PM Modi Travel in Metro: ದೆಹಲಿ ವಿವಿ ಶತಮಾನೋತ್ಸವದಲ್ಲಿ ಮೋದಿ ಭಾಗಿ, ಮೋದಿ ಮೆಟ್ರೋ ಸಂಚಾರ ಪೂರ್ಣ ಮಾಹಿತಿ ಇಲ್ಲಿದೆ | PM Narendra Modi Today Attend Delhi Univercity Centenary Function PM Modi Metro Ride Commuters

India

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 30: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲೆಂದು ಮೆಟ್ರೋದಲ್ಲಿ ಸಹಪ್ರಯಾಣಿಕರೊಂದಿಗೆ ಸಂಚರಿಸಿದರು. ಜನರೊಂದಿಗೆ ಮೆಟ್ರೋದಲ್ಲಿ ಪ್ರಧಾನಿಯೊಬ್ಬರ ಓಡಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾಕಷ್ಟು ಚರ್ಚೆಗಳು ಆಗುತ್ತಿವೆ. ಸ್ವತಃ ಪ್ರಧಾನಿ ಮೋದಿಯವರೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಶುಕ್ರವಾರ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆ ಸಮಾರೋಪ ಸಮಾರಂಭ ನಡೆಯಲಿದೆ. ಅಲ್ಲಿ ಪ್ರಧಾನಮಂತ್ರಿ ಮೋದಿಯವರು ನೂತನ ಮೂರು ಕಟ್ಟಡಗಳ ಶಂಕುಸ್ಥಾಪನೆ ನೇರವೇರಿಸುವ ಜೊತೆಗೆ ಕಾಫಿ ಟೇಬಲ್ ಪುಸ್ತಕಗಳ ಸೆಟ್ ಬಿಡುಗಡೆಗೊಳಿಸಿದರು.

PM Narendra Modi Today Attend Delhi Univercity Centenary Function PM Modi Metro Ride Commuters

ಪ್ರಧಾನಿ ಮೆಟ್ರೋ ಪ್ರಯಾಣದ ವಿಡಿಯೋ ಹಂಚಿಕೊಂಡ ಬಿಜೆಪಿ

ಪ್ರಧಾನಿ ಮೋದಿಯವರು ಮೆಟ್ರೋದಲ್ಲಿ ಸಂಚರಿಸಿದ್ದಕ್ಕೆ ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತೀಯ ಜನತಾ ಪಕ್ಷದ (BJP) ಟ್ವಿಟರ್ ಖಾತೆಯಲ್ಲಿ ಸೂಕ್ತ ಬಿಗಿ ಭದ್ರತೆಯ ನಡುವೆ ಮೆಟ್ರೋ ಆವರಣಕ್ಕೆ ಪ್ರವೇಶಿಸಿ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುತ್ತಿರುವ ಪ್ರಧಾನಿ ಮೋದಿ ವಿಡಿಯೋ ಹಂಚಿಕೊಳ್ಳಲಾಗಿದೆ.

ನರೇಂದ್ರ ಮೋದಿಯವರು ಬೆಳಗ್ಗೆ ಮೆಟ್ರೋ ಹಳದಿ ರೇಖೆಯ (Metro Yellow Line) ಸಮಯಪುರ್ ಬದ್ಲಿ ನಿಲ್ದಾಣದ ಕಡೆಗೆ ಹೋಗುವ ಮೆಟ್ರೋ ರೈಲು ಏರಿದರು. ಅಲ್ಲಿಂದ ಅವರು ದೆಹಲಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಹತ್ತಿರವಾದ ವಿಶ್ವವಿದ್ಯಾಲಯ ಮೆಟ್ರೋ ನಿಲ್ದಾಣ ತಲುಪಿದರು.

PM Narendra Modi Today Attend Delhi Univercity Centenary Function PM Modi Metro Ride Commuters

