International
oi-Shankrappa Parangi
ಬೆಂಗಳೂರು, ಜೂನ್ 21: ಭಾರತವು ಅಮೆರಿಕಾದಂತೆ ಪ್ರಬಲ ಪ್ರಜಾಪ್ರಭುತ್ವವಾಗಿದ್ದು, ಉಭಯ ದೇಶಗಳು ತಮ್ಮ ಸಂಬಂಧವನ್ನು ಮುಂದುವರೆಸಲಿದ್ದು, ಇದಕ್ಕೆ ಪೂರಕವಾಗಿ ಆಹ್ವಾನದ ಮೇರೆಗೆ ಅಮೆರಿಕಾ ಶ್ವೇತಭವನಕ್ಕೆ ಆಗಮಿಸಿದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಜೋ ಬೈಡನ್ ಆದರಿಂದ ಸ್ವಾಗತಿಸಿದರು.
ಭಾರತವು ವಿರೋಧಿ ಚೀನಾಕ್ಕೆ ವ್ಯೂಹಾತ್ಮಕ ಪ್ರತಿತಂತ್ರ ಆಗಬೇಕೆಂದು ವಾಷಿಂಗ್ಟನ್ ಬಯಸುತ್ತಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ದೇಶವು ವಿಶ್ವ ವೇದಿಕೆಯಲ್ಲಿ ಹೊಂದಿರುವ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನದಲ್ಲಿದ್ದಾರೆ.
ಜೋ ಬೈಡೆನ್ ಮತ್ತು ಪ್ರಧಾನಿ ಮೋದಿ ಅವರು ರಕ್ಷಣಾತ್ಮವಾದ ಸಹಕಾರ ಮತ್ತು ಮಾರಾಟ, ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಮೈಕ್ರೋನ್ ಟೆಕ್ನಾಲಜಿ ಇನ್ನಿತರ ಯುಎಸ್ ಕಂಪನಿಗಳಿಂದ ಭಾರತದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಹವಲು ಒಪ್ಪಂದಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಮೆರಿಕಾ ಅಧ್ಯಕ್ಷರು ಮೋದಿ ಬೇಟಿ ವೇಳೆ ಭಾರತದಲ್ಲಿ ಪ್ರಜಾಸತ್ತಾತ್ಮಕ ಹಿನ್ನಡೆ ಕುರಿತು ಪ್ರಸ್ತಾಪಿಸುವ ನಿರೀಕ್ಷೆ ಇದೆ. ಆದರೆ ಜೋ ಈ ವಿಚಾರದ ಬಗ್ಗೆ ಪ್ರಧಾನಿ ಮೋದಿಯವರಿಗೆ ಮೋದಿಗೆ ಉಪನ್ಯಾಸ ನೀಡುವುದಿಲ್ಲ, ಆ ಬಗ್ಗೆ ಪ್ರಸ್ತಾಪಿಸುವುದಿಲ್ಲ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮಾಹಿತಿ ನೀಡಿದ್ದಾರೆ.
ಪತ್ರಿಕಾ, ಧಾರ್ಮಿಕ ಸೇರಿದಂತೆ ಮತ್ತಿತರ ಸ್ವಾತಂತ್ರ್ಯಗಳಿಗೆ ಅಮೆರಿಕಾಗೆ ಇರುವ ಸವಾಲುಗಳ ಕುರಿತು ಅಭಿಪ್ರಾಯ ತಿಳಿಸಲಾಗುವುದು ಎಂದು ಸುಲ್ಲಿವಾನ್ ಹೇಳಿದರು. ಭಾರತದಲ್ಲಿ ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಎದ್ದಿರುವ ಕೆಲವು ಪ್ರಶ್ನೆಗಳಿಗೆ ಭಾರತದೊಳಗೆ ಭಾರತೀಯರಿಂದ ನಿರ್ಧರಿಸಲ್ಪಡುತ್ತದೆ ಹೊರತು ಯುಎಸ್‌ನಿಂದ ಅಲ್ಲ ಎಂದು ಸುಲ್ಲಿವಾನ್ ತಿಳಿಸಿದರು.
