Manipur Horror: ‘ದೇಶಕ್ಕಾಗಿ ಹೋರಾಡಿದೆ, ಪತ್ನಿಯನ್ನು ರಕ್ಷಿಸಲು ಆಗಲಿಲ್ಲ’: ಆಳುವವರು ಕೇಳುವರೇ ಸಂತ್ರಸ್ತೆ ಪತಿಯ ದುಃಖವನ್ನಾ? | Manipur Video Horror: Fought For Country, Could Not Protect My Wife, One Of The Victims Husband Is Retired Armyman

India

oi-Oneindia Staff

|

Google Oneindia Kannada News

ಇಡೀ ಮಾನವ ಸಮಾಜ ಅಕ್ಷರಸಃ ತಲೆತಗ್ಗಿಸುವಂತೆ ಮಾಡಿರುವ ಅಮಾನವೀಯ ಘಟನೆಗೆ ನಮ್ಮ ದೇಶದ ಈಶಾನ್ಯದ ರಾಜ್ಯ ಮಣಿಪುರ ಸಾಕ್ಷಿಯಾಗಿದೆ. ಪೈಶಾಚಿಕ ಕೃತ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದ್ದಂತೆಯೇ, ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಮಣಿಪುರದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ನಿನ್ನೆ (ಜುಲೈ 20) ಲೋಕಸಭೆಯ ಅಧಿವೇಶನ ಬೇರೆ ಆರಂಭವಾಗಿದೆ.

ಮಣಿಪುರದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಆನಂತರ, ಸಾಮೂಹಿಕ ಅತ್ಯಾಚಾರ ಎಸಗಿದ ವಿಡಿಯೋ ಬರೀ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಒಬ್ಬರನ್ನು ಬಂಧಿಸಲಾಗಿದೆ. ಇನ್ನು, ಗುರುವಾರ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಒಬ್ಬ ಪ್ರಮುಖ ಆರೋಪಿಯ ಮನೆಯನ್ನು ಸುಟ್ಟು ಹಾಕಿದ್ದಾರೆ.

Manipur Video Horror: Fought For Country, Could Not Protect My Wife, One Of The Victims Husband Is Retired Armyman

ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಕೇಂದ್ರ ಸರ್ಕಾರ ಮತ್ತು ಮಣಿಪುರದ ಬಿಜೆಪಿ ಸರ್ಕಾರವನ್ನು ವಿಪಕ್ಷಗಳು ಮತ್ತು ಬಹುತೇಕ ಎಲ್ಲಾ ಸಂಘಟನೆಗಳು ಬಿಜೆಪಿ ವಿರುದ್ದ ಕಿಡಿಕಾರುತ್ತಿವೆ. ಮೇ ನಾಲ್ಕರಂದು ಮೈತಿ ಮತ್ತು ಕುಕಿ ಸಮುದಾಯದ ನಡುವೆ ಆರಂಭವಾದ ಜನಾಂಗೀಯ ಘರ್ಷಣೆಯ ಒಂದು ದಿನದ ನಂತರ ನಡೆದ ಘಟನೆ ಇದಾಗಿದ್ದರೂ, ತಡವಾಗಿ ಬೆಳಕಿಗೆ ಬಂದಿತ್ತು. ಈ ಪೈಶಾಚಿಕ ಕೃತ್ಯಕ್ಕೆ ಒಳಗಾದ ಇಬ್ಬರು ಸಂತ್ರಸ್ತ ಮಹಿಳೆಯರ ಪೈಕಿ ಒಬ್ಬರ ಪತಿ ರಿಟೈರ್ಡ್ ಸೈನಿಕ ಎನ್ನುವುದು ಮುನ್ನಲೆಗೆ ಬಂದಿದೆ.

Manipur Video: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ 79 ದಿನಗಳ ಬಳಿಕ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿManipur Video: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ 79 ದಿನಗಳ ಬಳಿಕ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ

ಅಸ್ಸಾಂ ರೆಜಿಮೆಂಟ್ ನಲ್ಲಿ ನಿವೃತ್ತ ಸುಬೇದಾರ್ ಆಗಿ ಮಹಿಳೆಯ ಪತಿ ಕೆಲಸ ಮಾಡಿದ್ದರು. “ನಾನು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದೆ. ಐಪಿಕೆಎಫ್‌ನ (Indian Peace – Keeping Force) ಭಾಗವಾಗಿ ನಾನು ಶ್ರೀಲಂಕಾದಲ್ಲಿಯೂ ಇದ್ದೆ. ನಾನು ಹೋರಾಡಿ ನನ್ನ ದೇಶವನ್ನು ರಕ್ಷಿಸಿದೆ, ಆದರೆ ಈಗ ನನ್ನ ಹೆಂಡತಿ ಮತ್ತು ಸಹ ಗ್ರಾಮಸ್ಥರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, “ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಮ್ಮನ್ನು ಆಳುವವರು ಈ ಮಾಜಿ ಸೈನಿಕನ ಅಳಲನ್ನು ಆಲಿಸುತ್ತಾರೆಯೇ?

