Namma Metro: ಮಹಿಳೆಯರಿಗೆ ಮಟ್ರೋದಲ್ಲೂ ಉಚಿತ ಸಂಚಾರಕ್ಕೆ ಬೇಡಿಕೆ | Doctor Rise Demand to Govt Will Given Free Travel For Women In Namma Metro, tweet viral

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 28: ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದಷ್ಟೇ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ‘ಶಕ್ತಿ ಯೋಜನೆ’ಗೆ ಚಾಲನೆ ದೊರೆತಿದೆ. ಇದರ ಬೆನ್ನಲ್ಲೆ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲೂ ಉಚಿತ ಪ್ರಯಾಣದ ಬೇಡಿಕೆ ಸರ್ಕಾರದ ಮುಂದಿಡಲಾಗಿದೆ.

ಈಗಾಗಲೇ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಬೆಂಗಳೂರಿನ ಹಿರಿಯ ವೈದ್ಯರೊಬ್ಬರು ಬೆಂಗಳೂರು ನಮ್ಮ ಮೆಟ್ರೋದಲ್ಲಿ (Namma metro) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಮತಿಸಬೇಕು ಎಂದು ಆಗ್ರಹಿಸಿದ್ದಾರೆ.

Doctor Rise Demand to Govt Will Given Free Travel For Women In Namma Metro, tweet viral

ಮೆಟ್ರೋ ನಲ್ಲಿ ಉಚಿತ ಪ್ರಯಾಣ ಕುರಿತು ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ದೀಪಕ್ ಕೃಷ್ಣಮೂರ್ತಿ ಅವರು ಮಾಡಿರುವ ಈ ಟ್ವೀಟ್ ಸಾಕಷ್ಟು ಮುನ್ನೆಲೆಗೆ ಬರುತ್ತಿದೆ. ಸಾರಿಗೆ ಬಸ್‌ಗಳಂತೆ ನಮ್ಮ ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಮಾಡಿಕೊಂಡಿ ಎಂದು ಅವರು ಬರೆದುಕೊಂಡಿದ್ದಾರೆ.

ನಮ್ಮ ಮೆಟ್ರೋ 2ನೇ ಹಂತಕ್ಕೆ 3045 ಕೋಟಿ ಅನುದಾನಕ್ಕೆ ಒಪ್ಪಿಗೆ ನಮ್ಮ ಮೆಟ್ರೋ 2ನೇ ಹಂತಕ್ಕೆ 3045 ಕೋಟಿ ಅನುದಾನಕ್ಕೆ ಒಪ್ಪಿಗೆ

ವೈದ್ಯರು ಮಹಿಳೆಯರಿಗೆ ಉಚಿತ ಚಿಕತ್ಸೆ ನೀಡಲಿ

ವಿಶೇಷವೆಂದರೆ ವೈದ್ಯರ ಟ್ವೀಟ್‌ಗೆ ಪ್ರತಿಕ್ರಿಯೆ ಸಾರ್ವಜನಿರೊಬ್ಬರು “ವೈದ್ಯರು ಎಲ್ಲಾ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಬೇಕು, ಇದಕ್ಕೆ ಅವಕಾಶ ನೀಡಲಿದೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ವಿರುದ್ಧವಾಗಿ ಮತ್ತೊಬ್ಬ ವೈದ್ಯ ಡಾ.ಫಿಲೋಮತ್ ಎಂಬುವವರು ಹೆಣ್ಣುಮಕ್ಕಳು ಎಂಬ ಕಾರಣಕ್ಕೆ ಯಾವುದನ್ನೂ ಉಚಿತವಾಗಿ ನೀಡಬಾರದು ಎಂದರೆ, ಇನ್ನೊಬ್ಬರು ವಿಮಾನದಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಹೇಳುವ ಮೂಲಕ ಮೆಟ್ರೋದಲ್ಲಿ ಉಚಿತ ಪ್ರಯಾಣದ ವಿಚಾರ ಭಾರೀ ಚರ್ಚೆಗೆಕಾರಣವಾಗಿದೆ.

Doctor Rise Demand to Govt Will Given Free Travel For Women In Namma Metro, tweet viral

ಈ ಉಚಿತ ಸಾರಿಗೆಗೆ ಅವಕಾಶ ನೀಡುವುದರಿಂದ ಕನಕಪುರ, ಮಾಗಡಿ ಮತ್ತು ತುಮಕೂರಿನಿಂದ ತಮ್ಮ ಕೆಲಸದ ಸ್ಥಳಗಳಿಗೆ ದೂರ ಪ್ರಯಾಣಿಸುವ ಗಾರ್ಮೆಂಟ್ಸ್ ಕಾರ್ಮಿಕರಿಗೆ ಹೆಚ್ಚು ನೆರವಾಗುತ್ತದೆ. ಇನ್ಣೂ ಮಹಿಳಾ ಟಿಕ್ಕಿಗಳಿಗೆ ಸಾರಿಗೆಯಲ್ಲಿ ರಿಯಾಯಿತಿ ಘೊಷಿಸಬೇಕು ಎಂದು ಮೈಸೂರಿನ ಅನಿಲ್ ಅರಸ್ ಹೇಳಿದ್ದಾರೆ.

ಪ್ರಯಾಣಕ್ಕೆ ರಿಯಾಯಿತಿ ನೀಡಿ

ಮೆಟ್ರೋ ಸಾಮಾನ್ಯವಾಗಿ ಕಡಿಮೆ ದೂರದ ಪ್ರಯಾಣಕ್ಕೆ ಆದ್ಯತೆಯ ಸಾರಿಗೆ ವಿಧಾನವಲ್ಲ. ದೂರದ ಪ್ರಯಾಣ ಮಾಡುವವರು ಈ ಮೆಟ್ರೋ ರೈಲು ಬಳಸಿದರೆ ಅದಕ್ಕೆ ತಕ್ಕ ಹಣ ಟಿಕೆಟ್ ಹಣ ಭರಿಸಲು ಸಮರ್ಥರಿತ್ತಾರೆ. ಪುರುಷರನ್ನೂ ಒಳಗೊಂಡಂತೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಹೆಚ್ಚಿನ ಜನರನ್ನು ಉತ್ತೇಜಿಸಲು ಎಲ್ಲ ಬಸ್‌ಗಳ ಪ್ರಯಾಣಕ್ಕೆ ಸಬ್ಸಿಡಿ ನೀಡುವುದು ಉತ್ತಮ ವಿಧಾನ ಎಂದು ಕೆಲವು ಹೇಳಿದ್ದಾರೆ.

ಈ ಕುರಿತ ಮೆಟ್ರೋ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಕೂತುಹಲದಿಂದ ಕಾಯುತ್ತಿದೆ.

English summary

Doctor rise demand to karnataka congress government will given free travel for women in Bengaluru Namma Metro, tweet viral,

Story first published: Wednesday, June 28, 2023, 17:37 [IST]

Source link