Namma Metro: ತುಮಕೂರು ನಗರವರೆಗೆ ಮೆಟ್ರೋ ವಿಸ್ತರಣೆ?: ಜಿ ಪರಮೇಶ್ವರ | Karnataka Govt Thinking For Bengaluru Namma Metro Will Extended Till Tumkur, G Parameshwara

Tumakuru

oi-Shankrappa Parangi

|

Google Oneindia Kannada News

ತುಮಕೂರು, ಜುಲೈ 30: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ, ಮಹಿಳೆಯರು, ಮಕ್ಕಳು, ನಾಗರಿಕರು ಮತ್ತು ಐಟಿ ಸೇರಿದಂತೆ ವಿವಿಧ ಕಂಪನಿಯ ಉದ್ಯೋಗಿಗಳಿಗೆ ನಮ್ಮ ಮೆಟ್ರೋ (Namma Metro) ಹಾಲಿ 70 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವೇಗದ ಮತ್ತು ಸುರಕ್ಷಿತ ಸೇವೆ ನೀಡುತ್ತಿದೆ. ಈ ಸೇವೆ ಇದೀಗ ಮತ್ತಷ್ಟು ವಿಸ್ತರಣೆಗೊಳ್ಳಲು ಸಜ್ಜಾಗಿದೆ.

ಮುಂದಿನ ದಿನಗಳಲ್ಲಿ ಬೆಂಗಳೂರಿನಾದ್ಯಂತ ಆವರಿಸಿಕೊಳ್ಳುತ್ತಿರುವ ನಮ್ಮ ಮೆಟ್ರೋ ಸೇವೆ ನೆರೆಯ ಜಿಲ್ಲೆ ಹಾಗೂ ಉತ್ತಮ ಮಹಾನಗರ ಪಾಲಿಕೆ ಒಳಗೊಂಡಿರುವ ತುಮಕೂರು ನಗರಕ್ಕೆ ಬರಲಿದೆ. ಈ ಕುರಿತು ಮಾಹಿತಿ ನೀಡಿರುವ ತುಮಕೂರು ಜಿಲ್ಲೆ ಉಸ್ತುವಾರಿ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರು, ರಾಜ್ಯ ಸರ್ಕಾರ ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ತಿಳಿಸಿದರು.

Karnataka Govt Thinking For Bengaluru Namma Metro Will Extended Till Tumkur, G Parameshwara

ಜಿಲ್ಲೆಯ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶ ವಿತರಣಾ ಸಮಾರಂಭದಲ್ಲಿ ಅವರು ಮೆಟ್ರೋ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ನೇರ ನೇಮಕಾತಿ ಮೂಲಕ ಕಾಯಂ ಆಗಿ ನೇಮಕ

ತುಮಕೂರು ಪಾಲಿಕೆ ಒಳಗೊಂಡಂತೆ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ಒಟ್ಟು 276 ಪೌರಕಾರ್ಮಿಕರನ್ನು ವಿಶೇಷ ನೇರ ನೇಮಕಾತಿ ಮೂಲಕ ಕಾಯಂ ಮಾಡಲಾಗುತ್ತಿದೆ. ಇದರಲ್ಲಿ ಜಿಲ್ಲೆಯ 200ಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಿದ್ದ ಸಂತಸ ನೀಡಿದೆ ಎಂದರು.

ಸೂಕ್ತ ದಾಖಲಾತಿ ನೀಡದ 68 ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ನೀಡುವುದು ಬಾಕಿ ಇದೆ. ಸಿಂಧುತ್ವ ಮತ್ತು ಇನ್ನಿತರ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಪೌರ ಕಾರ್ಮಿಕರರನ್ನು ಭವಿಷ್ಯದಲ್ಲಿ ಕಾಯಂ ಮಾಡಲಾಗುವುದು. ಪೌರ ಕಾರ್ಮಿಕರ ಬಗ್ಗೆ ಯಾವದೇ ಕೀಳರಿಮೆ ಇಟ್ಟುಕೊಳ್ಳಬಾರದು ಎಂದು ಹೇಳಿದರು.

