Mount Kailash Darshan: ಸಾಕ್ಷಾತ್ ಶಿವನ ದರ್ಶನಕ್ಕೆ ಸಕಲ ಸಿದ್ಧತೆ: ಕೋಟ್ಯಂತರ ಭಕ್ತರಿಗೆ ಅನುಕೂಲ! | Mount Kailash Darshan: Devotees to Access Indian Border for Darshan from September

India

oi-Malathesha M

|

Google Oneindia Kannada News

ಕೋಟ್ಯಂತರ ಭಕ್ತರ ಪಾಲಿನ ಆರಾಧ್ಯ ದೈವ, ನಂಬಿದ ಭಕ್ತರನ್ನು ಸದಾ ಕಾಯುವ ಶಿವ. ಶಿವಭಕ್ತರು ಭಕ್ತಿಯಿಂದ ಬೇಡಿಕೊಂಡರೆ ಏನು ಬೇಕಾದರೂ ನೆರವೇರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಶಿವನ ದೇಗುಲಗಳು ಇರುವ ಜಾಗಕ್ಕೆ ಭಕ್ತರು ಭೇಟಿ ನೀಡುತ್ತಾರೆ. ದೇಶದಲ್ಲಿ ಶಿವನಿಗಾಗಿ ಲಕ್ಷಾಂತರ ದೇಗುಲಗಳು ಇದ್ದರೂ ಶಿವನ ತವರು ಮಾತ್ರ ‘ಕೈಲಾಸ ಪರ್ವತ’. ಶಿವನ ಜಾಗ ನೋಡುವ ಭಕ್ತರ ಆಸೆ ಈಗ ಮತ್ತಷ್ಟು ಸುಲಭವಾಗಿ ಈಡೇರಲಿದೆ.

ಹೌದು ನೀವೂ ಕೈಲಾಸ ಪರ್ವತಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ನಿಮಗೊಂದು ಸಂತಸದ ಸುದ್ದಿ ಇದೆ. ನೀವು ಶಿವನ ‘ಘರ್’ ದರ್ಶನಕ್ಕೆ ಟಿಬೆಟ್‌ಗೆ ಹೋಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ಏಕೆಂದರೆ ಶಿವನ ತವರು ಕೈಲಾಸ ಪರ್ವತ ಸ್ಪಷ್ಟವಾಗಿ ಭಾರತದಲ್ಲಿ ಗೋಚರಿಸುತ್ತಿದೆ. ಅಂದಹಾಗೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಕೈಲಾಸ ಪರ್ವತ ವ್ಯೂ ಪಾಯಿಂಟ್ ಅನ್ನು ಕಂಡುಹಿಡಿಯಲಾಗಿತ್ತು. ಈ ಮೂಲಕ ಶಿವನ ಭಕ್ತರಿಗೆ ಸಿಹಿಸುದ್ದಿ ಸಿಕ್ಕಿತ್ತು. ಇದೀಗ ಹೊಸ ಪಿಥೋರಗಢ ಜಿಲ್ಲೆಯ ಹೊಸ ವ್ಯೂವ್ ಪಾಯಿಂಟ್‌ಗೆ ರಸ್ತೆಗಳನ್ನ ನಿರ್ಮಾಣ ಮಾಡಲಾಗುತ್ತಿದೆ.

Mount Kailash Darshan: Devotees to Access Indian Border for Darshan from September

ಇಲ್ಲಿದೆ ನೋಡಿ ಶಿವನ ಮನೆ!

ಅಂದಹಾಗೆ ಮುಂದಿನ ಸೆಪ್ಟೆಂಬರ್‌ ಒಳಗೆ ಭಕ್ತರು ಶಿವನ ವಾಸಸ್ಥಾನ ಎನ್ನಲಾಗುವ ಕೈಲಾಸ ಪರ್ವತ ಕಣ್ತುಂಬಿಕೊಳ್ಳಬಹುದು. ಭಾರತದ ನೆಲದಲ್ಲೇ ನಿಂತು ಶಿವನಿಗೆ ನಮಿಸಿ, ಪೂಜೆ ಕೂಡ ಸಲ್ಲಿಸಬಹುದು. ಭಕ್ತರ ಅನುಕೂಲಕ್ಕೆ ‘ಬಾರ್ಡರ್ ರೋಡ್ಸ್ ಆರ್ಗನೈಸೇಶನ್’ ಅಂದ್ರೆ ಬಿಆರ್‍ಒ ಪಿಥೋರಗಢ್ ಜಿಲ್ಲೆ ನಾಭಿಧಾಂಗ್‍ನ ಕೆಎಂವಿಎನ್ ಮೂಲಕವಾಗಿ ಭಾರತ-ಚೀನಾ ಗಡಿಯ ಲಿಪುಲೇಖ್ ಪಾಸ್‍ ತನಕ ರಸ್ತೆ ನಿರ್ಮಿಸುವ ಕೆಲಸ ಪ್ರಾರಂಭಿಸಿದೆ, ಇದು ಸೆಪ್ಟೆಂಬರ್‍ ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿವ ಭಕ್ತರ ಬಹುದೊಡ್ಡ ಕನಸು ನನಸಾಗುತ್ತಿದೆ.

