ODI Worldcup 2023: ಮುಂದಿನ ವಾರ ವೇಳಾಪಟ್ಟಿ ಬಿಡಗಡೆ ಸಾಧ್ಯತೆ: ಸಂಭವನೀಯ ವೇಳಾಪಟ್ಟಿ ಇಲ್ಲಿದೆ ನೋಡಿ! | Anticipated Release of 2023 World Cup Schedule Next Wee: Here The Draft

Sports

oi-Naveen Kumar N

|

Google Oneindia Kannada News

ಬಹು ನಿರೀಕ್ಷಿತ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಕೆಲವು ತಿಂಗಳಷ್ಟೇ ಬಾಕಿ ಇದೆ. ಭಾರತದಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಮುಂದಿನ ವಾರ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ವರ್ಷದ ಅತಿ ದೊಡ್ಡ ಕ್ರಿಕೆಟ್ ಪಂದ್ಯಾವಳಿ ವೇಳಾಪಟ್ಟಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಸದ್ಯದ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 5ರಂದು ಆರಂಭವಾಗಿ ನವೆಂಬರ್ 19ರಂದು ಮುಗಿಯಲಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.

 Anticipated Release of 2023 World Cup Schedule Next Wee: Here The Draft

ಕಳೆದ ವಾರವೇ ಬಿಸಿಸಿಐ ಐಸಿಸಿಗೆ ಡ್ರಾಫ್ಟ್ ವೇಳಾಪಟ್ಟಿಯನ್ನು ಕಳುಹಿಸಿಕೊಟ್ಟಿತ್ತು, ಅದರಂತೆ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದ್ದು, ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ವೇಳಾಪಟ್ಟಿ ಪ್ರಕಟವಾಗಲು ತಡವಾಗಿದೆ. ಉಳಿದಂತೆ ಪಾಕಿಸ್ತಾನದ ಪಂದ್ಯಗಳು ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿವೆ.

ಕಳೆದ ತಿಂಗಳು ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್ ಮತ್ತು ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಲಾಹೋರ್‌ಗೆ ಭೇಟಿ ನೀಡಿದಾಗ ಪಿಸಿಬಿ ಈ ವಿಷಯವನ್ನು ಪ್ರಸ್ತಾಪಿಸಿತು. ಭಾರತ ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಆಯೋಜಿಸಲು ಕೇಳಿತ್ತು ಅದರ ಪ್ರಕಾರ ಭಾರತ ಮತ್ತು ಶ್ರೀಲಂಕಾದಲ್ಲಿ ಪಂದ್ಯಾವಳಿ ನಡೆಸಲು ಕೇಳಿತ್ತು, ಇದಕ್ಕೆ ಪಿಸಿಬಿ ಆಕ್ಷೇಪಣೆ ಸಲ್ಲಿಸಿ, ಕೊನೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾ ಏಷ್ಯಾಕಪ್‌ ಆಯೋಜಿಸಲಿವೆ.

ಬೆಂಗಳೂರಿನಲ್ಲಿ ಭಾರತದ ಪಂದ್ಯ

ಬೆಂಗಳೂರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ವಿಶ್ವಕಪ್ ಪಂದ್ಯವನ್ನು ಆಡಲಿದೆ, ಎದುರಾಳಿ ತಂಡ ಯಾವುದು ಎಂದು ನಿರ್ಧಾರವಾಗಿಲ್ಲವಾದರು, ನವೆಂಬರ್ 11ರಂದು ಬೆಂಗಳೂರಿಲ್ಲಿ ಪಂದ್ಯ ನಡೆಯಲಿದೆ.

ವಿಶ್ವಕಪ್‌ನ ಮೊದಲನೇ ಪಂದ್ಯ ಅಕ್ಟೋಬರ್ 5ರಂದು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 8 ರಂದು ಭಾರತ ಮೊದಲ ಪಂದ್ಯವನ್ನಾಡಲಿದ್ದು ಆಸ್ಟ್ರೇಲಿಯಾವನ್ನು ಎದುರಿಸಲಿದೆ.

