Tv
oi-Srinivasa A
By Poorva
|
ಪುಟ್ಟಕ್ಕನ
ಮಕ್ಕಳು
ಧಾರವಾಹಿ
ಬಹಳ
ಅದ್ಭುತವಾಗಿ
ಮೂಡಿ
ಬರುತ್ತಿದೆ.
ಸ್ನೇಹಾ
ಬಳಿ
ಬಂದ
ಸಹನಾ
ಸ್ನೇಹಾ
ಬಳಿ
ಏನು
ಸ್ನೇಹಾ
ನೀನು
ಈ
ಮದುವೆಯನ್ನು
ಮನಃಪೂರ್ವಕವಾಗಿ
ಒಪ್ಪಿಕೊಂಡಿದ್ದಿಯಾ
ಶ್ರೀ
ಅವರನ್ನು
ಮರೆತು
ನಿನಗೆ
ಬದುಕಲು
ಸಾಧ್ಯನಾ
ಎಂದೆಲ್ಲ
ಪ್ರಶ್ನೆಗಳ
ಮೇಲೆ
ಪ್ರಶ್ನೆ
ಮಾಡುತ್ತಾ
ಇರುವಾಗ
ಸ್ನೇಹಾ
ಏನು
ಹೇಳದೆ
ಸುಮ್ಮನೆ
ಇರುತ್ತಾಳೆ.
ಸಹನಾ
ಮಾತಿಗೆ
ಬೆಲೆ
ಇಲ್ಲ
ಎಂದು
ತಿಳಿದು
ಅಲ್ಲಿಂದ
ಹೊರಡಲು
ಸಿದ್ದ
ಆಗುತ್ತಾಳೆ.
ಆಗ
ಸಹನಳನ್ನು
ಸ್ನೇಹಾ
ತಡೆಯುತ್ತಾಳೆ.
ಬಳಿಕ
ತನ್ನ
ಮನದಲ್ಲಿ
ಇರುವ
ಶ್ರೀ
ಬಗೆಗಿನ
ಪ್ರೀತಿಯನ್ನು
ಹೇಳುತ್ತಾಳೆ.
ಹಾಗೆಯೇ
ಜೋರಾಗಿ
ಅಳುತ್ತಾಳೆ.

ಸಹನಾಗೆ
ಗೊತ್ತಿದೆ
ಇದಕ್ಕೆಲ್ಲ
ಬಂಗಾರಮ್ಮ
ಹಾಗೆಯೇ
ಅಮ್ಮ
ಕಾರಣ
ಎಂದು.
ಸ್ನೇಹಾ
ಬಳಿ
ತನ್ನ
ಮದುವೆಗೆ
ನಡೆದ
ವಿಚಾರವನ್ನು
ಹೇಳುತ್ತಾಳೆ.
ಇದನ್ನು
ಕೇಳಿದ
ಸ್ನೇಹಾ
ಮಾತ್ರ
ಅಕ್ಕನ
ಬಳಿ
ಯಾರಿಗೂ
ಏನೂ
ಹೇಳದಂತೆ
ತಡೆಯುತ್ತಾಳೆ.
ಇನ್ನು
ಸುಮಾ
ಅಕ್ಕನ
ಮದುವೆ
ನಡೆಯದಂತೆ
ಕಸರತ್ತು
ನಡೆಸುತ್ತಾಳೆ.
ಕಾಳೀ
ಬಳಿ
ಎಲ್ಲಾ
ಭುವನ್‌ಗೆ
ಹೇಳಿದರೂ
ಆತ
ಮಾತ್ರ
ಇದ್ಯಾವುದನ್ನೂ
ನಂಬದೆ
ಇರುತ್ತಾನೆ.
ಇನ್ನು
ಮದುವೆ
ಮುರಿಯಲು
ರಾಜಿ
ಸಂಚು
ರೂಪಿಸುತ್ತಾ
ಇರುತ್ತಾಳೆ
ಭುವನ್
ತಂದೆ
ತಾಯಿಯನ್ನು
ಹುಡುಕುತ್ತಾ
ಇರುತ್ತಾಳೆ.
ಕೊನೆಗೆ
ಭುವನ್
ತಂದೆ
ತಾಯಿ
ರಾಜೀ
ಕೈಗೆ
ಸಿಗುತ್ತಾರೆ.
ಭುವನ್
ತಂದೆ
ತಾಯಿ
ಬಳಿ
ರಾಜಿ
ಎಲ್ಲಾ
ವಿಚಾರವನ್ನು
ಹೇಳುತ್ತಾಳೆ.
