Namma Metro: ಬೆಂಗಳೂರು ಮೆಟ್ರೊ ಗ್ರೀನ್ ಲೈನ್ ಕೊನೆಯ ಹಂತ ಶೀಘ್ರದಲ್ಲೇ ಪ್ರಾರಂಭ- ನಿಲ್ದಾಣ, ಮಾರ್ಗ, ವಿವರ ತಿಳಿಯಿರಿ | Namma Metro: Green Line Starts Operations in August; Check Stations, Routes and More

Bengaluru

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 28: 5 ವರ್ಷಗಳ ಸುದೀರ್ಘ ವಿಳಂಬದ ನಂತರ, ಬೆಂಗಳೂರು ಮೆಟ್ರೋ ( Bengaluru Metro ) ಗ್ರೀನ್ ಲೈನ್ ( Green Line ) ತುಮಕೂರು ರಸ್ತೆಯಲ್ಲಿ ಆರಂಭವಾಗುತ್ತಿದೆ. ಬಹುನಿರೀಕ್ಷಿತ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಹಸಿರು ಮಾರ್ಗವು ಈ ವರ್ಷದ ಆಗಸ್ಟ್‌ನಿಂದ ಪ್ರಯಾಣಿಕರಿಗೆ ತೆರೆದುಕೊಳ್ಳಲಿದೆ. ಇದು ತಡೆರಹಿತ ಪ್ರಯಾಣವನ್ನು ಜನರಿಗೆ ನೀಡಲು ಪ್ರಾರಂಭಿಸುತ್ತದೆ ಎಂದು ವರದಿ ತಿಳಿಸಿದೆ.

 Green Line Starts Operations in August

ವರದಿಗಳ ಪ್ರಕಾರ, 3 ಕಿಲೋಮೀಟರ್ ಉದ್ದದ ವ್ಯಾಪ್ತಿಯಲ್ಲಿ ಚಿಕ್ಕಬಿದರಕಲ್ಲು, ಮಂಜುನಾಥನಗರ, ಮತ್ತು ಮಾದಾವರ ಸೇರಿದಂತೆ ಮೂರು ನಿಲ್ದಾಣಗಳನ್ನು ಹೊಂದಿದೆ. ಇದು 2017 ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾಧೀನ ಸಮಸ್ಯೆ ಮತ್ತು ಇತರ ಸಂಬಂಧಿತ ಸಮಸ್ಯೆಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಮೆಟ್ರೋ ಗ್ರೀನ್ ಲೈನ್ ನಿಲ್ದಾಣಗಳು

95 ರಷ್ಟು ಕಾಮಗಾರಿಗಳು ಸಂಪೂರ್ಣಗೊಂಡಿವೆ ಎಂದು ನಾಗಸಂದ್ರ- ಮಾದಾವರ ಮಾರ್ಗದ ಹೊಣೆ ಹೊತ್ತಿರುವ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ( ಬಿಎಂಆರ್‌ಸಿಎಲ್ ) ವರದಿ ನೀಡಿದೆ. ಉಳಿದ ಕೆಲಸವು ಪೂರ್ಣಗೊಳ್ಳಲು ಕೆಲವೇ ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮಾರ್ಗವು ಒಟ್ಟು ಮೂರು ನಿಲ್ದಾಣಗಳನ್ನು ಹೊಂದಿದೆ. ಮಾದಾವರ, ಚಿಕ್ಕಬಿದರಕಲ್ಲು, ಮಂಜುನಾಥನಗರ ಮೆಟ್ರೊ ನಿಲ್ದಾಣಗಳು ಈ ಮಾರ್ಗದಲ್ಲಿ ಬರುತ್ತವೆ.

ಬೆಂಗಳೂರು ಮೆಟ್ರೋ ಗ್ರೀನ್ ಲೈನ್ ಮಾರ್ಗ

ಆಗಷ್ಟ್‌ನಲ್ಲಿ ಯೋಜನೆಯು ಪೂರ್ಣಗೊಳ್ಳಲಿದೆ. ಈ ಸೇವೆಯನ್ನು ಪ್ರಾರಂಭಿಸಿದ ನಂತರ, ಇದು ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಬೆಂಗಳೂರಿನ ಮೊದಲ ಮೆಟ್ರೋ ಮಾರ್ಗವಾಗಲಿದೆ. ಇದು ಬಿಐಇಸಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

 Green Line Starts Operations in August

ಈ ಯೋಜನೆಯು ಪ್ರಯಾಣಿಕರಿಗೆ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದು ನಗರದ ಹೊರವಲಯವನ್ನು ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ಗೆ ಸಂಪರ್ಕಿಸುತ್ತದೆ.

ರಸ್ತೆಯ ಮೂಲಕ ಈ ಮಾರ್ಗಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ದೊಡ್ಡ ಪರಿಹಾರವನ್ನು ಗ್ರೀನ್‌ ಲೈನ್ ಮೆಟ್ರೊ ನೀಡುತ್ತದೆ. ಇದರ ಹೊರತಾಗಿ, ಪ್ರಯಾಣಿಕರು ಸಮಯವನ್ನು ಉಳಿಸಲು ಸಾಧ್ಯವಾಗುತ್ತದೆ.

