gandhi: ಮೋದಿ ಉಪನಾಮೆ ಪ್ರಕರಣದಲ್ಲಿ ರಾಹುಲ್‌ಗೆ ಮತ್ತೆ ಹಿನ್ನಡೆ- ಲೋಕಸಭೆ ಚುನಾವಣೆ ಸ್ಪರ್ಧೆಗೂ ಕಂಟಕ | Setback For Rahul Gandhi In Modi Surname Case- What will be his political future?

India

oi-Ravindra Gangal

|

Google Oneindia Kannada News

ಅಹಮದಾಬಾದ್, ಜುಲೈ 07: ಮೋದಿ ಉಪನಾಮದ ಕುರಿತು ರಾಹುಲ್‌ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್ ಸ್ಥಳೀಯ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಗುಜರಾತ್‌ ಹೈಕೋರ್ಟ್‌ ಎತ್ತಿಹಿಡಿದಿದೆ. ಸ್ಥಳೀಯ ನ್ಯಾಯಾಲಯವು ನೀಡಿದ್ದ ಶಿಕ್ಷೆಯ ತೀರ್ಪನ್ನು ಹಿಂಪಡೆಯುವಂತೆ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ರಾಹುಲ್‌ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಇಂದು ತಿರಸ್ಕರಿಸಿದೆ. ಸ್ಥಳೀಯ ನ್ಯಾಯಾಲಯವು ನೀಡಿದ್ದ ತೀರ್ಪಿನ ಬಳಿಕ ರಾಹುಲ್ ಗಾಂಧಿ ಅವರು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ರಾಹುಲ್‌ ಅವರಿಗೆ ನೀಡಿರುವ ಶಿಕ್ಷೆಯು ‘ನ್ಯಾಯಯುತವಾಗಿದೆ ಹಾಗೂ ಕಾನೂನು ಬದ್ಧವಾಗಿದೆ’ ಎಂದು ಹೈಕೋರ್ಟ್ ಹೇಳಿದೆ.

Setback For Rahul Gandhi In Modi Surname Case- What will be his political future?

ಹೈಕೋರ್ಟ್‌ ತೀರ್ಪಿನ ಬಳಿಕ ರಾಹುಲ್‌ ಗಾಂಧಿ ಅವರು ತಮ್ಮ ಮನವಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ಅವರೀಗ ಅನರ್ಹಗೊಂಡಿರುವ ಕಾರಣ, ಜುಲೈ 20 ರಿಂದ ಪ್ರಾರಂಭವಾಗುವ ಮಾನ್ಸೂನ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ.

ಒಂದು ವೇಳೆ ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿದರೆ, ರಾಹುಲ್ ಗಾಂಧಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.

ಕೇಂಬ್ರಿಡ್ಜ್‌ನಲ್ಲಿ ವೀರ್ ಸಾವರ್ಕರ್ ಕುರಿತು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಗುಜರಾತ್ ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ವರದಿಯಾಗಿದೆ.

Setback For Rahul Gandhi In Modi Surname Case- What will be his political future?

‘ರಾಜಕೀಯದಲ್ಲಿ ಶುದ್ಧತೆ ಬೇಕು. ಕೇಂಬ್ರಿಡ್ಜ್‌ನಲ್ಲಿ ವೀರ್ ಸಾವರ್ಕರ್ ವಿರುದ್ಧ ರಾಹುಲ್‌ ಗಾಂಧಿ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಆ ನಂತರ ಪುಣೆ ಕೋರ್ಟ್‌ನಲ್ಲಿ ವೀರ್ ಸಾವರ್ಕರ್ ಅವರ ಮೊಮ್ಮಗ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದಾರೆ’ ಎಂದು ಗುಜರಾತ್‌ ಹೈಕೋರ್ಟ್ ಉಲ್ಲೇಖಿಸಿದೆ.

ರಾಹುಲ್ ಗಾಂಧಿ ವಿರುದ್ಧ 10 ಪ್ರಕರಣಗಳು ಬಾಕಿ ಉಳಿದಿವೆ. ಅವರು ಯಾವ ಆಧಾರದ ಮೇಲೆ ತಡೆ ಕೋರುತ್ತಿದ್ದಾರೆ? ಎಂದು ನ್ಯಾಯಾಲಯ ಕೇಳಿದೆ.

ಈ ಹಿಂದೆ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆಯನ್ನು ತಡೆಹಿಡಿದಿದ್ದರಿಂದ ರಾಹುಲ್‌ ಗಾಂಧಿ ಜೈಲಿಗೆ ಹೋಗುವ ಸಂಭವವಿಲ್ಲ.

Setback For Rahul Gandhi In Modi Surname Case- What will be his political future?

ಇಂದಿನ ಹೈಕೋರ್ಟ್‌ ತೀರ್ಪು ಲೋಕಸಭೆ ಚುನಾವಣೆ ಸೇರಿದಂತೆ ಮುಂಬರುವ ವಿಧಾನಸಭೆ ಚುನಾವಣೆಗಳ ಮೇಲೆ ಭಾರೀ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಾನೂನಿನಡಿಯಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ವಿಧಿಸಿದರೆ ಯಾವುದೇ ವ್ಯಕ್ತಿ ಸಂಸದ ಸ್ಥಾನದಿಂದ ಅನರ್ಹರಾಗುತ್ತಾರೆ.

ಕೇರಳದ ವಯನಾಡಿನ ಲೋಕಸಭಾ ಸಂಸದರಾಗಿದ್ದ ರಾಹುಲ್‌ ಗಾಂಧಿ ಅವರನ್ನು ಗುಜರಾತ್‌ ಸ್ಥಳೀಯ ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಅನರ್ಹಗೊಳಿಸಲಾಯಿತು.

ಕರ್ನಾಟಕದ ಕೋಲಾರದಲ್ಲಿ ಮೋದಿ ಉಪನಾಮೆಯ ಬಗ್ಗೆ ರಾಹುಲ್‌ ಗಾಂಧಿ ಮಾತನಾಡಿದ್ದರು. 2019 ರಲ್ಲಿ ಮಾಡಿದ ಭಾಷಣದಲ್ಲಿ ಅವರು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇಶ ತೊರೆದು ಓಡಿ ಹೋಗಿರುವ ಶ್ರೀಮಂತ ವ್ಯಾಪಾರಿಗಳಾದ ಲಲಿತ್‌ ಮೋದಿ ಹಾಗೂ ನೀರವ್‌ ಮೋದಿಯನ್ನು ಉಲ್ಲೇಖಿಸಿದ್ದರು.

ಮೋದಿ ಉಪನಾಮೆ ಹೊಂದಿದವರೆಲ್ಲರೂ ಕಳ್ಳರೇ ಏಕಾಗಿರುತ್ತಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.

English summary

Setback For Rahul Gandhi In Modi Surname Case.

Story first published: Friday, July 7, 2023, 12:47 [IST]

Source link