ಇದನ್ನು
ಕೇಳಿದ
ಭುವನ್
ತಂದೆ
ತಾಯಿಗೆ
ಕೊಂಚ
ಭಯ
ಆಗುತ್ತದೆ.
ಆಗ
ಗೋಪಾಲ
ಅಲ್ಲಿಗೆ
ಬಂದು
ರಾಜಿಯನ್ನು
ಕರೆದುಕೊಂಡು
ಹೋಗುತ್ತಾನೆ.
ಪುರೋಹಿತರು
ಆಗಲೇ
ಗಂಡು
ಹೆಣ್ಣನ್ನು
ದೇವಾಲಯಕ್ಕೆ
ಕರೆದುಕೊಂಡು
ಹೋಗುವಂತೆ
ಹೇಳುತ್ತಾರೆ.
ಇನ್ನು
ಪುರೋಹಿತರು
ಹೇಳಿದಂತೆ
ದೇವಾಲಯಕ್ಕೆ
ಗಂಡು
ಹೆಣ್ಣು
ಹೋಗುತ್ತಾರೆ.
ಆಗ
ಅಲ್ಲಿಗೆ
ಶ್ರೀಯೂ
ಬರುತ್ತಾನೆ.
ಶ್ರೀಯನ್ನು
ನೋಡಿದ
ಸ್ನೇಹಾಗೆ
ಮನದಲ್ಲಿ
ಖುಷಿ
ಆದರೂ
ಅದನ್ನು
ಯಾರ
ಎದುರು
ತೋರ್ಪಡಿಸದೆ
ಇರುತ್ತಾಳೆ.
ಇದನ್ನು
ನೋಡಿದ
ಕಂಠಿ
ಬಹಳ
ಬೇಸರದಿಂದ
ಆಕೆಯನ್ನು
ನೋಡುತ್ತಾ
ಇರುತ್ತಾನೆ.
ಆಗಲೇ
ಅಲ್ಲಿ
ನಿಂತಿದ್ದ
ಭುವನ್
ತಾಯಿ
ಸ್ನೇಹಾ
ಮೇಲೆ
ಅನುಮಾನಪಡುವುದು
ಯಾಕೆ
ಅದು
ಸರಿಯಲ್ಲ
ಎಂದು
ಯೋಚನೆ
ಮಾಡುತ್ತಾ
ಇರುತ್ತಾರೆ.
ಇನ್ನು
ಅದೆಲ್ಲ
ಆದ
ಬಳಿಕ
ಸುಮಾ
ಸಹನಳನ್ನು
ಕರೆಯುತ್ತಾಳೆ.
ಬಳಿಕ
ಸರಿಯಾಗಿ
ಮಾತನಾಡಿದ್ದಿಯಾ
ಯಾಕೆ
ಮದುವೆ
ನಿಲ್ಲುತ್ತಿಲ್ಲ
ಎಂದೆಲ್ಲ
ಅಕ್ಕನ
ಬಳಿ
ಹೇಳುತ್ತ
ಇರುವಾಗ
ಅಲ್ಲಿಗೆ
ಬಂದ
ಪುರುಷೋತ್ತಮ
ನಡೆದ
ವಿಚಾರ
ಹೇಳುತ್ತಾನೆ.
ಇನ್ನು
ಕಂಠಿ
ಮದುವೆ
ಅದ್ಧೂರಿಯಾಗಿ
ನಡೆಯುತ್ತಾ
ಇದೆ.
ಮದುವೆ
ಮನೆಗೆ
ನೂರಾರು
ಜನ
ಆಗಮಿಸುತ್ತಾ
ಇರುತ್ತಾರೆ.
ಬಂಗಾರಮ್ಮ
ಬಹಳ
ಖುಷಿ
ಪಡುತ್ತಾ
ಇರುತ್ತಾರೆ.
ಕಂಠಿ
ಹಾಗೂ
ರಾಧಾ
ಮದುವೆ
ನಡೆಯಲು
ಕೆಲವೇ
ಕ್ಷಣಗಳು
ಮಾತ್ರ
ಉಳಿದಿದ್ದವು.
ಆದರೆ
ತಾಳಿ
ಕಟ್ಟುವ
ಸಮಯದಲ್ಲಿ
ರಾಧಾ
ಕಾಣಿಸಿ
ಕೊಳ್ಳದೆ
ಇರುವುದು
ಮಾತ್ರ
ಬಹಳ
ಬೇಸರ
ತರಿಸಿದೆ.
English summary
Kannada serial puttakkana makkalu written updated on 20th june
Tuesday, June 20, 2023, 23:11
Story first published: Tuesday, June 20, 2023, 23:11 [IST]