Bengaluru
oi-Gururaj S
ಬೆಂಗಳೂರು, ಜೂನ್ 19; ವೈಟ್‌ಫೀಲ್ಡ್-ಕೆ. ಆರ್. ಪುರ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ. ಜುಲೈ 15ರ ಬಳಿಕ ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಇದರಿಂದಾಗಿ ವೈಟ್‌ಫೀಲ್ಡ್‌ನಿಂದ ನೇರವಾಗಿ ಸಂಚಾರ ನಡೆಸಲು ಅನುಕೂಲವಾಗಲಿದೆ.
ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್ ನಮ್ಮ ಮೆಟ್ರೋ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸದ ಕಾರಣ ನಮ್ಮ ಮೆಟ್ರೋಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರಿಲ್ಲ.
Namma Metro: ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗಕ್ಕೆ ಪ್ರಾಯೋಗಿಕ ಚಾಲನೆ, ಕಾರ್ಯಾಚರಣೆ- ದಿನಾಂಕ, ಅಂಕಿಅಂಶ, ಮಾಹಿತಿ, ವಿವರ
ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ಇಳಿದು, ಎರಡು ಕಿ. ಮೀ. ಬಸ್‌ನಲ್ಲಿ ಸಾಗಿ ಮತ್ತೆ ಮೆಟ್ರೋ ಹತ್ತಲು ಜನರು ಬಯಸುತ್ತಿಲ್ಲ. ಈಗ ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವೆ ನಡೆಯತ್ತಿದ್ದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಟ್ರಾಕ್, ಸಿಗ್ನಲ್ ಸೇರಿದಂತೆ ಕೆಲವು ತಾಂತ್ರಿಕ ಕೆಲಸಗಳು ಪೂರ್ಣಗೊಂಡರೆ ನೇರವಾಗಿ ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ.
Namma Metro: ನವೆಂಬರ್ ವೇಳೆಗೆ ಬೆಂಗಳೂರಿಗೆ ನಾಲ್ಕು ಮೆಟ್ರೋ ಮಾರ್ಗ: ಡಿಕೆ ಶಿವಕುಮಾರ್
ವಾಹನ ಸಂಚಾರ ದಟ್ಟಣೆ ಕಡಿಮೆ; ಈ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭಗೊಂಡರೆ ಪ್ರತಿನಿತ್ಯ ಸುಮಾರು 1 ಲಕ್ಷ ಜನರು ಈ ಮಾರ್ಗದಲ್ಲಿ ಸಂಚಾರ ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ನಿರೀಕ್ಷೆ ಮಾಡಿದೆ. ನೇರ ಮೆಟ್ರೋ ಸಂಚಾರ ಆರಂಭವಾದರೆ ಹೊರ ವರ್ತುಲ ರಸ್ತೆಗಳಲ್ಲಿ ವಾಹನಗಳ ಸಂದಣಿಯೂ ಕಡಿಮೆಯಾಗುವ ನಿರೀಕ್ಷೆ ಇದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಮ್ಮ ಮೆಟ್ರೋಗೆ ಆತಂಕ!
ಬಿಎಂಆರ್‌ಸಿಎಲ್ 2022ರ ಡಿಸೆಂಬರ್‌ನಲ್ಲಿಯೇ ಎರಡು ಹಂತದಲ್ಲಿ ಈ ಮಾರ್ಗವನ್ನು ಲೋಕಾರ್ಪಣೆ ಮಾಡಲು ತೀರ್ಮಾನ ಮಾಡಿತ್ತು. ಮೊದಲ ಹಂತದಲ್ಲಿ ವೈಟ್‌ಫೀಲ್ಡ್ ಕೆ. ಆರ್. ಪುರ ಮತ್ತು ಎರಡನೇ ಹಂತದಲ್ಲಿ ಕೆ. ಆರ್. ಪುರ ಬೈಯಪ್ಪನಹಳ್ಳಿ ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧರಿಸಲಾಗಿತ್ತು.
ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಕಾಮಗಾರಿಯ ಕಾರಣ ಈ ಮಾರ್ಗ ಸಂಚಾರಕ್ಕೆ ವಿಳಂಬವಾಗಿದೆ. 65 ಮೀಟರ್ ಉದ್ದದ ಮಾರ್ಗದಲ್ಲಿ ಸ್ಟೀಲ್ ಗರ್ಡರ್‌ಗಳನ್ನು ಅಳವಡಿಕೆ ಮಾಡಬೇಕಾಗಿತ್ತು. ರೈಲು ಹಳಿಯೂ ಹಾದು ಹೋಗಿರುವ ಕಾರಣ ನೈಋತ್ಯ ರೈಲ್ವೆಯ ಜೊತೆ ಸಮಾಲೋಚನೆ ನಡೆಸಿ ಕಾಮಗಾರಿ ಕೈಗೊಳ್ಳಲಾಗಿತ್ತು.
ವೈಟ್‌ಫೀಲ್ಡ್-ಕೆ. ಆರ್. ಪುರ ಬಿಎಂಆರ್‌ಸಿಎಲ್‌ನ ನೇರಲೆ ಮಾರ್ಗದ ವಿಸ್ತರಿತ ಯೋಜನೆಯಾಗಿದೆ. ಈಗ ಬಾಕಿ ಇರುವ ಎರಡು ಕಿ. ಮೀ. ಮಾರ್ಗದಲ್ಲಿ ಮೂರು ಸ್ಟೇಷನ್‌ಗಳಿವೆ. ಮೆಟ್ರೋ ಸಂಚಾರ ಆರಂಭವಾದರೆ ಈಗ ಬಸ್‌ನಲ್ಲಿ ಹೋಗುವುದಕ್ಕಿಂತ ಅರ್ಧ ತಾಸು ಉಳಿತಾಯವಾಗಲಿದೆ.
ಗರ್ಡರ್ ಅಳವಡಿಸುವುದು, ವಯಡಕ್ಟ್ ಕಾಮಗಾರಿ, ಹಳಿ ಆಳವಡಿಕೆ ಸೇರಿ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಮುಗಿಯಲು ಸುಮಾರು ಮೂರು ವಾರ ಬೇಕು ಎಂದು ಅಂದಾಜಿಸಲಾಗಿದೆ. ಬಳಿಕ ಪ್ರಾಯೋಗಿಕ ಸಂಚಾರ ನಡೆಸಿ, ರೈಲು ಸೇವೆ ಆರಂಭಿಸಲಾಗುತ್ತದೆ.
English summary
Good news for Bengaluru. Baiyappanahalli to KR Pura Namma Metro lane civil works completed. Route may open for train service from July 15.