Bengaluru Bulls: ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಈವರೆಗೆ ಆಡಿದ 20 ಪಂದ್ಯಗಳಲ್ಲಿ 11ನೇ ಸೋಲು ಕಂಡ ಬೆಂಗಳೂರು ಬುಲ್ಸ್, ಪ್ಲೇಆಫ್ ಹಂತದಿಂದ ಬಹುತೇಕ ಹೊರಬಿದ್ದಿದೆ. ಪ್ರಸ್ತುತ 7 ಗೆಲುವುಗಳೊಂದಿಗೆ 48 ಅಂಕಗಳನ್ನು ಪಡೆದಿರುವ ಬುಲ್ಸ್, ಲೀಗ್ ಹಂತದಲ್ಲಿ ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೂ ನಾಕೌಟ್ ಹಂತ ಪ್ರವೇಶಿಸುವುದು ಅಸಾಧ್ಯ.