Tv
oi-Muralidhar S
By ಅನಿತಾ ಬನಾರಿ
|
ಜೀ
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
ಜನಪ್ರಿಯ
ಧಾರಾವಾಹಿ
‘ಪಾರು’ವಿನಲ್ಲಿ
ಅರಸನಕೋಟೆ
ಅಖಿಲಾಂಡೇಶ್ವರಿಯ
ಎರಡನೇ
ಸೊಸೆ
ಜನನಿ
ಆಗಿ
ಅಭಿನಯಿಸುತ್ತಿರುವ
ಪವಿತ್ರಾ
ನಾಯ್ಕ್
ಬಣ್ಣದ
ಪಯಣ
ಶುರುವಾಗಿದ್ದು
ಹಿರಿತೆರೆಯಿಂದ.
‘ಎಲ್ಲಿ
ನನ್ನ
ವಿಳಾಸ’
ಸಿನಿಮಾದಲ್ಲಿ
ನಟಿಸುವ
ಮೂಲಕ
ನಟನಾ
ಕ್ಷೇತ್ರಕ್ಕೆ
ಪಾದಾರ್ಪಣೆ
ಮಾಡಿದ
ಪವಿತ್ರಾ
ನಾಯ್ಕ್
ನಂತರ
‘ಸ್ವೇಚ್ಛೆ’,
‘ಲಡ್ಡು’
ಹೀಗೆ
ಒಂದೆರಡು
ಸಿನಿಮಾಗಳಲ್ಲಿ
ಬಣ್ಣ
ಹಚ್ಚಿದ್ದಾರೆ.
ಇಂಜಿನಿಯರಿಂಗ್
ಪದವೀಧರೆಯಾಗಿರುವ
ಪವಿತ್ರಾ
ನಾಯ್ಕ್‌ಗೆ
ಮೊದಲಿನಿಂದಲೂ
ನಟನೆಯತ್ತ
ವಿಶೇಷ
ಒಲವು.
ಅದೇ
ಕಾರಣದಿಂದ
ಎಂಜಿನಿಯರಿಂಗ್
ಮುಗಿದ
ಬಳಿಕ
ಕೆಲಸಕ್ಕಾಗಿ
ಐಟಿ
ಕಂಪೆನಿಗಳತ್ತ
ಮುಖ
ಮಾಡದ
ಪವಿತ್ರಾ
ಸೀದಾ
ಕಾಲಿಟ್ಟಿದ್ದು
ನಟನೆಗೆ.

ನಂದಿನಿಯಾಗಿ
ಕಿರುತೆರೆಗೆ
ಎಂಟ್ರಿ
ಹಿರಿತೆರೆಯ
ಮೂಲಕ
ಬಣ್ಣದ
ಜಗತ್ತಿನ
ನಂಟು
ಬೆಳೆಸಿಕೊಂಡ
ಪವಿತ್ರಾ
ನಾಯ್ಕ್
ಜನಪ್ರಿಯತೆ
ಗಿಟ್ಟಿಸಿದ್ದು
ಕಿರುತೆರೆಗೆ
ಕಾಲಿಟ್ಟ
ನಂತರವೇ.
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ,
ಅಣ್ಣ
ತಂಗಿ
ಭಾಂದವ್ಯದ
ಕಥೆಯನ್ನೊಳಗೊಂಡಿದ್ದ
‘ರಕ್ಷಾಬಂಧನ’ದಲ್ಲಿ
ನಾಯಕ
ಕಾರ್ತಿಕ್
ತಂಗಿ
ನಂದಿನಿಯಾಗಿ
ನಟಿಸಿ
ಸೈ
ಎನಿಸಿಕೊಂಡರು.
ಒಂದರ್ಥದಲ್ಲಿ
ಇವರೇ
ಈ
ಧಾರಾವಾಹಿಯ
ನಾಯಕಿಯಾಗಿದ್ದರು
ಎಂದರೆ
ತಪ್ಪಾಗಲಾರದು.
ಯಾಕೆಂದರೆ
‘ರಕ್ಷಾಬಂಧನ’
ಧಾರಾವಾಹಿಯಲ್ಲಿ
ಅಣ್ಣ
ಮತ್ತು
ತಂಗಿಯ
ಪಾತ್ರಗಳೇ
ಹೈಲೈಟ್
ಆಗಿತ್ತು.
ಜನನಿಯಾಗಿ
ಫೇಮಸ್ಸು!
ವಿಭಿನ್ನ
ಕಥಾಹಂದರದ
ಮೂಲಕ
ಕಿರುತೆರೆ
ವೀಕ್ಷಕರ
ಮನ
ಸೆಳೆದಿದ್ದ
‘ರಕ್ಷಾಬಂಧನ’
ಧಾರಾವಾಹಿಯು
ಟಿಆರ್‌ಪಿ
ಕಡಿಮೆ
ಇದ್ದ
ಕಾರಣದಿಂದಲೋ
ಏನೋ
ಅರ್ಧಕ್ಕೆ
ತನ್ನ
ಪಯಣ
ನಿಲ್ಲಿಸಿತ್ತು.
ನಂತರ
ಜೀ
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
‘ಪಾರು’
ಧಾರಾವಾಹಿಯಲ್ಲಿ
ಅರಸನಕೋಟೆ
ಅಖಿಲಾಂಡೇಶ್ವರಿ
ಎರಡನೇ
ಮಗ
ಪ್ರೀತಮ್
ಪ್ರೇಯಸಿ
ಜನನಿಯಾಗಿ
ಕಿರುತೆರೆಗೆ
ರೀ
ಎಂಟ್ರಿ
ಪಡೆದ
ಪವಿತ್ರಾ
ನಾಯ್ಕ್
ಇದೀಗ
ಸೊಸೆಯಾಗಿ
ವೀಕ್ಷಕರನ್ನು
ರಂಜಿಸುತ್ತಿದ್ದಾರೆ.

