Passion Fruit Benefits: ಪ್ಯಾಶನ್ ಹಣ್ಣು ತಿನ್ನುವುದರಿಂದ ಇಷ್ಟೊಂದು ಉಪಯೋಗ ಇದ್ಯಾ? ಯಾವುದಕ್ಕೆ ಉಪಯುಕ್ತ! | Passion Fruit (Krishna Phala): Health Benefits, Nutritional Value, and Side Effects in Kannada

Features

oi-Reshma P

|

Google Oneindia Kannada News

ಪ್ಯಾಶನ್ ಹಣ್ಣು ಪೌಷ್ಟಿಕಾಂಶದ ಉಷ್ಣವಲಯದ ಹಣ್ಣು, ಇದು ಸಣ್ಣ ಗಾತ್ರದ ಹೊರತಾಗಿಯೂ, ಇದು ಉತ್ಕರ್ಷಣ ನಿರೋಧಕಗಳು, ಫೈಬರ್, ವಿಟಮಿನ್ ಗಳು ಹಾಗೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ಯಾಷನ್ ಫ್ರೂಟ್ ನ್ನ ಕೃಷ್ಣ ಫಲ ಎಂತಲೂ ಕರೆಯುತ್ತಾರೆ.

ಪ್ಯಾಶನ್ ಹಣ್ಣಿನಲ್ಲಿ ಅಧಿಕ ಬೀಜಗಳು, ಸಿಹಿ ಮತ್ತು ಹುಳಿಯ ರುಚಿ ಹಾಗೂ ಅದ್ಭುತ ಪರಿಮಳದಿಂದ ಕೂಡಿರುವ ಈ ಹಣ್ಣಿನಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಈ ಹಣ್ಣನ್ನ ಉಷ್ಣ ವಲಯದಲ್ಲಿ ಹೆಚ್ಚಾಗಿ ಬೆಳೆಯುವ ಈ ಹಣ್ಣಿನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಲು ಸಹಾಯಕವಾಗಿದೆ.

Passion Fruit Benefits

ಪ್ಯಾಶನ್ ಹಣ್ಣಿನ ಬೀಜಗಳು ಪೈಸೆಟಾನೊಲ್‌ನಲ್ಲಿ ಸಮೃದ್ಧವಾಗಿವೆ, ಇದು ಪಾಲಿಫಿನಾಲ್ ಅಧಿಕ ತೂಕ ಹೊಂದಿರುವ ಪುರುಷರಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಪ್ಯಾಶನ್ ಹಣ್ಣಿನ ಸಿಪ್ಪೆಯ ಪೂರಕವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಈ ಹಣ್ಣಿನ ಹಲವು ಪ್ರಯೋಜಗಳು ಇಲ್ಲಿವೆ

ಉತ್ತಮ ಚರ್ಮದ ಆರೋಗ್ಯ

ಹೌದು, ಪ್ಯಾಶನ್ ಹಣ್ಣು ತಿನ್ನುವುದರಿಂದ ಆಂಟಿ ಆಕ್ಸಿಡೆಂಟ್‍ಗಳು ನಮ್ಮ ಚರ್ಮಕ್ಕೆ ಉತ್ತಮ ಆರೈಕೆ ಮಾಡುವುದು. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ರಿಬೋಫ್ಲಾವಿನ್ ಮತ್ತು ಕ್ಯಾರೋಟಿನ್ ನಂತಹ ಅನೇಕ ರೀತಿಯ ಆಂಟಿ ಆಕ್ಸಿಡೆಂಟ್‍ಗಳಿವೆ. ಈ ಉತ್ಕರ್ಷಣ ನಿರೋಧಕಗಳು ನಮ್ಮ ದೇಹದಲ್ಲಿ ಸ್ವತಂತ್ರ ರಾಡಿಕಲ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಚರ್ಮವನ್ನು ಉತ್ತಮಗೊಳಿಸುವಂತೆ ಮಾಡುತ್ತದೆ. ಪ್ಯಾಷನ್ ಹಣ್ಣಿನ ಔಷಧೀಯ ಗುಣವು ಇವುಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ಚರ್ಮವನ್ನು ಆರೋಗ್ಯಕರವಾಗಿ ಹಾಗೂ ಹೊಳಪಿನಿಂದ ಕೂಡಿರುವಂತೆ ಪ್ಯಾಶನ್‌ ಹಣ್ಣು ಮಾಡುತ್ತದೆ.

