Namma Metro Updates: ಬೆಂಗಳೂರಿನ 3 ಕಡೆ ಹೊಸ ಮೆಟ್ರೋ ಮಾರ್ಗ ಸ್ಥಾಪನೆಗೆ ಪ್ರಸ್ತಾವನೆ, | Namma Metro: Bengaluru Will Get 3 New Metro Routes, Proposal Submit by BMRCL

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 22: ರಾಜ್ಯ ರಾಜಧಾನಿ ಬೆಂಗಳೂರು ಅತೀ ಉದ್ದ ಮೆಟ್ರೋ ಸಾರಿಗೆ ಹೊಂದಿರುವ ಎರಡನೇ ನಗರವಾಗಿದೆ. ಒಟ್ಟು 69 ಕಿಲೋ ಮೀಟರ್ ಮೆಟ್ರೋ ಸೇವೆ ಚಾಲ್ತಿಯಲ್ಲಿದೆ. ಇದೀಗ ಮತ್ತೆ ಹೊಸ 03 ಮೆಟ್ರೋ ಮಾರ್ಗಗಳ ಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಸದ್ಯ ಬೆಂಗಳೂರು ನಗರದಲ್ಲಿ ಎರಡು ಹಂತಗಳಲ್ಲಿ ‘ನಮ್ಮ ಮೆಟ್ರೋ’ ಕಾಮಗಾರಿ ನಡೆಯುತ್ತಿದೆ. ಇದರ ಬೆನ್ನಲ್ಲೆ ಉದ್ಯೋಗಿಗಳ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಐಟಿ ಕಾರಿಡಾರ್ ಸಂಪರ್ಕಿಸುವ ಒಟ್ಟು ಸುಮಾರು 75 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಯೋಜನೆಯನ್ನು ಬಿಎಂಆರ್‌ಸಿಎಲ್ ಸರ್ಕಾರದ ಮುಂದೆ ಪ್ರಸ್ತಾಪಿಸಿದೆ.

Bengaluru Namma Metro

ಬ್ರಾಂಡ್ ಬೆಂಗಳೂರು ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರ, ಬುಧವಾರ ನಗರದಲ್ಲಿ ಸುದ್ದಿಗೋಷ್ಠ ನಡೆಸಿದರು. ಇದರೊಂದಿಗೆ ಬೆಂಗಳೂರಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.

ಈ ವೇಳೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧ್ಯಕ್ಷ ಅಂಜುಮ್ ಪರ್ವೇಜ್ ಅವರು ಈ ಮೂರು ಹೊಸ ಮಾರ್ಗಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ಮಾರ್ಗ ಎಲ್ಲಿಂದ ಎಲ್ಲಿಗೆ ತಿಳಿಯಿರಿ

ಬಿಎಂಆರ್‌ಸಿಎಲ್ ಪ್ರಕಾರ, ವೈಟ್‌ಫಿಲ್ಡ್‌ನಿಂದ ಹೊಸಕೋಟೆವರೆಗಿನ 17 ಕಿಲೋ ಮೀಟರ್‌, ಒಳ ವರ್ತುಲ ರಸ್ತೆ ಸಮೀಪ ಒಟ್ಟು 35 ಕಿಲೋ ಮೀಟರ್ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಮರಾತ್ತಹಳ್ಳಿ ಅಂಡರ್‌ಪಾಸ್‌-ಕಾಡುಗೋಡಿವರೆಗೆ ಸುಮಾಋಉ 25 ಕಿಲೋ ಮೀಟರ್ ಉದ್ದದ ನೂತನ ಮೂರು ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶ ನಮ್ಮ ಮೆಟ್ರೋ ಹೊಂದಿದೆ.

Bengaluru Namma Metro

ಈ ಮೂಲಕ ಐಟಿ ಕಾರಿಡಾರ್, ಮಾರತ್ತಹಳ್ಳಿ ಭಾಗದಲ್ಲಿನ ಸಂಚಾರ ದಟ್ಟಣೆಗೆ ಕಡಿವಾಣ ಹಾಕು ಜೊತೆಗೆ ಜನರಿಗೆ ವೇಗದ ಮತ್ತು ಸುರಕ್ಷಿತ ಸಾರಿಗೆ ಒದಗಿಸುವ ಚಿಂತನೆ ಇದೆ. ಸದ್ಯ ಈ ಪ್ರಸ್ತಾವನೆಗೆ ಸರ್ಕಾರದಿಂದ ಏನು ಪ್ರತಿಕ್ರಿಯೆ ಬರುತ್ತಿದೆ ಎಂದು ಕಾದು ನೋಡಬೇಕಿದೆ.

ಸದ್ಯ ಬೆಂಗಳೂರಿನಲ್ಲಿ ಮೂರನೇ ಹಂತದ ಮೆಟ್ರೋ ಕಾಮಗಾರಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಯೋಜನೆಯಡಿ ಕೆಂಪಾಪುರ ಕೆರೆ-ಜೆಪಿ ನಗರ, ಕಡುಬಗೆರೆ-ಹೊಸಹಳ್ಳಿ ವರೆಗೆ ಮೆಟ್ರೋ ಮಾರ್ಗ ನಿರ್ಮಾಣಗೊಳ್ಳಲಿದೆ. ಈ ಸಂಬಂಧ ಸಮಗ್ರ ಯೋಜನಾ ವರದಿಯನ್ನು ಅಧಿಕಾರಿಗಳು ರೂಪಿಸಿದ್ದಾರೆ.

Namma Metro 2025ಕ್ಕೆ ಬೆಂಗಳೂರಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಪೂರ್ಣNamma Metro 2025ಕ್ಕೆ ಬೆಂಗಳೂರಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಪೂರ್ಣ

ಬೈಯಪ್ಪನಹಳ್ಳಿ-ಕೆಆರ ಪುರ ಮಾರ್ಗ ಶೀಘ್ರ ಮುಕ್ತ

2023ರ ಅಂತ್ಯಕ್ಕೆ ಆರ್‌.ರವಿ ರಸ್ತೆ-ಬೊಮ್ಮಸಂದ್ರವರೆಗಿನ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ಇನ್ನೂ ಐಟಿ ಕಾರಿಡಾರ್‌ ವಿಸ್ತರಣೆಯಾದ ಕೆ.ಆರ್‌.ಪುರಂ-ವೈಟ್‌ಫಿಲ್ಡ್ ಮಾರ್ಗ ಕೆಲ ತಿಂಗಳ ಹಿಂದೆ ಮುಕ್ತಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಂಪರ್ಕ ಕೊಂಡಿಯಾಗಿರುವ ಬೈಯಪ್ಪನಹಳ್ಳಿ ಮತ್ತು ಕೆಆರ್‌. ಪುರಂ ವರೆಗಿನ ಸುಮಾರು 2.5 ಕಿಲೋ ಮೀಟರ್ ಉದ್ದದ ಮಾರ್ಗ ಮುಕ್ತಗೊಳ್ಳಲಿದೆ. ಇಲ್ಲಿ ಪ್ರಾಯೋಗಿಕ ಕಾರ್ಯ, ಸಿಗ್ನಲಿಂಗ್ ಪರೀಕ್ಷೆ, ಹಳಿ ತಪಾಸಣೆ ನಡೆಯುವುದು ಬಾಕಿ ಇದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary

Bengaluru Namma Metro: Bengaluru will get 3 new metro routes, Proposal Submit by BMRCL to Karnataka Government.

Story first published: Thursday, June 22, 2023, 12:20 [IST]

Source link