Namma Metro: ಸಹ ಪ್ರಯಾಣಿಕರಿಗೆ ಕಿರಿಕಿರಿ ನೀಡುವ ಈ ಕೆಲಸ ಮಾಡುವಂತಿಲ್ಲ: BMRCL | Bengaluru: BMRCL Ban Playing Of Music On Loudspeakers In The Namma Metro Rail

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 23: ಬೆಂಗಳೂರು ಮೆಟ್ರೋ ರೈಲುಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ತಡೆಯಲು ಸಂಗೀತ ಮೊಳಗಿಸುವುದಕ್ಕೆ ಬ್ರೇಕ್ ಹಾಕಿರುವ ಬಿಎಂಆರ್‌ಸಿಎಲ್ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ನಮ್ಮ ಮೆಟ್ರೋ ರೈಲುಗಳಲ್ಲಿ ಇನ್ಮುಂದೆ ಧ್ವನಿವರ್ಧಕಗಳಲ್ಲಿ ಸಂಗೀತ ಪ್ರಸಾರ ನಿಷೇಧಿಸಿದೆ.

ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಗುರುವಾರ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದರ ಪ್ರಕಾರ, ಸಾರ್ವಜನಿಕ ತೊಂದರೆ ತಪ್ಪಿಸುವ ಸಲುವಾಗಿ ನಮ್ಮ ಮೆಟ್ರೋ ರೈಲುಗಳಲ್ಲಿ ಧ್ವನಿವರ್ಧಕಗಳಲ್ಲಿ ಸಂಗೀತ ನುಡಿಸುವುದನ್ನು ನಿಷೇಧಿಸಿದೆ. ಆದರೆ ಪ್ರಯಾಣಿಸುವಂತೆ ಇಯರ್ ಫೋನ್ ಬಳಸಿ ಸಂಗೀತ ಆಲಿಸಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: BMRCL Ban Playing Of Music On Loudspeakers In The Namma Metro Rail

ಮೆಟ್ರೋ ಗಳಲ್ಲಿ ಓಡಾಡುವಾಗ ಮೊಬೈಲ್‌ನಲ್ಲಿ ಇಲ್ಲವೇ ಬ್ಲೂಟುತ್ ಸ್ಪೀಕರ್‌ಗಳ ಸಂಗೀತ ಹಾಕುವುದರಿಂದ ಅದು ಸಹ ಪ್ರಯಾಣಿಕರಿಗೆ ತೊಂದರೆ, ಕಿರಿ ಕಿರಿ ಉಂಟು ಮಾಡುತ್ತದೆ. ಹೀಗಾಗಿ ಸಹ-ಪ್ರಯಾಣಿಕರ ಸಂವೇದನೆಯನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ರೈಲುಗಳ ಒಳಗೆ ಪ್ರಯಾಣದ ಸಂದರ್ಭದಲ್ಲಿ ಜೋರಾಗಿ ಸಂಗೀತ ಕೇಳುವುದನ್ನು ನಿಷೇಧಿಸಲಾಗಿದೆ.

Namma Metro Updates: ಬೆಂಗಳೂರಿನ 3 ಕಡೆ ಹೊಸ ಮೆಟ್ರೋ ಮಾರ್ಗ ಸ್ಥಾಪನೆಗೆ ಪ್ರಸ್ತಾವನೆ,Namma Metro Updates: ಬೆಂಗಳೂರಿನ 3 ಕಡೆ ಹೊಸ ಮೆಟ್ರೋ ಮಾರ್ಗ ಸ್ಥಾಪನೆಗೆ ಪ್ರಸ್ತಾವನೆ,

ನಮ್ಮ ಮೆಟ್ರೋ ಎಂಡಿ ಪ್ರತಿಕ್ರಿಯೆ

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು, ಸಂಗೀತ ನಿಷೇಧ ಉತ್ತಮವಾದದ್ದು. ಇತಯ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಹೇಳಿದರು. ಆದರೆ ರೈಲಿನಲ್ಲಿ ಒಂದು ವೇಳೆ ಧ್ವನಿವರ್ಧಕಗಳಲ್ಲಿ ಇಲ್ಲವೇ ಜೋರಾಗಿ ಸಂಗೀತ ಕೇಳಿದವರಿಗೆ ಏನು ಶಿಕ್ಷೆ ಎಂಬುದನ್ನು ನಮ್ಮ ಮೆಟ್ರೋ ಆಗಲಿ, ಅಧಿಕಾರಿಗಳಾಗಲಿ ತಿಳಿಸಿಲ್ಲ.