Passion Fruit Benefits

ಇನ್ನೂ ಪ್ಯಾಷನ್ ಹಣ್ಣು ಕಡಿಮೆ ಪ್ರಮಾಣದ ಗ್ಲೈಸೆಮಿಕ್ (ಐಜಿ) ಸೂಚ್ಯಂಕವನ್ನು ಮತ್ತು ಅಧಿಕ ಪ್ರಮಾಣದ ನಾರಿನಂಶವನ್ನು (ಶೇ. 10.4) ಒಳಗೊಂಡಿರುತ್ತದೆ. ಮಧುಮೇಹಿಗಳಿಗೆ ಇನ್ಸುಲಿನ್ ಪ್ರಮಾಣವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು

ಪ್ಯಾಷನ್ ಹಣ್ಣಿನ್ನ ತಿನ್ನುವುದರಿಂದ ಇದರಲ್ಲಿನ ಲೋಳೆ ಮತ್ತು ರಸವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ಯಾಷನ್ ಹಣ್ಣಿನಲ್ಲಿ ವಿಟಮಿನ್ ಸಿ, ಬೀಟಾ- ಕ್ರಿಪ್ಟೋಕ್ಸಾಂಥಿನ್ ಮತ್ತು ಆಲ್ಪಾ ಕ್ಯಾರೋಟಿನ್ ಸಮೃದ್ಧವಾಗಿರುತ್ತದೆ. ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ರಕ್ತ ಕಣಗಳನ್ನು ಹೆಚ್ಚಿಸುವಂತಹ ಕಬ್ಬಿಣಾಂಶವಿದೆ.

ಪ್ಯಾಷನ್ ಹಣ್ಣಿನ್ನ ತಿನ್ನುವುದರಿಂದ ವಿವಿಧ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗಬಹುದು. ಪ್ಯಾಶನ್ ಹಣ್ಣನ್ನು ಸೇವಿಸುವುದರಿಂದ ಜ್ವರ, ನೆಗಡಿ ಮತ್ತು ಇತರ ಕಾಯಿಲೆಗಳು ಸೇರಿದಂತೆ ಸೋಂಕುಗಳ ಅವಧಿ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Passion Fruit Benefits

ಹೃದಯದ ಆರೋಗ್ಯ

ಪ್ಯಾಷನ್ ಹಣ್ಣಿನಲ್ಲಿ ರಿಬೋಫ್ಲಾವಿನ್ (ವಿಟಮಿನ್ ಬಿ6) ಮತ್ತು ನಿಯಾಸಿನ್ (ವಿಟಮಿನ್ ಬಿ3) ಸಮೃದ್ಧವಾಗಿವೆ. ಇದು ದೇಹದಲ್ಲಿ ಥೈರಾಯ್ಡ್ ಚಟುವಟಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯದ ಅಪಧಮನಿಯ ಗೋಡೆಯನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಕಾರ್ಯಗಳು ಸರಾಗವಾಗಿ ನಡೆಯುವಂತೆ ಮಾಡುವುದು.

ಈ ಹಣ್ಣನ್ನ ತಿನ್ನುವುದರಿಂದ ಆತಂಕವನ್ನು ನಿವಾರಿಸಲು ಮತ್ತು ನಿದ್ರಾ ಹೀನತೆಯನ್ನು ತಡೆಯಲು, ರಕ್ತದೊತ್ತಡ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಣ್ಣು ಕಡಿಮೆ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಕಾರಣ ಹೃದಯ ಸ್ನೇಹಿ ಹಣ್ಣು. ಪ್ಯಾಶನ್ ಹಣ್ಣಿನಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಕಾರಣದಿಂದಾಗಿ ಹೃದ್ರೋಗದ ಅಪಾಯವು ಕಡಿಮೆಯಾಗುತ್ತದೆ.

ಪ್ಯಾಷನ್ ಹಣ್ಣಿನಲ್ಲಿ ಮೆಗ್ನಿಸಿಯಮ್, ಕ್ಯಾಲ್ಸಿಯಮ್, ಕಬ್ಬಿಣ ಫಾಸ್ಪರಸ್, ಪೊಟ್ಯಾಸಿಯಮ್ ಮತ್ತು ಸೋಡಿಯಮ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವು ಮೂಳೆಯ ಸಾಂದ್ರತೆಯನ್ನು ಕಾಪಾಡುತ್ತವೆ. ಮೂಳೆಯ ಚೇತರಿಕೆಗೆ ಸಹಾಯ ಮಾಡುತ್ತದೆ. ಹಣ್ಣಿನ ಬೀಜಗಳು ಅಧಿಕ ಪೋಷಕಾಂಶಗಳಿಂದ ಕೂಡಿರುತ್ತವೆ.