2023 ವಿಶ್ವಕಪ್ ಸಂಭವನೀಯ ವೇಳಾಪಟ್ಟಿ

ದಿನಾಂಕ ಪಂದ್ಯಗಳು

ಅಕ್ಟೋಬರ್ 5 ಇಂಗ್ಲೆಂಡ್ vs ನ್ಯೂಜಿಲೆಂಡ್
ಅಕ್ಟೋಬರ್ 6 ಬಾಂಗ್ಲಾದೇಶ vs ಅಫ್ಘಾನಿಸ್ತಾನ
ಅಕ್ಟೋಬರ್ 7 ಇಂಗ್ಲೆಂಡ್ vs ನ್ಯೂಜಿಲೆಂಡ್
ಅಕ್ಟೋಬರ್ 8 ಭಾರತ vs ಆಸ್ಟ್ರೇಲಿಯಾ
ಅಕ್ಟೋಬರ್ 9 A2 vs A3
ಅಕ್ಟೋಬರ್ 10 ಭಾರತ vs ಇಂಗ್ಲೆಂಡ್
ಅಕ್ಟೋಬರ್ 11 ಆಸ್ಟ್ರೇಲಿಯಾ vs ಬಾಂಗ್ಲಾದೇಶ, ಪಾಕಿಸ್ತಾನ vs A2
ಅಕ್ಟೋಬರ್ 12 ಅಫ್ಘಾನಿಸ್ತಾನ vs ನ್ಯೂಜಿಲೆಂಡ್
ಅಕ್ಟೋಬರ್ 13 ಪಾಕಿಸ್ತಾನ vs A3
ಅಕ್ಟೋಬರ್ 14 A1 vs A2, ನ್ಯೂಜಿಲೆಂಡ್ vs A1
ಅಕ್ಟೋಬರ್ 15 ಭಾರತ vs ಪಾಕಿಸ್ತಾನ
ಅಕ್ಟೋಬರ್ 16 ಬಾಂಗ್ಲಾದೇಶ vs ಅಫ್ಘಾನಿಸ್ತಾನ
ಅಕ್ಟೋಬರ್ 17 ನ್ಯೂಜಿಲೆಂಡ್ vs ಪಾಕಿಸ್ತಾನ
ಅಕ್ಟೋಬರ್ 18 ಆಸ್ಟ್ರೇಲಿಯಾ vs B2
ಅಕ್ಟೋಬರ್ 19 ಅಫ್ಘಾನಿಸ್ತಾನ vs A3
ಅಕ್ಟೋಬರ್ 20 ಇಂಗ್ಲೆಂಡ್ vs ಬಾಂಗ್ಲಾದೇಶ
ಅಕ್ಟೋಬರ್ 21 ಭಾರತ vs ಆಸ್ಟ್ರೇಲಿಯಾ, ಅಫ್ಘಾನಿಸ್ತಾನ vs ಪಾಕಿಸ್ತಾನ
ಅಕ್ಟೋಬರ್ 22 ನ್ಯೂಜಿಲೆಂಡ್ vs A3
ಅಕ್ಟೋಬರ್ 23 ಭಾರತ vs ನ್ಯೂಜಿಲೆಂಡ್
ಅಕ್ಟೋಬರ್ 25 A1 vs A3
ಅಕ್ಟೋಬರ್ 26 ಅಫ್ಘಾನಿಸ್ತಾನ vs A2
ಅಕ್ಟೋಬರ್ 27 ಬಾಂಗ್ಲಾದೇಶ vs A2
ಅಕ್ಟೋಬರ್ 28 ಭಾರತ vs A1, ಆಸ್ಟ್ರೇಲಿಯಾ vs ನ್ಯೂಜಿಲೆಂಡ್
ಅಕ್ಟೋಬರ್ 29 ಇಂಗ್ಲೆಂಡ್ vs ಪಾಕಿಸ್ತಾನ
ಅಕ್ಟೋಬರ್ 30 ಆಸ್ಟ್ರೇಲಿಯಾ vs A3
ಅಕ್ಟೋಬರ್ 31 ಇಂಗ್ಲೆಂಡ್ vs A1
ನವೆಂಬರ್ 1 ಭಾರತ vs A2
ನವೆಂಬರ್ 2 ಬಾಂಗ್ಲಾದೇಶ vs ಪಾಕಿಸ್ತಾನ
ನವೆಂಬರ್ 3 ಆಸ್ಟ್ರೇಲಿಯಾ vs A2
ನವೆಂಬರ್ 4 ಭಾರತ vs ಅಫ್ಘಾನಿಸ್ತಾನ, ಬಾಂಗ್ಲಾದೇಶ vs A3
ನವೆಂಬರ್ 5 ಇಂಗ್ಲೆಂಡ್ vs A3, ಆಸ್ಟ್ರೇಲಿಯಾ vs ಪಾಕಿಸ್ತಾನ
ನವೆಂಬರ್ 7 ಇಂಗ್ಲೆಂಡ್ vs A2
ನವೆಂಬರ್ 8 ಭಾರತ vs A3
ನವೆಂಬರ್ 9 ಅಫ್ಘಾನಿಸ್ತಾನ vs A1
ನವೆಂಬರ್ 10 ಬಾಂಗ್ಲಾದೇಶ vs A1
ನವೆಂಬರ್ 11 ಭಾರತ vs ಪಾಕಿಸ್ತಾನ, ಇಂಗ್ಲೆಂಡ್ vs ಅಫ್ಘಾನಿಸ್ತಾನ
ನವೆಂಬರ್ 13 ಬಾಂಗ್ಲಾದೇಶ vs ನ್ಯೂಜಿಲೆಂಡ್
ನವೆಂಬರ್ 15 ಸೆಮಿಫೈನಲ್ 1 (1ನೇ ವಿರುದ್ಧ 4ನೇ)
ನವೆಂಬರ್ 16 ಸೆಮಿ-ಫೈನಲ್ 2 (2 ನೇ vs 3 ನೇ)
ನವೆಂಬರ್ 19 ಫೈನಲ್

English summary

The highly anticipated Men’s ODI Cricket World Cup 2023 has fans eagerly awaiting the release of the event schedule. While the official dates have not been announced, the tournament is expected to start on October 5 and run through November.

Story first published: Monday, June 19, 2023, 16:04 [IST]

Source link