NENow ಮಾಧ್ಯಮ ವರದಿ

“ಅಮಾನವೀಯ ಘಟನೆ ಕಣ್ಮುಂದೆ ನಡೆಯುತ್ತಿದ್ದರೂ, ಪೊಲೀಸರು ದಾಳಿಕೋರರ ಪರವಹಿಸಿ, ಮಹಿಳೆಯರನ್ನು ರಕ್ಷಿಸಲು ಕನಿಷ್ಟ ಪ್ರಯತ್ನವನ್ನೂ ಮಾಡಲಿಲ್ಲ” ಎಂದು ಮಾಜಿ ಸೈನಿಕ ಹೇಳಿರುವುದನ್ನು ಉಲ್ಲೇಖಿಸಿ NENow ಮಾಧ್ಯಮ ವರದಿ ಮಾಡಿದೆ. ಜೊತೆಗೆ, ಮಾಜಿ ಸೈನಿಕ ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲೂ ಈ ಮಾತನ್ನು ಪುನರುಚ್ಚಿಸಿದ್ದಾರೆ.

Manipur Video Horror: Fought For Country, Could Not Protect My Wife, One Of The Victims Husband Is Retired Armyman

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಕುಕಿ ಪ್ರಾಬಲ್ಯದ ಹಳ್ಳಿ

ಮೂಲಗಳ ಪ್ರಕಾರ, ಮಣಿಪುರದಲ್ಲಿ ಮೈತಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೊಳಗಾದ ಸುಳ್ಳು ಸುದ್ದಿ ವ್ಯಾಪಕವಾಗಿ ಈ ಭಾಗದಲ್ಲಿ ಹರಡಿದ ನಂತರ, ಇದು ಆ ಪ್ರದೇಶದ ಜನರಲ್ಲಿ ಕೋಪಕ್ಕೆ ಕಾರಣವಾಗಿ, ಬೆತ್ತಲೆ ಮೆರವಣಿಗೆ/ಅತ್ಯಾಚಾರದ ಘಟನೆಗೆ ಪ್ರಚೋದನೆಯನ್ನು ನೀಡಿತು. ಸಾಮಾಜಿಕ ತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ ನಕಲಿ ಸುದ್ದಿಯನ್ನು ನಂಬಿದ ಸಾವಿರಕ್ಕೂ ಹೆಚ್ಚು ಜನರು, ಮೇ 4 ರಂದು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಕುಕಿ ಪ್ರಾಬಲ್ಯದ ಹಳ್ಳಿಯೊಂದಕ್ಕೆ ಶಸ್ತ್ರಾಸ್ತ್ರಗಳ ಮೂಲಕ ಹೋಗಿದ್ದರು.

ಮೈತಿ ವಿಜಿಲೆನ್ಸ್ ಗ್ರೂಪಿನ ಸದಸ್ಯರು

ಇವರನ್ನು ಮೈತಿ ವಿಜಿಲೆನ್ಸ್ ಗ್ರೂಪಿನ ಸದಸ್ಯರು ಎಂದು ನಂಬಲಾಗಿದೆ. ಈ ಗುಂಪು ಗ್ರಾಮದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಭಯಭೀತರಾದ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ ಐದು ಕುಕಿ ಗ್ರಾಮಸ್ಥರು ಹತ್ತಿರದ ಕಾಡಿಗೆ ಹೋಗಿ ತಪ್ಪಿಸಿಕೊಂಡರು, ನಂತರ ಪೊಲೀಸರು ಅವರನ್ನು ರಕ್ಷಿಸಿದರು. ಅಲ್ಲಿಂದ ಪೋಲಿಸರು ಇವರನ್ನು ರಕ್ಷಿಸಿ ನಾಂಗ್‌ಪೋಕ್ ಸೆಕ್ಮೈ ಎನ್ನುವ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಮೈತಿ ಗುಂಪು ಅವರನ್ನು ಪೊಲೀಸ್ ಕಸ್ಟಡಿಯಿಂದ ಅಪಹರಿಸಿದರು ಎಂದು NENow ವರದಿ ಮಾಡಿದೆ.

ಮೂವರು ಮಹಿಳೆಯರನ್ನು ಬೆತ್ತಲೆಯಾಗುವಂತೆ ಸೂಚಿಸಿತು

ಆ ವೇಳೆ, ಮೈತಿ ಗುಂಪಿನ ಅನಾಗರಿಕ ರಾಕ್ಷಸರು ಇಬ್ಬರು ಪುರುಷರಲ್ಲಿ ಒಬ್ಬರನ್ನು ಅಲ್ಲೇ ಕೊಂದು, ಮೂವರು ಮಹಿಳೆಯರನ್ನು ಬೆತ್ತಲೆಯಾಗುವಂತೆ ಸೂಚಿಸಿದರು. ಮೂವರು ಕುಕಿ ಮಹಿಳೆಯರಲ್ಲಿ ಇಬ್ಬರನ್ನು ಮೈತಿ ಗುಂಪು ಬೆತ್ತಲೆ ಮೆರವಣಿಗೆ ಮಾಡಿ, ಅವರಲ್ಲಿ ಒಬ್ಬರನ್ನು ಗದ್ದೆಯಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿತು. ತನ್ನ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯವನ್ನು ತಡೆಯಲು ಪ್ರಯತ್ನಿಸಿದಾಗ, ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆಯ ಸಹೋದರನನ್ನೂ ರಾಕ್ಷಸರು ಕೊಂದು ಹಾಕಿದರು ಎಂದು ಮಾಧ್ಯಮ ಸಂಸ್ಥೆ ವರದಿ ಮಾಡಿದೆ. (Image : PTI)

English summary

Manipur Video Horror: Fought For Country, Could Not Protect My Wife, One Of The Victims Husband Is Retired Armyman, Know More

Source link