Passion Fruit Benefits

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

ದಿನನಿತ್ಯದ ಅಹಾರದಿಂದ ದೇಹದ ತೂಕ ಹೆಚ್ಚಾಗಿದ್ದು, ಈ ಹಣ್ಣಿನಲ್ಲಿರುವ ಸಮೃದ್ಧ ಪೋಷಕಾಂಶದ ಅಂಶದೊಂದಿಗೆ ಹೆಚ್ಚಿನ ಫೈಬರ್ ಸಂಯೋಜನೆಯು ಪ್ಯಾಶನ್ ಹಣ್ಣನ್ನು ನಿಮ್ಮ ಆಹಾರಕ್ರಮಕ್ಕೆ ಉತ್ತಮ ತೂಕ ನಷ್ಟವನ್ನ ಮಾಡುತ್ತದೆ.

ಉತ್ಕರ್ಷಣ ನಿರೋಧಕ

ಪ್ಯಾಶನ್ ಫ್ರೂಟ್‌ನಲ್ಲಿ ಹೇರಳವಾಗಿರುವ ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ದೇಹದ ರಕ್ಷಣೆಗೆ ಸಹಾಯ ಮಾಡುತ್ತದೆ. ಅದು ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಬಹುದು, ಪ್ರಯೋಜನಕಾರಿ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲಾಗುತ್ತದೆ ಮತ್ತು ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್ ಮತ್ತು ಫ್ಲೇವನಾಯ್ಡ್‌ಗಳು ಸೇರಿದಂತೆ ಪ್ಯಾಶನ್ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳಿಂದ ನಿಮ್ಮ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲಾಗುತ್ತದೆ.

ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸುತ್ತದೆ

ಪ್ಯಾಶನ್ ಹಣ್ಣಿನ ಸೇವಿಸುವುದರಿಂದ ಆರೋಗ್ಯಕರ ಜೀರ್ಣಾಂಗವ್ಯೂಹವನ್ನು ಸಂರಕ್ಷಿಸಲು ಅಗತ್ಯವಾದ ಆಹಾರದ ಫೈಬರ್ ಈ ಹಣ್ಣಿನಲ್ಲಿ ಕಂಡುಬರುತ್ತದೆ. ಮಲಬದ್ಧತೆಯನ್ನು ತಪ್ಪಿಸಲಾಗುತ್ತದೆ ಮತ್ತು ನಿಯಮಿತ ಕರುಳಿನ ಚಲನೆಯನ್ನು ಫೈಬರ್‌ನಿಂದ ಉತ್ತೇಜಿಸಲಾಗುತ್ತದೆ. ಪ್ಯಾಶನ್ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ಅನುಭವಿಸಲು ಹಾಗೂ ಗ್ಯಾಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ಯಾಶನ್ ಹಣ್ಣಿನ ದುಷ್ಪರಿಣಾಮಗಳು

ಪ್ಯಾಶನ್ ಹಣ್ಣು ಹೆಚ್ಚಿನ ಜನರಿಗೆ ತಿನ್ನಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಆದರೆ ಅಲರ್ಜಿಗಳು ಕಡಿಮೆ ಸಂಖ್ಯೆಯ ಜನರಲ್ಲಿ ಕಂಡುಬರುತ್ತವೆ. ಲ್ಯಾಟೆಕ್ಸ್ ಅಲರ್ಜಿಯನ್ನು ಹೊಂದಿರುವವರು ಪ್ಯಾಶನ್ ಹಣ್ಣಿನ ಅಲರ್ಜಿಯ ಅಪಾಯವನ್ನು ಹೊಂದಿರುತ್ತಾರೆ. ಏಕೆಂದರೆ ಹಣ್ಣಿನಲ್ಲಿರುವ ಕೆಲವು ಸಸ್ಯ ಪ್ರೋಟೀನ್‌ಗಳು ಲ್ಯಾಟೆಕ್ಸ್ ಪ್ರೋಟೀನ್‌ಗಳಂತೆಯೇ ರಚನೆಯನ್ನು ಹೊಂದಿರುತ್ತವೆ, ಇದು ಕೆಲವು ಜನರಲ್ಲಿ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಹೀಗಾಗಿ ವೈದ್ಯಕೀಯ ಸಲಹೆ ಪಡೆಯಿರಿ.

English summary

Health Benefits of Consuming Passion Fruit (Krishna Phala) in Kannada

Source link