Post Office Jobs 2023: 8ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ, ಕೈತುಂಬ ಸಂಬಳ, ಅರ್ಜಿ ಹಾಕಿ | Post Office Recruitment 2023: Central Govt Jobs, Invites Applications 5 Posts By Eligible

Jobs

oi-Shankrappa Parangi

|

Google Oneindia Kannada News

ಬೆಂಗಳೂರು, ಜುಲೈ 19: ಭಾರತೀಯ ಅಂಚೆ ಇಲಾಖೆ (IPD) ತನ್ನಲ್ಲಿ ಖಾಲಿ ಇರುವ ವಿವಿದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಕೆಲಸ ಹುಡುತ್ತಿರುವವರಿಗೆ ಕೈ ತುಂಬ ಸಂಬಳದ ಕೆಲಸಕ್ಕೆ ಆಗಸ್ಟ್ 5 ರೊಳಗೆ ಅರ್ಜಿ ಸಲ್ಲಿಸಬೇಕಿದೆ.

ಭಾರತೀಯ ಅಂಚೆ ಇಲಾಖೆ (IPD) ಯಲ್ಲಿ ಒಟ್ಟು 5 ನುರಿತ ಕುಶಲಕರ್ಮಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಆಫ್​ಲೈನ್​ ಮೂಲಕ ಇಲ್ಲವೇ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗಕಾಶದ ಲಾಭ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

Post Office Recruitment 2023: Central Govt Jobs, Invites Applications 5 Posts By Eligible

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಗಳ ವಿವಿರ, ವೇತನ, ವಯೋಮಿತಿ, ಶೈಕ್ಷಣಿಕ ಅರ್ಹತೆ ಕುರಿತು ಪೂರ್ಣ ಮಾಹಿತಿ ಇಲ್ಲಿ ತಿಳಿಯಬಹುದು.

ಹುದ್ದೆ ವಿವಿರ

ಸಂಸ್ಥೆ – ಭಾರತೀಯ ಅಂಚೆ ಕಚೇರಿ

ಖಾಲಿ ಹುದ್ದೆ- 05

ಮೋಟಾರ್ ವೆಹಿಕಲ್ ಮೆಕ್ಯಾನಿಕ್- 2

ಮೋಟಾರ್ ವೆಹಿಕಲ್ ಎಲೆಕ್ಟ್ರಿಷಿಯನ್- 1

ಪೇಂಟರ್- 1

ಟೈಯರ್​ ಮ್ಯಾನ್-1

ಅರ್ಜಿ ಸಲ್ಲಿಕೆ ಕಡೆ ದಿನ – 63,000

ಉದ್ಯೋಗ ಸ್ಥಳ- ಬೆಂಗಳೂರು

ಶೈಕ್ಷಣಿಕ ಅರ್ಹತೆ

ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಉತ್ತೀರ್ಣವಾಗಿರಬೇಕು ಎಂದು ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದೆ.

Post Office Recruitment 2023: Central Govt Jobs, Invites Applications 5 Posts By Eligible

ವಯೋಮಿತಿ ಮತ್ತು ಸಡಿಲಿಕೆ

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 2023 ಜುಲೈ 1ಕ್ಕೆ ಕನಿಷ್ಠ 18 ವರ್ಷ ಮತ್ತು 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳು- 3 ವರ್ಷ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.

ವೇತನ ಮಾಹಿತಿ ಮತ್ತು ಉದ್ಯೋಗ

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900 ರೂಪಾಯಿಯಿಂದ 63,200 ವೇತನ ಕೊಡಲಾಗುವುದು ಎಂದು ತಿಳಿಸಿದೆ.

ಆಯ್ಕೆ ಹೇಗೆ?

ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಮತ್ತು ಡ್ರೈವಿಂಗ್ ಲೈಸೆನ್ಸ್​, ಟ್ರೇಡ್ ಟೆಸ್ಟ್ ನೋಡಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಜುಲೈ 15ರಂದು ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 5ರಂದು ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.

ಅರ್ಜಿ ಹಾಕೋದು ಹೇಗೆ?

ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ”ವ್ಯವಸ್ಥಾಪಕರು,

ಮೇಲ್ ಮೋಟಾರ್ ಸೇವೆ, ನಂ.4, ಬಸವೇಶ್ವರ ರಸ್ತೆ, ವಸಂತ ನಗರ ಬೆಂಗಳೂರು-560001, ಇಲ್ಲಿಗೆ ಸಲ್ಲಿಸುವಂತೆ ಕೋರಲಾಗಿದೆ.

English summary

Post Office Recruitment 2023: Central Government Jobs, invites applications 5 posts by Eligible.

Story first published: Wednesday, July 19, 2023, 14:26 [IST]

Source link