Tv
oi-Srinivasa A
By Poorva
|
ಪಾರು
ಧಾರಾವಾಹಿ
ಅದ್ಭುತವಾಗಿ
ಮೂಡಿ
ಬರುತ್ತಿದ್ದು
ನೋಡುಗರ
ಮನ
ಸೆಳೆಯುವ
ಹಾಗೆ
ಮಾಡುತ್ತಿದೆ.
ಇದೀಗ
ಆದಿ
ಮನದಲ್ಲಿ
ಪಾರು
ಕೆಲಸಕ್ಕೆ
ಹೋಗುವುದಕ್ಕೆ
ಬಹಳ
ವಿರೋಧ
ಇದ್ದರೂ
ಪಾರುವಿನ
ದುಃಖ
ಸಂತೋಷಕ್ಕಾಗಿ
ಕೆಲಸಕ್ಕೆ
ಹೋಗುವುದನ್ನು
ಆದಿ
ಒಪ್ಪಿಕೊಂಡಿದ್ದಾನೆ.
ಹೀಗೆ
ಮನೆಯಿಂದ
ಹೊರಗೆ
ಬರಬೇಕಾದರೆ
ಅಖಿಲ
ಪಾರು
ಬಳಿ
ಮಾತನಾಡಲು
ನಿಂತಿರುತ್ತಾಳೆ
.ಅಖಿಲ
ಮನ
ಬಿಚ್ಚಿ
ಪಾರು
ಬಳಿ
ಮಾತನಾಡಿದರೂ
ಪಾರು
ಮಾತ್ರ
ಅದ್ಯಾವುದಕ್ಕೂ
ಉತ್ತರ
ನೀಡದೆ
ಅಲ್ಲಿಂದ
ಹೋಗುತ್ತಾಳೆ.
ಇನ್ನು
ಆದಿ
ಪಾರುವನ್ನ
ಒಂದು
ನಿಮಿಷ
ಕೂಡ
ಬಿಟ್ಟಿರುತ್ತಿರಲಿಲ್ಲ.
ಆತ
ಬಹಳ
ಬೇಸರದಿಂದ
ಆಟೋದಲ್ಲಿ
ಕರೆದುಕೊಂಡು
ಹೋಗುತ್ತಾ
ಇರುವಾಗ
ಪಾರು
ಬಳಿ
ಆದಿ
ಪಾರು
ನೀನು
ಕೆಲಸಕ್ಕೆ
ಹೋಗುವುದು
ನನಗೆ
ಇಷ್ಟ
ಇಲ್ಲ
ಆದರೂಈ
ನಿನ್ನ
ಖುಷಿಗಾಗಿ
ನಾನು
ಒಪ್ಪಿಗೆ
ಸೂಚಿಸಿದ್ದೇನೆ
ಎಂದು
ಹೇಳುತ್ತಾನೆ.
ಆಗ
ಪಾರು
ಮುಖದಲ್ಲಿ
ಮಂದಹಾಸ
ಮನೆ
ಮಾಡಿತ್ತು.
ಪಾರು
ಕೆಲಸಕ್ಕೆ
ಹೋಗುವ
ಮನೆಯ
ರೂಟ್
ತೋರಿಸುತ್ತಾ
ಇರಬೇಕಾದರೆ
ಆದಿ
ನನಗೆ
ಈ
ರೂಟ್
ಈ
ಮೊದಲೇ
ತಿಳಿದು
ಹೋಗಿದೆ
ನಾನು
ಇಲ್ಲಿಯೇ
ನಿನ್ನನ್ನು
ನೋಡಿದೆ
ಆದರೆ
ನೀನು
ಎಂದು
ಅಷ್ಟು
ಗೊತ್ತಾಗಲಿಲ್ಲ
ಪಾರು
ಸ್ವಲ್ಪ
ಹೊತ್ತಾದ
ಬಳಿಕ
ನೀನು
ಎಂದು
ತಿಳಿಯಿತು.
ಅಷ್ಟರಲ್ಲಿ
ಒಬ್ಬರು
ಪ್ಯಾಸೆಂಜರ್
ಸಿಕ್ಕಿದರು,
ನಾನು
ಅವರ
ಬಳಿ
ಮಾತನಾಡಿ
ಬರಬೇಕು
ಎನ್ನುವಷ್ಟರಲ್ಲಿ
ನೀನು
ಎಲ್ಲಿಗೆ
ಹೋದೆ
ಎಂದು
ಗೊತ್ತಾಗಲಿಲ್ಲ
ಎಂದು
ಹೇಳುತ್ತಾನೆ.