Bengaluru: BMRCL Ban Playing Of Music On Loudspeakers In The Namma Metro Rail

ಮೆಟ್ರೋ ರೈಲು ಸೇವೆ ಆರಂಭವಾದಾಗಿನಿಂದಲೇ ಪ್ರಯಾಣಿಕರು ಮತ್ತು ಸ್ವಚ್ಛತೆ ಅನುಕೂಲಕ್ಕಾಗಿ ಇಂತಹ ಹಲವು ನಿರ್ಬಂಧಗಳನ್ನು ನಮ್ಮ ಮೆಟ್ರೋ ಕೈಗೊಂಡಿದೆ. ಅದರಲ್ಲಿ ಈ ಸಂಗೀತ ನಿಷೇಧವು ಒಂದು ಎನ್ನಲಾಗಿದೆ.

ರೈಲಿನಲ್ಲಿ ಪ್ರಯಾಣಿಸುವಾಗ ವಿಧಿಸಲಾಗಿರುವ ಹಲವು ನಿರ್ಬಂಧಗಳಲ್ಲಿ ಸಂಗೀತ ನುಡಿಸಲು ಅವಕಾಶ ನೀಡದಿರುವುದು ಕೂಡ ಒಂದು ಎಂದರು.

Namma Metro 2025ಕ್ಕೆ ಬೆಂಗಳೂರಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಪೂರ್ಣNamma Metro 2025ಕ್ಕೆ ಬೆಂಗಳೂರಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಪೂರ್ಣ

ಬಿಎಂಆರ್‌ಸಿಎಲ್‌ ಇತ್ತೀಚೆಗೆ ನಮ್ಮ ಮೆಟ್ರೋ ರೈಲುಗಳಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಮೇಲೆ ಸಾರ್ವಜನಿಕ ಜಾಗೃತಿ ಮೂಡಿಸಲಾಗುತ್ತಿದೆ. ಚಿತ್ರಗಳು, ವಿಡಿಯೋ ಡಿಸ್ಪ್ಲೈ ಆಧರಿಸಿ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ.

ಮೆಟ್ರೋ ನಿಲ್ದಾಣ ವ್ಯಾಪ್ತಿಯಲ್ಲಿ ಧೂಮ್ರಪಾನ, ಮೆಟ್ರೋ ಒಳಗೆ ಆಹಾರ ಸೇವನೆಗೆ ನಿರ್ಬಂಧ ಹೇರಲಾಗಿದೆ. ರೈಲು ಹತ್ತುವಾಗ ಲೈನ್ ವ್ಯವಸ್ಥೆಯನ್ನು ಪಾಲಿಸಬೇಕು. ರೈಲಿಗೆ ಕಾಯುತ್ತ ನಿಂತಾಗಲೂ ಅಗತ್ಯ ಮುನ್ಸೂಚನೆಗಳನ್ನು ಅನುಸರಿಸುವುದು, ಬೋಗಗಿಳಲ್ಲಿ ನಿಂತಾಗ ಡೋರ್ ಓಪನ್, ಬಾಗಿಲ ಸಂಧಿಯಲ್ಲಿ ಕೈ ಇಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಬೆಂಗಳೂರಿನ ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥೆ ಸಂಸ್ಥಾಪಕ ರಾಜ್‌ಕುಮಾರ್ ಅವರು, ಸಂಗೀತ ಪ್ರಸಾರದಲ್ಲಿ ನಮ್ಮ ಮೆಟ್ರೋ ಕೈಗೊಂಡಿರುವ ನಿರ್ಧಾರವನ್ನು ಸ್ವಾಗಿತಿಸಿ ಶ್ಲಾಘಿಸಿದ್ದಾರೆ. ಮೆಟ್ರೋ ರೈಲುಗಳಲ್ಲಿ ಸಣ್ಣನೆಯ/ಮೃದು ಸಂಗೀತವನ್ನು ನುಡಿಸುವುದು ಉತ್ತಮ ಎಂದು ನನ್ನ ಭಾವನೆ. ಆದರೆ ಅನೇಕ ಮಂದಿ ಹಿತವಾಗಿ ಸಂಗೀತ ಕೇಳದೇ ಇತರರಿಗೆ ತೊಂದರೆಯಾಗುವಂತೆ ಜೋರಾಗಿ ಕೇಳುತ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಅವರು ತಿಳಿಸಿದರು.