ಕಾದಂಬರಿ
ಧಾರಾವಾಹಿಯಲ್ಲಿಯೂ
ಮೋಡಿ
‘ಪಾರು’
ಧಾರಾವಾಹಿಯಲ್ಲಿ
ಅಭಿನಯಿಸುತ್ತಿರುವಾಗಲೇ
ಕಾದಂಬರಿಯಾಗಿ
ಬದಲಾಗುವ
ಸುವರ್ಣಾವಕಾಶ
ದೊರಕಿತ್ತು
ಪವಿತ್ರಾ
ನಾಯ್ಕ್
ಅವರಿಗೆ.
ಉದಯ
ವಾಗಿನಿ
ಪ್ರಸಾರವಾಗುತ್ತಿದ್ದ
ಸ್ತ್ರೀ
ಪ್ರಧಾನ
ಧಾರಾವಾಹಿ
‘ಕಾದಂಬರಿ’ಯಲ್ಲಿ
ನಾಯಕಿಯಾಗಿ
ನಟಿಸಿದ್ದ
ಪವಿತ್ರಾ
ನಾಯ್ಕ್
ಅಲ್ಲೂ
ಕೂಡಾ
ವೀಕ್ಷಕರ
ಮನ
ಸೆಳೆಯುವಲ್ಲಿ
ಸೈ
ಎನಿಸಿಕೊಂಡರು.
ಪರಭಾಷೆಗೆ
ಹಾರಿದ
ಕನ್ನಡತಿ
ಇದರ
ಜೊತೆಗೆ
ಕೇವಲ
ಕನ್ನಡ
ಮಾತ್ರವಲ್ಲದೇ
ಪರಭಾಷೆಯ
ಕಿರುತೆರೆಯಲ್ಲಿ
ಮೋಡಿ
ಮಾಡಿದ್ದಾರೆ
ಪವಿತ್ರಾ
ನಾಯ್ಕ್.
ಹೌದು,
ತೆಲುಗಿನ
ಸ್ಟಾರ್
ಮಾ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
‘ನುವ್ವೆ
ನೇನು
ಪ್ರೇಮ’ದಲ್ಲಿ
ನಾಯಕಿಯಾಗಿ
ಅಭಿನಯಿಸುತ್ತಿದ್ದಾರೆ.
ಸಂತಸದ
ವಿಚಾರವೆಂದರೆ
ಆ
ಧಾರಾವಾಹಿಯು
‘ಅರಗಿಣಿ
2’
ಎನ್ನುವ
ಹೆಸರಿನಲ್ಲಿ
ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದು
ಆ
ಮೂಲಕ
ಕನ್ನಡ
ಕಿರುತೆರೆಯಲ್ಲಿಯೂ
ಕಾಣಿಸಿಕೊಳ್ಳುತ್ತಿದ್ದಾರೆ
ಪವಿತ್ರಾ
ನಾಯ್ಕ್.
Brinda
Acharya:
ಪೌರಾಣಿಕ
ಧಾರಾವಾಹಿಯಲ್ಲಿ
ನಟಿಸಿದ್ದ
ನಟಿ..
ಸಾಲು
ಸಾಲು
ಸಿನಿಮಾಗಳಿಗೆ
ನಾಯಕಿಯಾಗಿದ್ದೇಗೆ?
ಆರಂಭದಲ್ಲಿ
ಭಯವಾಗಿತ್ತು
ಕನ್ನಡದ
ಜೊತೆಗೆ
ಪರಭಾಷೆಯ
ಕಿರುತೆರೆಯನ್ನು
ಸರಿದೂಗಿಸಿಕೊಂಡು
ಸಾಗುತ್ತಿರುವ
ಪವಿತ್ರಾ
ನಾಯ್ಕ್
ಗೆ
ಕಿರತೆರೆಯಲ್ಲಿ
ಅವಕಾಶ
ದೊರೆತಾಗ
ಆರಂಭದಲ್ಲಿ
ಭಯವಾಗಿತ್ತಂತೆ.
ಹಿರಿತೆರೆಯಲ್ಲಿ
ಈ
ಮೊದಲು
ಕಾಣಿಸಿಕೊಂಡಿದ್ದರೂ
ಕಿರುತೆರೆ
ಆಕೆಯ
ಪಾಲಿಗೆ
ಹೊಸದಾಗಿತ್ತು.
ಮಾತ್ರವಲ್ಲದೇ
ಜನರು
ಸ್ವೀಕರಿಸುತ್ತಾರಾ
ಎಂಬ
ಅಳುಕು
ಕೂಡಾ
ಆಕೆಗಿತ್ತು.
ಮೊದಲ
ಧಾರಾವಾಹಿಯಲ್ಲಿಯೇ
ವೀಕ್ಷಕರ
ಮನ
ಸೆಳೆದ
ಈಕೆ
ಸದ್ಯ
ಪ್ರೇಕ್ಷಕರ
ಪಾಲಿನ
ಪ್ರೀತಿಯ
ಜನನಿ.
ಅಷ್ಟರ
ಮಟ್ಟಿಗೆ
ಆ
ಪಾತ್ರ,
ಪವಿತ್ರಾ
ನಾಯ್ಕ್
ಅವರ
ನಟನೆ
ವೀಕ್ಷಕರಿಗೆ
ಹಿಡಿಸಿಬಿಟ್ಟಿದೆ.
English summary
Paaru serial Janani fame Pavitra Naik is an engineering graduate,know more.
Friday, July 14, 2023, 22:48
Story first published: Friday, July 14, 2023, 22:48 [IST]