National Doctors Day 2023: ವೈದ್ಯರ ದಿನದ ಮಹತ್ವ, ಇತಿಹಾಸ ಇಲ್ಲಿದೆ | National Doctors Day 2023: Significance, History of Doctors Day Here

Features

oi-Sunitha B

|

Google Oneindia Kannada News

ಸರ್ವರ ಆರೋಗ್ಯವನ್ನು ಸುಧಾರಿಸುವ, ನಂಬಿ ಬಂದ ರೋಗಿಗಳನ್ನು ತಾಯಿಯಂತೆ ಮಮತೆ ಆದರಿಸಿ, ತಂದೆಯಂತೆ ಜವಬ್ದಾರಿಯನ್ನು ಹೊತ್ತು ಸಹನೆಯಿಂದ ವಿಚಾರಿಸಿ ಸ್ನೇಹಿತನಂತೆ ನಗು ಬೀರಿ ಭರವಸೆಯ ನಡುಗಳನ್ನಾಗುವವರು ವೈದ್ಯರು. ವೈದ್ಯರನ್ನು ದೇವರ ಎರಡನೇ ರೂಪ ಎಂದು ಕರೆಯಲಾಗುತ್ತದೆ. ಏಕೆಂದರೆ ಸಾಮಾನ್ಯ ಮನುಷ್ಯನ ಜೀವಕ್ಕೆ ಅಪಾಯ ಬಂದಾಗ ವೈದ್ಯರು ಮಾತ್ರ ಅವರ ಜೀವವನ್ನು ಉಳಿಸುತ್ತಾರೆ.

ಕೊರೊನಾ ಅವಧಿಯಲ್ಲಿ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅನೇಕ ಜೀವಗಳನ್ನು ಉಳಿಸಿದ್ದಾರೆ. ನಮ್ಮ ಜೀವನದಲ್ಲಿ ವೈದ್ಯರ ಪಾತ್ರವನ್ನು ನೆನಪಿಟ್ಟುಕೊಳ್ಳಲು ಮತ್ತು ಗೌರವಿಸಲು ಪ್ರತಿ ವರ್ಷ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಭಾರತ ದೇಶದಲ್ಲಿ 1991 ರಲ್ಲಿ ಮೊದಲ ಬಾರಿ ವೈದ್ಯರ ದಿನವನ್ನು ಆಚರಿಸಲಾಯಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಪರಿಗಣಿಸಿ, ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಯಿತು.

National Doctors Day 2023: Significance, History of Doctors Day Here

ಬಿಧನ್ ಚಂದ್ರ ರಾಯ್ ಅವರು ಮೆಡಿಕಲ್ ಕೌನ್ಸಿಲ್ ಆಫ್‌ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್‌ ಅಸೋಸಿಯೇಷನ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ಧರು. ಈ ಹಿನ್ನಲೆಯಲ್ಲಿ ಅವರ ಜನ್ಮ ದಿನ ಮತ್ತು ಪುಣ್ಯಸ್ಮರಣೆ ದಿನವನ್ನೇ ರಾಷ್ಟ್ರೀಯ ವೈದ್ಯಕೀಯ ದಿನ ಎಂದು ಘೋಷಿಸಲಾಯಿತು.

 Mangaluru Drugs case: ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ಮೆಡಿಕಲ್‌ ವಿದ್ಯಾರ್ಥಿಗಳ ಅಮಾನತು Mangaluru Drugs case: ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ಮೆಡಿಕಲ್‌ ವಿದ್ಯಾರ್ಥಿಗಳ ಅಮಾನತು

ವೈದ್ಯರ ದಿನವನ್ನು ವಿವಿಧ ದೇಶಗಳಲ್ಲಿ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಮಾರ್ಚ್ 30 ರಂದು ಅಮೆರಿಕದಲ್ಲಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಯಾವ ದೇಶದಲ್ಲಿ ಯಾವಾಗ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ತಿಳಿಯೋಣ.

ರಾಷ್ಟ್ರೀಯ ವೈದ್ಯರ ದಿನದ ಥೀಮ್ 2023

ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ವಿಭಿನ್ನ ವಿಷಯದೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ವಿಷಯವೆಂದರೆ “ಗುಣಪಡಿಸುವ ಕೈಗಳಿಗೆ ಅಭಿನಂದನೆ”.

National Doctors Day 2023: Significance, History of Doctors Day Here

ರಾಷ್ಟ್ರೀಯ ವೈದ್ಯರ ದಿನದ ಉದ್ದೇಶ

ವೈದ್ಯರ ಕರ್ತವ್ಯಗಳು, ಪ್ರಾಮುಖ್ಯತೆ ಮತ್ತು ಕೊಡುಗೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಈ ದಿನ ವೈದ್ಯರ ಕೊಡುಗೆಗಾಗಿ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವಕಾಶವನ್ನು ನೀಡುತ್ತದೆ. ಅವರು ತಮ್ಮ ರೋಗಿಗಳಿಗೆ, ಅವರು ಕೆಲಸ ಮಾಡುವ ಸಮುದಾಯಗಳಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕಾಗಿ ಏನು ಮಾಡುತ್ತಾರೆ ಎಂದು ನೆನಪಿಸಿಕೊಳ್ಳುವ ದಿನವಿದು.

ರಾಷ್ಟ್ರೀಯ ವೈದ್ಯರ ದಿನದ ಪ್ರಾಮುಖ್ಯತೆ

ರಾಷ್ಟ್ರೀಯ ವೈದ್ಯರ ದಿನವನ್ನು ವೈದ್ಯರಿಗೆ ಧನ್ಯವಾದ ಮತ್ತು ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಮಗುವಿನ ಜನನದಿಂದ ಆರೋಗ್ಯಕರ ಜೀವನಶೈಲಿಯನ್ನು ನಡೆಸುವವರೆಗೆ ವೈದ್ಯರ ಪಾತ್ರ ಬಹಳ ಮುಖ್ಯವಾಗಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಲು ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

ಯಾವ ದೇಶದಲ್ಲಿ ಯಾವಾಗ ವೈದ್ಯರ ದಿನ ಆಚರಿಸಲಾಗುತ್ತದೆ?

ಕಾರ್ಲೋಸ್ ಜುವಾನ್ ಫಿನ್ಲೇ ಅವರ ಜನ್ಮದಿನದ ನೆನಪಿಗಾಗಿ ಡಿಸೆಂಬರ್ 3 ರಂದು ಕ್ಯೂಬಾದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ರಜಾದಿನವಾಗಿ ಆಚರಿಸಲಾಗುತ್ತದೆ. ಅಕ್ಟೋಬರ್ 18 ರಂದು ಬ್ರೆಜಿಲ್‌ನಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಚೀನೀ ವೈದ್ಯರ ದಿನವನ್ನು ಆಗಸ್ಟ್ 19 ರಂದು ಆಚರಿಸಲಾಗುತ್ತದೆ. ಈ ದಿನ ಚೀನಾದಲ್ಲಿ ರಾಷ್ಟ್ರೀಯ ರಜಾದಿನವಾಗಿದೆ.

ಕೆನಡಾದಲ್ಲಿ ಮೇ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮಲೇಷ್ಯಾದಲ್ಲಿ ಪ್ರತಿ ವರ್ಷ ಅಕ್ಟೋಬರ್ 10 ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ನೇಪಾಳದಲ್ಲಿ ಮಾರ್ಚ್ 4 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

English summary

National Doctor’s Day 2023: Know Doctor’s Day Date, Significance, History in Kannada.

Story first published: Friday, June 30, 2023, 22:47 [IST]

Source link