ಹೊಸ 3 ಮೆಟ್ರೋ ಮಾರ್ಗದ ಪ್ರಸ್ತಾವನೆ ಸಲ್ಲಿಕೆ

ಸಿಲಿಕಾನ್ ಸಿಟಿಯಲ್ಲಿ ಹಾಲಿ ಎರಡು ಹಂತಗಳಲ್ಲಿ ‘ನಮ್ಮ ಮೆಟ್ರೋ’ ಮಾರ್ಗ ನಿರ್ಮಾಕ ಕೆಲಸ ನಡೆಯುತ್ತಿದೆ. ಇದರ ಜತೆ ಜೊತೆಗೆ ಉದ್ಯೋಗಿಗಳ ಸೇರಿದಂತೆ ಸಾರ್ವಜನಿಕರ ಓಡಾಟ ಅಧಿಕವಾಗಿರುವ ಐಟಿ ಕಾರಿಡಾರ್ ಸಂಪರ್ಕಿಸಲಿರುವ ಸುಮಾರು 77 ಕಿಲೋ ಮೀಟರ್ ಉದ್ದದ ಮೂರು ಹೊಸ ಮೆಟ್ರೋ ಮಾರ್ಗ ನಿರ್ಮಾಣದ ಪ್ರಸ್ತಾವನೆಯನ್ನು ನಮ್ಮ ಮೆಟ್ರೋ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಸಲ್ಲಿಕೆಯಾದ ಪ್ರಸ್ತಾವನೆ ಪ್ರಕಾರ, ನಗರದ ಒಳ ವರ್ತುಲ ರಸ್ತೆ ಬಳಿಕ ಒಟ್ಟು 35 ಕಿಲೋ ಮೀಟರ್, ವೈಟ್‌ಫಿಲ್ಡ್‌ನಿಂದ ಹೊಸಕೋಟೆವರೆಗಿನ 17 ಕಿಲೋ ಮೀಟರ್‌ ಹಾಗೂ ಹಳೇ ವಿಮಾನ ನಿಲ್ದಾಣ ರಸ್ತೆ ಕಡೆಗಿನಿಂದ ಮಾರತ್ತಹಳ್ಳಿ -ಕಾಡುಗೋಡಿಯವರೆಗೆ 25 ಕಿಮೀ. ಸೇರಿದಂತೆ ಒಟ್ಟು 77 ಮೀಟರ್ ಉದ್ದದ ನೂತನ 03 ಮೆಟ್ರೋ ಮಾರ್ಗ ಗಳನ್ನು ನಿರ್ಮಿಸಲು ನಮ್ಮ ಮೆಟ್ರೋ ಚಿಂತನೆ ನಡೆಸಿದೆ. ಈ ಬಗ್ಗೆ ಸರ್ಕಾರದಿಂದ ಯಾವ ಮರು ಉತ್ತರ ಬಂದಿಲ್ಲ ಎಂದು ತಿಳಿದು ಬಂದಿದೆ.

English summary

Bengaluru: BMRCL ban playing of music on loudspeakers in the namma metro rail.

Story first published: Friday, June 23, 2023, 18:29 [IST]

Source link