ಇದನ್ನು
ಕೇಳಿದ
ಪಾರು
ಕೊಂಚ
ಮೌನಿ
ಆಗುತ್ತಾಳೆ.
ಆದರೂ
ಏನು
ಮಾತನಾಡದೆ
ಸುಮ್ಮನೆ
ಆಗುತ್ತಾಳೆ.
ಆ
ಬಳಿಕ
ಆಟೋವನ್ನು
ನಿಲ್ಲಿಸಲು
ಹೇಳುತ್ತಾಳೆ.
ಆದಿ
ಆಟೋ
ನಿಲ್ಲಿಸಿದ
ಬಳಿಕ
ಪಾರು
ನೀವು
ಸಂಗೀತ
ಅಕ್ಕನ
ಮನೆಯ
ಬಳಿ
ಬರೋದು
ಬೇಡ,
ನೀವು
ನಿಮ್ಮ
ಹೆಂಡತಿ
ಗರ್ಭಿಣಿ
ಎಂದು
ಅವರ
ಬಳಿ
ಹೇಳಿಬಿಟ್ಟಿದ್ದಿರಿ
ನಾನು
ಗರ್ಭಿಣಿ
ಅನ್ನುವ
ವಿಚಾರ
ಅವರಿಗೆ
ತಿಳಿದಿಲ್ಲ,
ಆದ
ಕಾರಣ
ನನ್ನನ್ನು
ಇಲ್ಲಿಯೇ
ಬಿಟ್ಟು
ಹೋಗಿ
ಎಂದು
ಹೇಳುತ್ತಾಳೆ.
ಆದಿ
ಪಾರುವನ್ನು
ಅಲ್ಲಿಯೇ
ಬಿಟ್ಟು
ಹೋಗುತ್ತಾನೆ.
ಇನ್ನು
ಅಖಿಲಾಂಡೇಶ್ವರಿ
ಮನೆಗೆ
ಮಾವಿನ
ಕಾಯಿಯನ್ನು
ತೆಗೆದುಕೊಂಡು
ಬರುತ್ತಾಳೆ.
ಇದನ್ನು
ನೋಡಿದ
ಅಖಿಲಗೆ
ಬಹಳ
ಖುಷಿ
ಆಗುತ್ತದೆ.
ಈ
ಮಾವಿನ
ಕಾಯಿಯ
ಉಪ್ಪಿನ
ಕಾಯಿ
ಮಾಡಿ
ಜನನಿ
ಹಾಗೂ
ಪಾರುಗೆ
ಕೂಡ
ಕೊಡಬೇಕು
ಎಂದು
ಆಲೋಚನೆ
ಮಾಡುತ್ತಾ
ಇರುತ್ತಾಳೆ.
ಇದನ್ನು
ನೋಡಿದ
ರತ್ನವೇಣಿ
ಅವರೇನು
ಈ
ರೀತಿ
ನಡೆದುಕೊಳ್ಳುತ್ತಾರೆ,
ಅರಸನ
ಕೋಟೆಯ
ಅಖಿಲ
ಎಂದರೆ
ಬಹಳ
ಘನತೆ
ಇರುತ್ತದೆ
ಆಗಾಗ
ಈ
ರೀತಿ
ಎಲ್ಲಾ
ನಡೆದುಕೊಂಡರೆ
ಅದಕ್ಕೆ
ಬೆಲೆಯೇ
ಇರುವುದಿಲ್ಲ
ಎಂದು
ಬಹಳ
ತಿರಸ್ಕಾರದಿಂದ
ಮಾತನಾಡುತ್ತಾಳೆ.
ಆಗ
ರಘು
ಪಾರು
ಹೊಟ್ಟೆಯಲ್ಲಿ
ಬೆಳಯುತ್ತಿರುವುದು
ಅರಸನ
ಕೋಟೆಯ
ಕುಡಿ
ಎಂದು
ಹೇಳಿದಾಗ
ರತ್ನವೇಣಿ
ಸುಮ್ಮನೆ
ಆಗುತ್ತಾಳೆ.
ಮುಂದೇನು
ಕಾದು
ನೋಡಬೇಕಿದೆ.
English summary
Kannada serial paaruwritten updated on 20th june
Tuesday, June 20, 2023, 22:47
Story first published: Tuesday, June 20, 2023, 22:47 [IST]