ಮೆಟ್ರೋ ಸಂಚಾರದ ವೀಡಿಯೊ ನೋಡುವುದಾದರೆ, ಅದರಲ್ಲಿ ಮೊದಲು ಪ್ರಧಾನಿಗಳು ಮೆಟ್ರೋ ಕಂಪಾರ್ಟ್‌ಮೆಂಟ್‌ಗೆ ಹತ್ತುವುದು ಕಾಣುತ್ತದೆ. ನಂತರ ಅವರು ಮೆಟ್ರೋದಲ್ಲಿ ಸಹಪ್ರಯಾಣಿಕರೊಂದಿಗೆ ಮಾತನಾಡುವ ದೇಶ್ಯಗಳು ಸಾಮಾನ್ಯ ಎಂಬಂತಿದೆ. ಪ್ರಧಾನಿ ಮೋದಿ ಅವರೊಂದಿಗಿನ ಪ್ರಯಾಣದ ಖಷಿಯನ್ನು ಯುವ ಪ್ರಯಾಣಿಕರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಮೆಟ್ರೋ ಪ್ರಯಾಣದ ಬಗ್ಗೆ ಪ್ರಧಾನಿ ಹೇಳಿದ್ದು ಹೀಗೆ

ದೆಹಲಿ ವಿಶ್ವವಿದ್ಯಾಲಯ ಸಮಾರಂಭದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, ಸಹ ಪ್ರಯಾಣಿಕರ ಜತೆಯಲ್ಲಿ ಹೀಗೆ ಮೆಟ್ರೋದಲ್ಲಿ ಪ್ರಯಾಣಿಸುವುದು, ಅವರೊಂದಿಗೆ ಹೀಗೆ ಕ್ಯಾಂಪಸ್‌ಗೆ ಬರುವುದು ಖಷಿ ತಂದಿದೆ. ಇಬ್ಬರು ಸ್ನೇಹಿತರು ಒಟ್ಟಿಗೆ ಕೂತು ಸೂರ್ಯ-ಚಂದ್ರರ ವಿಚಾರಗಳಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ, ತಾವು ನೋಡಿದ ಸಿನಿಮಾ, ಓಟಿಟಿ ವೇದಿಕೆ, ಸಾಮಾಜಿಕ ಜಾಲತಾಣಗಳ ಬಗ್ಗೆಯೂ ಮಾತನಾಡಿಕೊಂಡರು. ಇದೆಲ್ಲರ ಅನುಭವ ಹೊಂದಲು ನಾನು ಕಾರ್ಯಕ್ರಮಕ್ಕೆ ಬರಲು ಮೆಟ್ರೋ ಮಾರ್ಗ ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದರು.

ಇದಕ್ಕು ಮೊದಲೇ ಗುರುವಾರವೇ ವಿಶ್ವವಿದ್ಯಾಲಯ ಮತ್ತು ಮೆಟ್ರೋ ಪ್ರಯಾಣ ಬಗ್ಗೆ ಅವರು ಟ್ವೀಟ್ ಮಾಡಿದ್ದರು. 100 ವರ್ಷಗಳನ್ನು ಪೂರೈಸಿದ ಪ್ರಮುಖ ಕೇಂದ್ರೀಯ ವಿಶ್ವವಿದ್ಯಾನಿಲಯದ ಸೇವಾ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ನಾಳೆ ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾತರನಾಗಿದ್ದೇನೆ ಎಂದು ತಿಳಿಸಿದ್ದರು.

ವಿಶ್ವವಿದ್ಯಾಲಯ ಕಾರ್ಯ ಒಂದು ಮೈಲಿಗಲ್ಲು

ಕಲಿಕೆಯ ಪ್ರಮುಖ ಕೇಂದ್ರವಾಗಿರುವ ದೆಹಲಿ ವಿಶ್ವವಿದ್ಯಾಲವಯರು ಒಂದು ಶತಮಾನದವರೆಗೆ ಅನೇಕ ಪ್ರತಿಭೇಗಳನ್ನು ಫೋಷಿಸಿಕೊಂಡು ಬಂದಿದೆ. ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿಕೊಡುತ್ತಾ ಬಂದಿದ್ದು, ಇದೊಂದು ಮೈಲಿಗಲ್ಲು ಎಂದು ಕಾರ್ಯಕ್ರಮದಲ್ಲಿ ಅವರು ಹೊಗಳಿದರು.

ಜೊತೆಗೆ ದೆಹಲಿ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೆಂಟರ್ ಮತ್ತು ತಂತ್ರಜ್ಞಾನ ವಿಭಾಗದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್‌ನಲ್ಲಿ ನಿರ್ಮಿಸಲಿರುವ ಶೈಕ್ಷಣಿಕ ಬ್ಲಾಕ್‌ ಸ್ಥಾಪನೆಗೆ ಅವರು ಚಾಲನೆ ನೀಡಿದರು.

English summary

PM Narendra Modi Today Attend Delhi Univercity Centenary Function PM Modi MetroRide Commuters.

Story first published: Friday, June 30, 2023, 13:49 [IST]

Source link