Shravan Maas 2023: ಶ್ರಾವಣ ಮಾಸದಲ್ಲಿ ನೀವು ಭೇಟಿ ನೀಡಲೇಬೇಕಾದ ಕರ್ನಾಟದ 8 ಪ್ರಮುಖ ಶಿವನ ದೇವಾಲಯಗಳಿವು, ಇಲ್ಲಿದೆ ವಿವರ Shravan Maas 2023: ಶ್ರಾವಣ ಮಾಸದಲ್ಲಿ ನೀವು ಭೇಟಿ ನೀಡಲೇಬೇಕಾದ ಕರ್ನಾಟದ 8 ಪ್ರಮುಖ ಶಿವನ ದೇವಾಲಯಗಳಿವು, ಇಲ್ಲಿದೆ ವಿವರ

ಶಿವ ಶಿವ ಎಂದರೆ ಭಯವಿಲ್ಲ!

ಇನ್ನು ಕಾಮಗಾರಿ ಬಗ್ಗೆ ಮಾಹಿತಿ ನೀಡಿರುವ ಬಿಆರ್‌ಒ (BRO) ಡೈಮಂಡ್ ಪ್ರಾಜೆಕ್ಟ್ ಮುಖ್ಯ ಎಂಜಿನಿಯರ್ ವಿಮಲ್ ಗೋಸ್ವಾಮಿ, ಸುಮಾರು ಆರೂವರೆ ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದೇವೆ. ಇದು ಪೂರ್ಣಗೊಂಡ ನಂತರ, ರಸ್ತೆಯ ಉದ್ದಕ್ಕೂ ಕೈಲಾಸ ಪರ್ವತದ ವ್ಯೂ ಪಾಯಿಂಟ್ ‍ಸಿದ್ಧವಾಗಲಿದೆ ಎಂದಿದ್ದಾರೆ. ಪರ್ವತದ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿ ಕಷ್ಟಕರವಾಗಿರುತ್ತದೆ. ಹೀಗಾಗಿ ಆ ಭಾಗದಲ್ಲಿನ ಹವಾಮಾನ ಅನುಕೂಲ ಒದಗಿಸಿದರೆ ಸೆಪ್ಟೆಂಬರ್ ತಿಂಗಳ ಒಳಗೆ ರಸ್ತೆ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಮುಖ್ಯ ಎಂಜಿನಿಯರ್ ವಿಮಲ್ ಗೋಸ್ವಾಮಿ ತಿಳಿಸಿದ್ದಾರೆ.

ಭಗವಾನ್ ಶಿವನ ಭಕ್ತರ ಸಂತಸ

ಅಂದಹಾಗೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಲಿಪುಲೇಖ್ ಪಾಸ್ ಮೂಲಕ ಕೈಲಾಸ ಪರ್ವತ ಮತ್ತು ಮಾನಸಸರೋವರ ಯಾತ್ರೆ ಇನ್ನೂ ಪುನರಾರಂಭಗೊಂಡಿಲ್ಲ. ಚೀನಾದಿಂದ ಅನುಮತಿ ಬೇಕಾಗಿತ್ತು, ಜೊತೆಗೆ ಹಲವು ಅಡಚಣೆಗಳು ಎದುರಾಗುತ್ತಿತ್ತು. ಆದರೆ ಈಗ ಕೈಲಾಸ ಪರ್ವತದ ದರ್ಶನ ಪಡೆಯಲು ಶಿವನ ಭಕ್ತರಿಗೆ ಪರ್ಯಾಯ ಮಾರ್ಗ ರೂಪಿಸುವಲ್ಲಿ ಭಾರತ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ರಸ್ತೆ ನಿರ್ಮಾಣದ ಬಗ್ಗೆ ಭಕ್ತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

Mount Kailash Darshan: Devotees to Access Indian Border for Darshan from September

ಹೀಗೆ ಹೊಸ ಮಾರ್ಗ ಭಕ್ತರಿಗೆ ಭಾರಿ ಅನುಕೂಲ ಕಲ್ಪಿಸಲಿದೆ. ಪ್ರಸ್ತುತ, ಲಿಪುಲೇಖ್ ಪಾಸ್ (ಉತ್ತರಾಖಂಡ), ನಾಥು ಪಾಸ್ (ಸಿಕ್ಕಿಂ) ಹಾಗೂ ನೇಪಾಳದ ಕಠ್ಮಂಡುವಿನಿಂದ ಕೈಲಾಸ ಮಾನಸ ಸರೋವರಕ್ಕೆ 3 ಮಾರ್ಗಗಳು ಪ್ರಯಾಣಿಸುತ್ತವೆ. ಇದರಲ್ಲಿ ಒಬ್ಬರಿಗೆ ಕನಿಷ್ಠ 2 ಲಕ್ಷ ರೂಪಾಯಿ ಪ್ರಯಾಣ ದರವಿದೆ. ಇಂತಹ ಸ್ಥಿತಿಯಲ್ಲಿ ಸಾಮಾನ್ಯರು ಯಾತ್ರೆ ಕೈಗೊಳ್ಳಲು ಕಷ್ಟವಿತ್ತು. ಈ ಹೊಸ ಮಾರ್ಗದ ಮೂಲಕ, ಕಡಿಮೆ ವೆಚ್ಚದಲ್ಲಿ ಭಗವಾನ್ ಶಿವನ ಜಾಗ ಕಣ್ತುಂಬಿಕೊಳ್ಳಬಹುದು. ಈ ಮೂಲಕ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಮುಂದೆ ಬೇರೆ ದೇಶಗಳನ್ನ ಅವಲಂಬಿಸುವ ಕಷ್ಟ ತಪ್ಪಲಿದೆ.

English summary

Bholenath Devotees can now get Mount Kailash darshan From within Indian territory, know How?

Story first published: Friday, July 21, 2023, 16:27 [IST]

Source link