ಬೆಂಗಳೂರು ನಗರಕ್ಕೆ ಮೆಟ್ರೋ ರೈಲು ವ್ಯವಸ್ಥೆಯ ಮೊದಲ ಹಂತದ ನಿರ್ಮಾಣದ ಸಮಯದಲ್ಲಿ ಪರ್ಪಲ್ ಲೈನ್ ಜೊತೆಗೆ ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ನಿರ್ಮಿಸಲಾಯಿತು. 30.5 ಕಿಮೀ ಮಾರ್ಗವು ವಾಯುವ್ಯದಲ್ಲಿರುವ ನಾಗಸಂದ್ರವನ್ನು ದಕ್ಷಿಣ ಭಾಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ಗೆ ಸಂಪರ್ಕಿಸುತ್ತದೆ.

ಈ ಮಾರ್ಗವು ಉತ್ತರದಲ್ಲಿರುವ ಪೀಣ್ಯ ಮತ್ತು ಯಲಹಂಕದ ಕೈಗಾರಿಕಾ ಕೇಂದ್ರಗಳನ್ನು ಮೆಜೆಸ್ಟಿಕ್‌ ಅನ್ನು ಸಂಪರ್ಕಿಸುತ್ತದೆ. ಬೆಂಗಳೂರಿನ ದಕ್ಷಿಣದ ವಸತಿ ಪ್ರದೇಶಗಳಾದ ಬಸವನಗುಡಿ, ಜಯನಗರ, ಬನಶಂಕರಿ ಇತ್ಯಾದಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

 Namma Metro: ಸಿಲ್ಕ್‌ಬೋರ್ಡ್‌- ಏರ್‌ಪೋರ್ಟ್‌ ಮೆಟ್ರೊ ಲಿಂಕ್‌ಗೆ ಯೋಜನೆಗೆ ಗಡುವು- ಮಾಹಿತಿ, ವಿವರ Namma Metro: ಸಿಲ್ಕ್‌ಬೋರ್ಡ್‌- ಏರ್‌ಪೋರ್ಟ್‌ ಮೆಟ್ರೊ ಲಿಂಕ್‌ಗೆ ಯೋಜನೆಗೆ ಗಡುವು- ಮಾಹಿತಿ, ವಿವರ

ಹಸಿರು ಮಾರ್ಗವಲ್ಲಿ ಈಗಾಗಲೇ 26 ಎಲಿವೇಟೆಡ್‌ ನಿಲ್ದಾಣಗಳು ಮತ್ತು 3 ಭೂಗತ ನಿಲ್ದಾಣಗಳಿವೆ. ಈ ಮಾರ್ಗವು ಮೆಜೆಸ್ಟಿಕ್ ನಿಲ್ದಾಣದ ಮೂಲಕ ಹಾದುಹೋಗುತ್ತದೆ, ಇದು ಗ್ರೀನ್ ಮತ್ತು ಪರ್ಪಲ್ ಲೈನ್‌ಗಳ ನಡುವಿನ ಇಂಟರ್‌ಚೇಂಜ್ ನಿಲ್ದಾಣವಾಗಿದೆ. ಈಗ ನಾಗಸಂದ್ರದಿಂದ ಮುಂದಿನ ಮೂರು ನಿಲ್ದಾಣಗಳನ್ನು ಸಂಪರ್ಕಿಸಲಿದೆ.

ಈ ಮಾರ್ಗದಲ್ಲಿ ಬರುವ ನಿಲ್ದಾಣಗಳು

1- ಮಾದಾವರ
2- ಚಿಕ್ಕಬಿದರಕಲ್ಲು
3- ಮಂಜುನಾಥನಗರ
4- ನಾಗಸಂದ್ರ
5- ದಾಸರಹಳ್ಳಿ
6- ಜಾಲಹಳ್ಳಿ
7- ಪೀಣ್ಯ ಉದ್ಯಮ
8- ಪೀಣ್ಯ
9- ಗೊರಗುಂಟೆಪಾಳ್ಯ
10- ಯಶವಂತಪುರ
11- ಸ್ಯಾಂಡಲ್ ಸೋಪ್ ಕಾರ್ಖಾನೆ
12- ಮಹಾಲಕ್ಷ್ಮಿ
13- ರಾಜಾಜಿನಗರ
14- ಮಹಾಕವಿ ಕುವೆಂಪು ರಸ್ತೆ
15- ಶ್ರೀರಾಮ್‍ಪುರ
16- ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ
17- ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್
18- ಚಿಕ್ಕಪೇಟೆ
19- ಕೃಷ್ಣ ರಾಜೇಂದ್ರ ಮಾರುಕಟ್ಟೆ
20- ನ್ಯಾಷನಲ್ ಕಾಲೇಜು
21- ಲಾಲ್ಬಾಗ್
22- ಸೌತ್ ಎಂಡ್ ಸರ್ಕಲ್
23- ಜಯನಗರ
24- ರಾಷ್ಟ್ರೀಯ ವಿದ್ಯಾಲಯ ರಸ್ತೆ
25- ಬನಶಂಕರಿ
26- ಜಯಪ್ರಕಾಶ ನಗರ
27- ಯಲಚೇನಹಳ್ಳಿ
28- ಕೋಣನಕುಂಟೆ ಕ್ರಾಸ್
29- ದೊಡ್ಡಕಲ್ಲಸಂದ್ರ
30- ವಾಜರಹಳ್ಳಿ
31- ತಲಘಟ್ಟಪುರ
32- ರೇಷ್ಮೆ ಸಂಸ್ಥೆ

English summary

Namma Metro: After a long delay of 5 years, Bangalore Metro Green Line is starting on Tumkur Road

Story first published: Wednesday, June 28, 2023, 16:50 [IST]

Source link