India
oi-Shankrappa Parangi
ನವದೆಹಲಿ, ಜುಲೈ 21: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ 14 ನೇ ಕಂತಿಗೆ ರೈತರು ಕಾಯುತ್ತಿದ್ದಾರೆ. ಈ ಹಣವು ಮುಂದಿನ ವಾರ ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಪಿಎಂ ಕಿಸಾನ್ 14ನೇ ಕಂತು ಜುಲೈ 27 ರಂದು ಪಿಎಂ ಕಿಸಾನ್‌ನ ಸರಿಸುಮಾರು 8.5 ಕೋಟಿ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತನ್ನು ಪ್ರಧಾನಿ ಮೋದಿ ವಿತರಿಸಲಿದ್ದಾರೆ ಎಂದು ಸರ್ಕಾರಿ ವೆಬ್‌ಸೈಟ್ ಮಾಹಿತಿ ನೀಡಿದೆ. ಮೂಲಕ ಕರ್ನಾಟಕ ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿನ ಬರಗಾಲ, ಅತೀ ವೃಷ್ಠಿಯಿಂದ ತತ್ತರಿಸಿರುವ ರೈತರಿಗೆ ಹಣ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ.
ಜುಲೈ 27 ರಂದು ರಾಜಸ್ತಾನದ ಸಿಕರ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರು ಅರ್ಹ ಫಲಾನುಭವಿಗಳಿಗೆ ನೇರ ಲಾಭವನ್ನು ವರ್ಗಾಯಿಸಲಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ರೈತರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
माननीय प्रधानमंत्री श्री नरेंद्र मोदी 27 जुलाई 2023 को सीकर, राजस्थान में 8.5 करोड़ से अधिक प्रधानमंत्री किसान सम्मान निधि योजना के लाभार्थियों के बैंक खातों में 14वीं किस्त का हस्तांतरण करेंगे। #PMKisan #PMKisanSammanNidhi #Farmers #PMKisan14thInstallment #Sikar @pmkisanyojana pic.twitter.com/WWhmR8n9O9
— PM Kisan Yojana (@pmkisanyojana) July 18, 2023
ಹಾಗಾದರೆ ನೀವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದರೆ, ನಿಮ್ಮ ಖಾತೆಗೆ ಜಮೆ ಆಗಲಿರುವ 14ನೇ ಕಂತಿನ ಸ್ಥಿತಿ ಗತಿ ಪರಿಶೀಲಿಸಲು ಇಲ್ಲಿನ ಮಾಹಿತಿ ತಿಳಿಯಿರಿ.
ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಸ್ಥಿತಿ ಪರಿಶೀಲನೆ ವಿಧಾನ
* ಮೊದಲು ನೀವ ಅಧಿಕೃತ PM KISAN ವೆಬ್‌ಸೈಟ್ https://pmkisan.gov.in/ ಪೋರ್ಟಲ್‌ಗೆ ಭೇಟಿ ನೀಡಿ.
* ಭಾರತದ ನಕ್ಷೆಯ ಪರ ತೆರೆದುಕೊಳ್ಳುತ್ತದೆ.
* ಬಲಭಾಗದಲ್ಲಿ ಡ್ಯಾಶ್‌ಬೋರ್ಡ್ ಎಂಬ ಹಳದಿ ಬಣ್ಣದ ಟ್ಯಾಬ್ ಅನ್ನು ಆಯ್ಕೆ ಮಾಡಿಕೊಳ್ಳಿ.
* ಕ್ಲಿಕ್ ಮಾಡಿದ ನಂತರ, ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯಲಾಗುತ್ತದೆ.
* ವಿಲೇಜ್ ಡ್ಯಾಶ್‌ಬೋರ್ಡ್ ಟ್ಯಾಬ್‌ನಲ್ಲಿ, ನಿಮ್ಮ ಸಂಪೂರ್ಣ ವಿವರಗಳನ್ನು ನೀವು ಭರ್ತಿ ಮಾಡಬೇಕು.
* ರಾಜ್ಯ, ಜಿಲ್ಲೆ, ಉಪಜಿಲ್ಲೆ ಮತ್ತು ಪಂಚಾಯತ್ ಆಯ್ಕೆ ಮಾಡಿ.
* ನಂತರ ಶೋ ಬಟನ್ ಕ್ಲಿಕ್ ಮಾಡಿ, ಅಲ್ಲಿ ಕಾಣುವ ನಿಮ್ಮ ವಿವರಗಳನ್ನು ನೋಡಬಹುದು.
ಕಿಸಾನ್ ಸಮ್ಮಾನ್ ನಿಧಿ 13ನೇ ಕಂತು
ರೈತರಿಗೆ ಕಾಲ ಕಾಲಕ್ಕೆ ಸಹಾಯವಾಗುವಂತೆ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆಯಂತೆ ಮೂರು ಬಾರಿ ಒಟ್ಟು 6,000 ರೂಪಾಯಿ ಹಣ ಜಮೆ ಮಾಡುತ್ತಿದೆ. ಕೆಲವೊಮ್ಮೆ ಅನರ್ಹರನ್ನು ಗುರುತಿಸುವ ಸಲುವಾಗಿ ಕಿಸಾನ್ ಕಂತು ಜಮೆ ಆಗುವುದು ತಡವಾಗಿದೆ. ಈ ಹಿಂದೆ 13ನೇ ಕಂತು ಇದೇ ವರ್ಷ ಫೆಬ್ರುವರಿ 27ರಂದು ಅರ್ಹ ರೈತರ ಖಾತೆಗೆ ಜಮೆ ಆಗಿತ್ತು.
ಇನ್ನೂ ಈ ಹಿಂದೆ ಇದ್ದ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಸಹ ಅರ್ಹ ರೈತರಿಗೆ ಕೇಂದ್ರ ಜೊತೆಗೆ ಎರಡು ಕಂತಿನಲ್ಲಿ ಒಟ್ಟು 4,000 ರೂಪಾಯಿ ಜಮೆ ಮಾಡುತ್ತಿತ್ತು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈ ಯೋಜನೆಯನ್ನು ಮುಂದುವರಿಸುತ್ತದೆಯೋ? ಇಲ್ಲವೋ ಕಾದು ನೋಡಬೇಕಿದೆ.
English summary
PM Kisan Samman Nidhi Yojana 14th installment may release July 27th, How to status installment status.
Story first published: Friday, July 21, 2023, 14:51 [IST]