Sports
oi-Naveen Kumar N
ಏಕದಿನ ವಿಶ್ವಕಪ್ 2023ರ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದೆ. ಭಾರಿ ಕುತೂಹಲ ಕೆರಳಿಸಿರುವ ಈ ಪಂದ್ಯಾವಳಿ ವೀಕ್ಷಿಸಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತದ 12 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದೆ.
ಗ್ರಾಹಕರ ಅನುಕೂಲಕ್ಕಾಗಿ ಟಿಕೆಟ್ ಖರೀದಿಯನ್ನು ಸುಲಭವಾಗಿಸಲು ಬಿಸಿಸಿಐ ನಿರ್ಧರಿಸಿದೆ. ಏಕದಿನ ವಿಶ್ವಕಪ್ 2023 ಟಿಕೆಟ್‌ಗಳ ಮಾರಾಟದ ನಿರ್ವಹಣೆಯನ್ನು ಬುಕ್ ಮೈ ಶೋ ಮತ್ತು ಪೇ ಟಿಎಂ ಫ್ಲಾಟ್‌ಫಾರ್ಮ್‌ಗಳಿಗೆ ನೀಡಲು ಬಿಸಿಸಿಐ ನಿರ್ಧರಿಸಿದೆ.
ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿ ಮಾಡಿದರು ಪಂದ್ಯ ವೀಕ್ಷಿಸಲು ತೆರಳುವ ವೇಳೆ ಟಿಕೆಟ್ ಅನ್ನು ಹೊಂದಿರಬೇಕು ಎಂದು ಹೇಳಿದೆ. ವಿಶ್ವ ಕಪ್ ಪಂದ್ಯಗಳಲ್ಲಿ ಅರ್ಧದಷ್ಟು ಪಂದ್ಯಗಳನ್ನು ಎರಡು ಟಿಕೆಟಿಂಗ್ ಕಂಪನಿಗಳು ನಿರ್ವಹಿಸುತ್ತವೆ ಎಂದು ಬಿಸಿಸಿಐ ಹೇಳಿದೆ.
ವಾಂಖೆಡೆ ಸ್ಟೇಡಿಯಂ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಸೆಮಿಫೈನಲ್ ಪಂದ್ಯಗಳ ಟಿಕೆಟ್‌ಗಳು ಪೇಟಿಎಂ (Paytm.com) ನಲ್ಲಿ ಲಭ್ಯವಿರುತ್ತವೆ. ಭಾರತ vs ಪಾಕಿಸ್ತಾನ (IND vs PAK) ಪಂದ್ಯ ಮತ್ತು ಫೈನಲ್ ಪಂದ್ಯದ ಟಿಕೆಟ್‌ಗಳು ಬುಕ್ ಮೈ ಶೋ (Bookmyshow.com) ನಲ್ಲಿ ಲಭ್ಯವಿರುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
English summary
BCCI delegates ODI World Cup 2023 Tickets sales to BookMyShow and Paytm, but attendees must carry physical copies at stadiums. Ticket prices to be finalized by July 31, with sales beginning on August 10.
Story first published: Sunday, July 30, 2023, 23:57 [IST]