India
oi-Shankrappa Parangi
ಮುಂಬೈ, ಜೂನ್ 25: ಮುಂಬೈ ಮಹಾನಗರದ ನಾನಾವತಿ ಆಸ್ಪತ್ರೆ ಸಮೀಪದ ಸೇಂಟ್ ಬ್ರಾಜ್ ರಸ್ತೆಯಲ್ಲಿನ ಕಟ್ಟಡದ ಬಾಲ್ಕನಿಯ ಭಾಗ ಕುಸಿದು ಬಿದಿದ್ದಿದೆ. ಪರಿಣಾಮ ಐವರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಜರುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ವಿಲೆ ಪಾರ್ಲೆ ಗೌಥಾನ್ ನ ನಿವಾಸಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಎನ್ಐ ಸಂಸ್ಥೆ ವರದಿ ಮಾಡಿದೆ.
ಸೇಂಟ್ ಬ್ರಾಜ್ ರಸ್ತೆಯಲ್ಲಿನ ಕಟ್ಟಡದ ಬಾಲ್ಕನಿಯ ಭಾಗ ಕುಸಿತದ ಸುದ್ದಿ ತಿಳಿಯುತ್ತಿದ್ದಂತೆ ಮಾಹಿತಿ ಮೇರೆಗೆ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿದವು. ಸಿಬ್ಬಂದಿ ರಕ್ಷಣಾ ಕಾರ್ಯ ಮಾಡಿದರು. ಇದರೊಂದಿಗೆ ಒಂದು ತುರ್ತು ಸ್ಪಂದನ ವಾಹನ, ಆಂಬ್ಯುಲೆನ್ಸ್‌ಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ನೀರಿಕ್ಷಿಸಲಾಗುತ್ತಿದೆ.
ಇನ್ನು ಮುಂಬೈನಲ್ಲಿಯೇ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಘಾಟ್‌ಕೋಪರ್ (ಪೂರ್ವ) ರಾಜವಾಡಿ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಧರೆಗುರುಳಿದೆ. ಇದರ ಅವಶೇಷಗಳ ಅಡಿ ಇಬ್ಬರು ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ರಕ್ಷಣಾ ಕಾರ್ಯ ಮುಂದುವರಿದೆ. ಸದ್ಯ ಐವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುತ್ತಮುತ್ತಲಿನ ಜನರ ಸ್ಥಳಾಂತರ
ಮೂರು ಅಂತಸ್ತಿನ ಕಟ್ಟಡ ಕುಸಿದ ಘಾಟ್‌ಕೋಪರ್ ಪೂರ್ವದ ರಾಜವಾಡಿ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಇಬ್ಬರನ್ನು ಹೊರತೆಗೆಯುವ/ರಕ್ಷಿಸುವ ಕೆಲಸವನ್ನು ಎನ್‌ಡಿಆರ್ಎಫ್ ತಂಡದವರು ಮಾಡುತ್ತಿದ್ದಾರೆ. ಅಲ್ಲದೇ ಕಟ್ಟಡದ ಒಳಗೆ ಮತ್ತೆ ಯಾರಾದರೂ ಸಿಲುಕಿದ್ದಾರೆ ಎಂದು ಸಹ ಪರಿಶೀಲಿಸಲಾಗುತ್ತಿದೆ ಎಂದು ಬೃಹನ್‌ಮುಂಬೈನ ವಿಪತ್ತು ನಿರ್ವಹಣಾ ಇಲಾಖೆಯ ಮುಖ್ಯ ಅಧಿಕಾರಿ ರಶ್ಮಿ ಲೋಖಂಡೆ ವಿವರಿಸಿದರು.
ಸದ್ಯ ಘಟನಾ ಸ್ಥಳದಲ್ಲಿ ರಾಷ್ಟ್ರೀ ವಿಪತ್ತು ನಿರ್ವಹಣಾ ತಂಡ (NDRF) ಎನ್‌ಡಿಆರ್‌ಎಫ್ ತಂಡವಿದ್ದು, ಕಟ್ಟಡದೊಳಗೆ ಸಿಲುಕಿರುವ ಇತರ ಜನರನ್ನು ಪತ್ತೆಹಚ್ಚಲು ಮತ್ತು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಒಟ್ಟು ಮೂರು ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ. ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ನೆಲಮಹಡಿ ಸಂಪೂರ್ಣವಾಗಿ ಕುಸಿದಿದೆ ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು NDRF ನ ಸಹಾಯಕ ಕಮಾಂಡೆಂಟ್ ಸಾರಂಗ್ ಕುರ್ವೆ ಹೇಳಿದ್ದಾರೆ. ತಿಳಿಸಿದರು.
ಕಳೆದ ವಾರ ಲಿಫ್ಟ್ ಕುಸಿತ
ಇನ್ನೂ ಕಳೆದ ವಾರವಷ್ಟೇ ಮುಂಬೈ ಮಹಾನಗರದ ಲೋವರ್ ಪರೇಲ್‌ನಲ್ಲಿ ಟ್ರೇಡ್ ವರ್ಲ್ಡ್ ಎಂಬ ಕಟ್ಟಡದ ಲಿಫ್ಟ್ ವು ಕುಸಿದ ಬಗ್ಗೆ ವರದಿ ಆಗಿತ್ತು. ಈ ಘಟನೆಯಲ್ಲಿ ಒಟ್ಟು 12 ಮಂದಿ ಗಾಯಗೊಂಡಿದ್ದರು. ಅವರಲ್ಲಿ ಸುಮಾರು ಎಂಟು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದ ಬಿಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅಧಿಕಾರಿಗಳು, ಕಟ್ಟಸದ ಸಿ ವಿಂಗ್ ನಲ್ಲಿನಲ್ಲಿರುವ 4ನೇ ಮಹಡಿಯಲ್ಲಿದ್ದ ಲಿಫ್ಟ್ ಕುಸಿದಿತ್ತು. ಗಾಯಾಳಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದರು.
English summary
Mumbai: Nanavati hospital near building part collapse, Five Injured.
Story first published: Sunday, June 25, 2023, 18:05 [IST]