ರಾಜತಾಂತ್ರಿಕತೆಗೆ ಪೂರಕ ಮೋದಿಯ US ಬೇಟಿ
ಭಾರತದಲ್ಲಿ 2014 ರಲ್ಲಿ ಆಡಳಿತಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಂದ ಈವರೆಗೆ ಅಮೆರಿಕಾಗೆ 05 ಬಾರಿ ಬೇಟಿ ಕೊಟ್ಟಿದ್ದಾರೆ. ಹೀಗಿದ್ದರೂ ಪ್ರಸ್ತುತ ಬೇಟಿ ವಿಶೇಷ ಪಡೆದಿದೆ. ಹಿಂದೂ ರಾಷ್ಟ್ರೀಯವಾದಿ ಭಾರತೀಯರಲ್ಲಿ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿ, ಆ ಕುರಿತು ಕಳವಳದ ಮಧ್ಯೆಯು ಪ್ರಧಾನಿ ಭೇಟಿ ರಾಜತಾಂತ್ರಿಕತೆ, ವಿಶ್ವಮಟ್ಟದ ಭಾರತದ ಸ್ಥಾನಮಾನಗಳು ಇನ್ನಷ್ಟು ಗಟ್ಟಿಕೊಳ್ಳಲಿವೆ.
ಮಂಗಳವಾರ ಪ್ರಧಾನಿ ಮೋದಿ ನ್ಯೂಯಾರ್ಕ್‌ನ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಿ ಮಾತುಕತಡೆ ನಡೆಸಿದರು. ಬಳಿಕ 9ನೇ ಅಂತಾರಾಷ್ಟ್ರೀಯ ಯೋಗದಲ್ಲಿ ಪಾಲ್ಗೊಂಡರು. ಶುಕ್ರವಾರ ಅವರನ್ನು ಅಮೆರಿಕದ ಸಿಇಒಗಳು ಸ್ವಾಗತಿಸುಸಿ ಕೆಲ ಮಾತುಕತೆ ನಡೆಸಲಿದ್ದಾರೆ.
ಚೀನಾ ವಿರುದ್ಧ ನಿಲ್ಲಲು ಉಭಯ ನಾಯಕರ ಯತ್ನ
ಯುಎಸ್‌ನ ಬೈಡೆನ್ ಮತ್ತು ಭಾರತದ ಮೋದಿ ಇಬ್ಬರೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಅದರಾಚೆಗಿ ಚೀನಾ ವಿರುದ್ಧ ಪ್ರಬಲವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸದ್ಯದ ಪ್ರಧಾನಿ ಯುಎಸ್ ಬೇಟಿ ಚೀನಾದ ವಿರುದ್ಧಕ್ಕಾಗಿ ಅಲ್ಲ ಎಂದು ಶ್ವೇತಭವನ ತಿಳಿಸಿದೆ.
ಮೋದಿ ಅವರು ಬುಧವಾರ ಪ್ರಥಮ ಮಹಿಳೆ ಜೋ ಬೈಡನ್ ಪತ್ನಿ ಜಿಲ್ ಬೈಡನ್ ಅವರೊಂದಿಗೆ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ ಶ್ವೇತಭವನದಲ್ಲಿ ಅಧ್ಯಕ್ಷರೊಂದಿಗೆ ಖಾಸಗಿ ಭೋಜನ ಸೇವಿಸಲಿದ್ದಾರೆ.
ಇನ್ನು ಗುರುವಾರ ಶ್ವೇತಭವನದ ಸೌತ್ ಲಾನ್‌ನಲ್ಲಿ ವರ್ಣರಂಜಿತ ಸಮಾರಂಭದಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ನಂತರ ಬೈಡನ್ ಮತ್ತು ಮೋದಿ ಅವರು ಓವಲ್ ಕಚೇರಿಯಲ್ಲಿ ಮಾತುಕತೆ ನಡೆಸಲಿದ್ದಾರೆ.
English summary
PM Narendra Modi US Visit: America president will not lecture to Narendra Modi about Human Rights, says White House.
Story first published: Wednesday, June 21, 2023, 20:42 [IST]