PM Modi US Visit: ಐತಿಹಾಸಿಕ ಭೇಟಿಯಿಂದ ಭಾರತಕ್ಕೆ ಆಗುವ ಲಾಭವೇನು? ಮಹತ್ವದ ಒಪ್ಪಂದಗಳು ಯಾವುವು? ತಿಳಿಯಿರಿ | PM Modi USA Visit June 2023: Biden and Modi to Ink Major Defence and Critical Tech Projects

International

oi-Ravindra Gangal

|

Google Oneindia Kannada News

ನವದೆಹಲಿ/ವಾಷಿಂಗ್ಟನ್, ಜೂನ್ 19: ಪ್ರಧಾನಿ ಮೋದಿ ಅವರು ಇಂದು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ರಕ್ಷಣಾ ಉದ್ಯಮದಲ್ಲಿ ಸಹಕಾರ ಮತ್ತು ಉನ್ನತ ತಂತ್ರಜ್ಞಾನಗಳನ್ನು ಗಮನದಲ್ಲಿಟ್ಟುಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯನ್ನು ಪ್ರಧಾನಿ ಇರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮೆರಿಕದ ತಂತ್ರಜ್ಞಾನವನ್ನು ಭಾರತದಲ್ಲಿ ಹೆಚ್ಚು ಅನುಷ್ಠಾನಗೊಳಸಲು ಈ ಭೇಟಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಕೇವಲ ಜಾಗತಿಕ ರಾಜಕೀಯ ಮಾತ್ರವಲ್ಲದೆ ವ್ಯಾಪಾರ ಮತ್ತು ಅರ್ಥಶಾಸ್ತ್ರದ ದಿಕ್ಕಿನಲ್ಲಿಯೂ ಹೊಸ ಬಾಂಧವ್ಯವನ್ನು ಬಲಪಡಿಸಲಿದೆ ಎಂದು ಹೇಳಲಾಗುತ್ತಿದೆ.

PM Modi USA Visit June 2023

ಉದಯೋನ್ಮುಖ ಏಷ್ಯಾದ ಆರ್ಥಿಕತೆಯೊಂದಿಗೆ ಬಲವಾದ ಸಂಬಂಧಗಳನ್ನು ಬೆಳೆಸಲು ಅಮೆರಿಕ ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಿಂದ ಅಮೆರಿಕ ಹಾಗೂ ಭಾರತದ ಬಾಂಧವ್ಯ ಗಟ್ಟಿಯಾಗುತ್ತಲೇ ಸಾಗಿದೆ.

ವಿಶ್ವಾದ್ಯಂತ ಚೀನಾದ ಪ್ರಭಾವವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಮೆರಿಕ ಕೆಲಸ ಮಾಡುತ್ತಿದೆ. ಇಂಡೋ-ಪೆಸಿಫಿಕ್‌ನಲ್ಲಿ ಭದ್ರತೆಯನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿ ಭಾರತವನ್ನು ಪ್ರಮುಖ ಪಾಲುದಾರನಾಗಿ ಅಮೆರಿಕ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಭಾರತದ ಸಹಕಾರವನ್ನು ಬಯಸುತ್ತಿದೆ.

PM Modi US Visit: ಅಮೆರಿಕಾ ರೆಸ್ಟೋರೆಂಟ್‌ನಲ್ಲಿ 'ಮೋದಿ ಜೀ ಥಾಲಿ' ಹೆಸರಿನ ಭಾರತೀಯ ಆಹಾರ ಸಿದ್ಧ!PM Modi US Visit: ಅಮೆರಿಕಾ ರೆಸ್ಟೋರೆಂಟ್‌ನಲ್ಲಿ ‘ಮೋದಿ ಜೀ ಥಾಲಿ’ ಹೆಸರಿನ ಭಾರತೀಯ ಆಹಾರ ಸಿದ್ಧ!

ಇಷ್ಟೇ ಅಲ್ಲದೇ, ಸಾಂಪ್ರದಾಯಿಕ ರಕ್ಷಣಾ ಪಾಲುದಾರ ದೇಶವಾಗಿರುವ ರಷ್ಯಾದಿಂದ ಭಾರತವನ್ನು ದೂರ ಮಾಡಲು ಅಮೆರಿಕ ಬಯಸಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಪಾಲುದಾರನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.

