Namma Metro: ನಿಲ್ದಾಣಗಳಲ್ಲಿ PSD ವ್ಯವಸ್ಥೆ ಅಳವಡಿಕೆಗೆ BMRCL ನಿರ್ಧಾರ, ಏನಿದು? ಇದರ ಕೆಲಸವೇನು? | Namma Metro: BMRCL Decided To Implement PDS System In Metro Stations, Know More Details

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜುಲೈ 30: ಬೆಂಗಳೂರು ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಆತ್ಮಹತ್ಯೆ ಹಾಗೂ ಇನ್ನಿತರ ಅವಘಡಗಳನ್ನು ತಪ್ಪಿಸಲು ನಗರದ ಎಲ್ಲ ರೈಲು ನಿಲ್ದಾಣಗಳ ಪೈಕಿ ಸದ್ಯ ಒಂದು ರೈಲು ನಿಲ್ದಾಣಕ್ಕೆ ಹೊಸ ವ್ಯವಸ್ಥೆ ಸ್ಥಾಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ನಿರ್ಧರಿಸಿದೆ.

ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ (PSD) ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಮುಂದಾಗಿದೆ. ಇದರಿಂದ ಫ್ಲಾಟ್ ಫಾರಂಗಳ ಪ್ರಯಾಣಿಕರಿಗೆ ಸುರಕ್ಷತೆ ಹೆಚ್ಚಲಿದೆ, ಇನ್ನೂ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಯಂತಹ ಯತ್ನಕ್ಕೆ ತಡೆ ನೀಡಿದಂತಾಗುತ್ತದೆ. ಈ ಕಾರಣದಿಂದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಿಸುತ್ತಿರುವ (ಹಳದಿ ಮಾರ್ಗ) ಮೆಟ್ರೋ ನಿಲ್ದಾಣಕ್ಕೆ ಈ ವ್ಯವಸ್ಥೆ ಅಳವಡಿಕೆ ಆಗಲಿದೆ ಎಂದು ಟಿವಿ ನೈನ್ ವರದಿ ಮಾಡಿದೆ.

Namma Metro: BMRCL Decided To Implement PDS System In Metro Stations, Know More Details

ಕೇವಲ ಬೆಂಗಳೂರು ನಮ್ಮ ಮೆಟ್ರೋ ದಲ್ಲಿ ಮಾತ್ರವೇ ಇದು ಮೊದಲಲ್ಲ. ಇಡೀ ಕರ್ನಾಟಕ ರಾಜ್ಯದಲ್ಲಿ ಇಂತಹ PSD ವ್ಯವಸ್ಥೆಯ ಅಳವಡಿಸುತ್ತಿರುವುದು ಪ್ರಥಮ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದೆ. ಬೆಂಗಳೂರಿನಲ್ಲಿ ಹಾಲಿ 70 ಕಿಲೋ ಮೀಟರ್ ನಮ್ಮ ಮೆಟ್ರೋ ರೈಲುಗಳು ಸೇವೆ ನೀಡುತ್ತಿವೆ. ಒಟ್ಟು ಇಲ್ಲಿ 63 ನಿಲ್ದಾಣಗಳು ಇವೆ. ಅದರಲ್ಲಿ ಈವರೆಗೆ ಯಾವೊಂದು ನಿಲ್ದಾಣಕ್ಕೆ ಈ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ (PSD) ವ್ಯವಸ್ಥೆ ಅಳವಡಿಕೆ ಮಾಡಿಲ್ಲ. ಇನ್ಫೋಸಿಸ್ ಫೌಂಡೇಶನ್ ದೇಣಿಗೆಯಿಂದ ಕೋನಪ್ಪನ ಅಗ್ರಹಾರ ಸಮೀಪದ (Yellow line) ಮೆಟ್ರೋ ನಿಲ್ದಾಣದಲ್ಲಿ ಇದನ್ನು ಮೊದಲ ಭಾರಿಗೆ ಅಳವಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹಳದಿ ಮಾರ್ಗದ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಿರ್ಮಾಣ ಕಾಮಗಾರಿಯ ಕೆಲಸಗಳು ಅಂತಿಮ ಹಂತಕ್ಕೆ ಬಂದಿವೆ. ಇದೇ 2023ರ ವರ್ಷಾಂತ್ಯಕ್ಕೆ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳು ಓಡಾಡುವ ನಿರೀಕ್ಷೆ ಇದೆ.