Karnataka Govt Thinking For Bengaluru Namma Metro Will Extended Till Tumkur, G Parameshwara

ತುಮಕೂರು ಮಹಾನಗರಪಾಲಿಕೆಯ 79 ಜನ ಇಂದು ಸಿಂಧುತ್ವ ಪ್ರಮಾಣ ಸೇರಿದಂತೆ ಅಗತ್ಯ ದಾಖಲೆ ನೀಡುವ ಮೂಲಕ ಅವರ ಉದ್ಯೋಗವನ್ನು ಖಾಯಂತ ಮಾಡುತ್ತಿದ್ದೇವೆ. ಉದ್ಯಾನ ನಗರಿ ಬೆಂಗಳೂರು ನಗರ ಏಷ್ಯಾ ಖಂಡದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ತುಮಕೂರು ಪ್ರತಿಷ್ಠಿತ ಮಹಾನಗರಪಾಲಿಕೆ ಆಗಿ ಪರಿವರ್ತನೆ

ಬೆಂಗಳೂರಿನ ಒಳಚರಂಡಿ, ರಸ್ತೆಗಳ ಸ್ವಚ್ಛತೆಗೆ, ವಿದೇಶಿಗರರಿಗೆ ನಮ್ಮೂರು ಸುಂದರವಾಗಿ ಕಾಣಲು ಅಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಸುಮಾರು 40,000 ಪೌರಕಾರ್ಮಿಕರು ಬೆಂಗಳೂರು ನಗರವನ್ನು ನಿತ್ಯ ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ. ಅದನ್ನು ಬಿಟ್ಟರೆ ತುಮಕೂರು ಪ್ರತಿಷ್ಠಿತ ಮಹಾನಗರಪಾಲಿಕೆ ಆಗಿ ಪರಿವರ್ತನೆ ಆಗುತ್ತಿದೆ.

ಭವಿಷ್ಯದಲ್ಲಿ ಸಾಕಷ್ಟು ಜನ ಹೆದ್ದಾರಿಗೆ ಹೊಂದಿಕೊಂಡಿರುವ ತುಮಕೂರಿನಲ್ಲಿ ನೆಲೆಸುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ತುಮಕೂರು ನಗರವನ್ನು ವ್ಯವಸ್ಥಿತವಾಗಿ ಬೆಳೆಸಬೇಕಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ಸುಮಾರು 3 ಸಾವಿರ ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಹಂಚಬೇಕಿದೆ. ಹೇಮಾವತಿ ನೀರಿನ ಹರಿಯುವಿಕೆಯಿಂದ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ತಗ್ಗಿದೆ. ಮೆಟ್ರೋ ಯೋಜನೆಯು ಈ ಭಾಗಕ್ಕೆ ವಿಸ್ತರಣೆ ಆಗಲದಿಎ ಎಂದು ತಿಳಿಸಿದರು.

ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಕೈಗವಸು, ಶೂಗಳು, ಕೋಟು, ಮಾಸ್ಕ್‌ ಸೇರಿದಂತೆ ಸುರಕ್ಷತಾ ಸಲಕರಣೆ ಧರಿಸಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ವೇಳೆ ಪೌರ ಕಾರ್ಮಿಕರಿಗೆ ಧಕ್ಕುವ ಎಲ್ಲ ಸರ್ಕಾರಿ ಸವಲತ್ತುಗಳನ್ನು ನೀಡಬೇಕು ಮತ್ತು ಕೊಳಚೆ ಅಭಿವೃದ್ಧಿ (ಸ್ಲಂ) ಮಂಡಳಿ ವತಿಯಿಂದ ನಿರ್ಮಿಸಲಾಗುವ ಮನೆಗಳನ್ನು ನಮಗೆ ಮೀಸಲಿಡಬೇಕೆಂದು ಪೌರ ಕಾರ್ಮಿಕರಿಗೆ ನೀಡುವಂತೆ ಅವರು ಮನವಿ ಮಾಡಿದರು.

ಪಾಲಿಕೆ ಆಯುಕ್ತೆ ಅಶ್ವಿಜ ಬಿ.ವಿ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರ್‌ವಾಡ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

English summary

Karnataka Government thinking for Bengaluru namma metro will extension till Tumkur, says G Parameshwara.

Story first published: Sunday, July 30, 2023, 16:27 [IST]

Source link