PM Modi USA Visit June 2023

‘ಇದು ನಮ್ಮ ಸಂಬಂಧದಲ್ಲಿ ಒಂದು ಮೈಲಿಗಲ್ಲು. ಇದು ಬಹಳ ಮಹತ್ವದ ಭೇಟಿ, ಬಹಳ ಮುಖ್ಯವಾದ ಭೇಟಿ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಭೇಟಿಯು ರಕ್ಷಣಾ ಸಹಕಾರದ ಕ್ಷೇತ್ರದಲ್ಲಿ ಬಹುಪ್ರಮುಖ ಪಾತ್ರವನ್ನು ವಹಿಸಲಿದೆ. ಭಾರತವು ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಉತ್ಪಾದಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಅಮೆರಿಕ ಸಹಕಾರಿಯಾಗಲಿದೆ ಎಂದು ಕ್ವಾತ್ರಾ ಹೇಳಿದರು.

ಪ್ರಮುಖ ಒಪ್ಪಂದಗಳೇನು?

ಮೋದಿಯವರ ಭೇಟಿಯ ಸಮಯದಲ್ಲಿ ಪ್ರಮುಖ ಒಪ್ಪಂದಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ದೇಶೀಯವಾಗಿ ಉತ್ಪಾದಿಸುವ ಯುದ್ಧವಿಮಾನಗಳಿಗಾಗಿ ಭಾರತದಲ್ಲಿ ಎಂಜಿನ್‌ಗಳನ್ನು ತಯಾರಿಸಲು ಯುಎಸ್‌ ಅನುಮೋದನೆ ನೀಡಬಹುದು. 3 ಬಿಲಿಯನ್ ಡಾಲರ್‌ ಮೌಲ್ಯದ ಜನರಲ್ ಅಟಾಮಿಕ್ಸ್‌ನಿಂದ ತಯಾರಿಸಲ್ಪಟ್ಟ 31 ಸಶಸ್ತ್ರ MQ-9B ಸೀಗಾರ್ಡಿಯನ್ ಡ್ರೋನ್‌ಗಳನ್ನು ಭಾರತವು ಖರೀದಿಸುವು ಒಪ್ಪಂದ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

PM Modi USA Visit June 2023

‘ಪ್ರಧಾನಿ ಮೋದಿಯವರ ಈ ಭೇಟಿಯನ್ನು ಜನರು ಹಿಂತಿರುಗಿ ನೋಡುತ್ತಾರೆ. ಇದು ಯುಎಸ್-ಭಾರತ ಸಂಬಂಧಕ್ಕೆ ನಿಜವಾದ ಸ್ಪ್ರಿಂಗ್‌ಬೋರ್ಡ್‌ನಂತೆ. ಇದು ರಕ್ಷಣೆ ಕ್ಷೇತ್ರದಲ್ಲಿನ ನಿರ್ದಿಷ್ಟ ಸಮಸ್ಯೆಗಳಿಗೆ ಸಂಬಂಧಿಸಿದ ಭೇಟಿಯಾಗಿದೆ’ ಎಂದು ಇಂಡೋ-ಪೆಸಿಫಿಕ್ ವ್ಯವಹಾರಗಳ ರಕ್ಷಣಾ ಸಹಾಯಕ ಕಾರ್ಯದರ್ಶಿ ಎಲಿ ರಾಟ್ನರ್ ಹೇಳಿದ್ದಾರೆ.

ತನ್ನದೇ ಆದ ಹಿತಾಸಕ್ತಿಗಳನ್ನು ರಕ್ಷಿಸಬಲ್ಲ ಮತ್ತು ಪ್ರಾದೇಶಿಕ ಭದ್ರತೆಗೆ ಕೊಡುಗೆ ನೀಡಬಲ್ಲ ಬಲಿಷ್ಠ ಭಾರತವು ಯುನೈಟೆಡ್ ಸ್ಟೇಟ್ಸ್‌ಗೆ ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.

ಸೆಮಿಕಂಡಕ್ಟರ್‌ಗಳು, ಸೈಬರ್‌ಸ್ಪೇಸ್, ಏರೋಸ್ಪೇಸ್, ಕಾರ್ಯತಂತ್ರದ ಮೂಲಸೌಕರ್ಯ ಮತ್ತು ಸಂವಹನ, ವಾಣಿಜ್ಯ ಬಾಹ್ಯಾಕಾಶ ಯೋಜನೆಗಳು, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೈಗಾರಿಕಾ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಬಗ್ಗೆಯೂ ಸಹ ಚರ್ಚಿಸಲಾಗುವುದು ಎಂದು ಭಾರತೀಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary

PM Modi USA Visit June 2023: PM Modi to sign the significant defence deal in the USA to buy hi-tech drones, Jet Engines and other defence equipment | Know More at Oneindia Kannada

Source link