ಕೆಲವು ಅವಘಡಗಳಿಗೆ ಪಿಎಎಸ್‌ಡಿ ಬ್ರೇಕ್ ಹಾಕಲಿದೆ

ಇನ್ನೂ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ (PSD) ವ್ಯವಸ್ಥೆ ಜಾರಿಯಿಂದಾಗಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಳಿ ಸಮೀಪದಲ್ಲಿ ಫೋಟೊ ತೆಗೆಯುವುದು, ರೀಲ್ಸ್‌ಗಳ ಹುಚ್ಚಾದಿಂದ ಆಗುವ ಅವಘಡ, ಆತ್ಮಹತ್ಯೆ ಪ್ರಕರಣಗಳು ಕಡಿಮೆ ಆಗುತ್ತವೆ. ಇತ್ತೀಚೆಗೆ ಸಣ್ಣ ಸಣ್ಣ ಮಕ್ಕಳು ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ರೈಲು ಹಳಿಗಳತ್ತ ಪೋಷಕರ ಕಣ್ತಪ್ಪಿಸಿ ಓಡುತ್ತವೆ. ಇದರಿಂದ ಅಚಾತುರ್ಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ.

Namma Metro: BMRCL Decided To Implement PDS System In Metro Stations, Know More Details

ಇಂತಹ ಎಲ್ಲ ನಕಾರಾತ್ಮಕ ಅಂಶಗಳಿಗೆ ಪಿಎಸ್‌ಡಿ ವ್ಯವಸ್ಥೆ ಕಡಿವಾಣ ಹಾಕಲಿದೆ. ಇದು ಪ್ಲಾಟ್‌‌ಫ್ಲಾರಂಗಳಲ್ಲಿ ಹಳಿಗೂ ಹಾಗೂ ಪ್ರಯಾಣಿಕರ ನಿಂತ ಸ್ಥಳಗಳ ಮಧ್ಯೆ ತಡೆಗೊಡೆಯಂತೆ ಕಾರ್ಯನಿರ್ವಹಿಸುತ್ತದೆ. ಹಳಿಗಳತ್ತ ಹೋಗುವವರಿಗೆ ಈ ತಡೆಗೋಡೆಗೆ ನಿಲ್ಲಬೇಕಾಗುತ್ತದೆ. ಮಕ್ಕಳು ರೈಲು ಹಳಿಗಳ ಬಳಿ ಹೋಗಲು ಆಗದಂತೆ ಇದು ತಡೆಯುತ್ತದೆ.

ದೆಹಲಿ-ಚೆನ್ನೈನಲ್ಲಿ ಪಿಎಸ್‌ಡಿ ವ್ಯವಸ್ಥೆ ಇದೆ

ದೇಶದ ಇತರ ಮೆಟ್ರೋ ನಗರಗಳಾದ ಚೆನೈ ಮತ್ತು ದೆಹಲಿಯಲ್ಲಿ ಈ ಪಿಎಸ್‌ಡಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಗುಲಾಬಿ (Metro Pink Line) ಪಿಂಕ್ ಹಾಗೂ ನೀಲಿ (Metro Blue Line) ನಲ್ಲಿ ಇದನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಪಿಂಕ್‌ ಲೈನ್ ನಲ್ಲಿ ಬರುವ 12 ಅಂಡರ್ ಗ್ರೌಂಡ್ ಸ್ಟೇಷನ್ ಗಳಲ್ಲಿ ಈ ಪಿಎಸ್‌ಡಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಅಷ್ಟೇ ಅಲ್ಲದೇ ನಗರದ ಜನ ನಿಬಿಡ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸುವ ಚಿಂತನೆ ನಡೆದಿದೆ.

English summary

Namma Metro: BMRCL has decided to implement PDS system in metro stations

Story first published: Sunday, July 30, 2023, 13:26 [IST]

Source link