Astrology
oi-Mallika P
ಜೋತಿಷ್ಯ ಪ್ರಕಾರ ಮಂಗಳ ಗ್ರಹವನ್ನು ಧೈರ್ಯ, ಅದೃಷ್ಟ ನೀಡುವ ಗ್ರಹ ಎನ್ನಲಾಗುತ್ತದೆ. ಈ ಗ್ರಹದ ಸಂಚಾರ ಜೋತಿಷ್ಯದಲ್ಲಿ ಬಹಳ ಮುಖ್ಯವಾಗುತ್ತದೆ. ಸದ್ಯ ಈ ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ.
ಇನ್ನು ಜುಲೈ 1ರಂದು ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡುತ್ತಿದೆ. ಅಂದು ಇದು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಆಗಸ್ಟ್ 17ರವರೆಗೆ ಮಂಗಳ ಈ ರಾಶಿಯಲ್ಲಿ ಇರುತ್ತಾನೆ.
2023ರ ಜುಲೈನಲ್ಲಿ ಸಿಂಹ ರಾಶಿಯಲ್ಲಿ ಮಂಗಳ ಸಂಚಾರ ಆಗಲಿದ್ದು, 12 ರಾಶಿಗಳ ಜೀವನದ ಮೇಲೆ ಯಾವ ಪರಿಣಾಮ ಬೀರಲಿದೆ. ಆದರೆ ಮಂಗಳ ಸಂಚಾರದಿಂದ ಈ ಮೂರು ರಾಶಿಯ ಜನರಿಗೆ ಲಾಭದಾಯಕವಾಗಿರುತ್ತದೆ. ಮಂಗಳನ ಸಂಚಾರವು ಈ ಮೂರು ರಾಶಿಯ ಜನರ ಜೀವನದ ಅದೃಷ್ಟವನ್ನೇ ಬದಲಿಸುತ್ತದೆ.
ಮೇಷ ರಾಶಿ
ಸಿಂಹ ರಾಶಿಯಲ್ಲಿ ಮಂಗಳ ಸಂಚಾರವು ಮೇಷ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಫಲಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಹಾಗೂ ವೈಯಕ್ತಿಕವಾಗಿ ಉತ್ತಮ ಮತ್ತು ಸುಲಭವಾದ ನಿರ್ಧಾರಗಳನ್ನು ತೆಗೆದುಕೊಂಡರೆ ಉತ್ತಮ ಫಲಿತಾಂಶಗಳು ನೀಡುತ್ತದೆ. ಹಣ, ವೃತ್ತಿ ಮತ್ತು ವೈಯಕ್ತಿಕ ವಿಚಾರಗಳಲ್ಲಿ ಅನಿರೀಕ್ಷಿತ ಲಾಭ ಮತ್ತು ಅದೃಷ್ಟವನ್ನು ಪಡೆಯಲು ಸಾಧ್ಯವಾಗುತ್ತದೆ. ಮೇಷ ರಾಶಿಯವರ ಅದೃಷ್ಟ ಹೆಚ್ಚುತ್ತದೆ. ಸದ್ಯ ವೃತ್ತಿ ಜೀವನದಲ್ಲಿರುವ ಏರಿಳಿತಗಳು ನಿವಾರಣೆಯಾಗಿ ಪ್ರಗತಿ ಕಾಣಿಸುತ್ತದೆ. ಸಿಂಹ ರಾಶಿಯಲ್ಲಿ ಮಂಗಳ ಸಂಚಾರದ ಸಮಯದಲ್ಲಿ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭವನ್ನು ತರುತ್ತದೆ. ತೀವ್ರ ಪೈಪೋಟಿ ಇದ್ದರೂ ವ್ಯಾಪರದಲ್ಲಿ ಯಶಸ್ವಿಯಾಗುತ್ತೀರಿ.
ಮಂಗಳನ ಸಂಚಾರದಿಂದ ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಗಳು ಸಿಗುತ್ತದೆ. ಬಾಕಿ ಇದ್ದ ಎಲ್ಲಾ ಕೆಲಸಗಳು ಮತ್ತೆ ಆರಂಭವಾಗಿ ಲಾಭವನ್ನ ನೀಡುತ್ತದೆ. ಮನೆಯಲ್ಲಿ ಸಹ ಸಂತೋಷ ಹೆಚ್ಚಾಗುತ್ತದೆ. ವಿಶೇಷ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಮಂಗಳ ಸಂಚಾರವು ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟವನ್ನು ತರುತ್ತದೆ. ರಾಶಿಯವರ 4 ಹಾಗೂ 9ನೇ ಮನೆಯ ಅಧಿಪತಿ ಸಿಂಹ ಆಗಿರುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಮುಖ್ಯವಾಗಿ ಸಂಪತ್ತು ದುಪ್ಪಟ್ಟಾಗುತ್ತದೆ. ವಿದೇಶಕ್ಕೆ ಹೋಗುವ ಕನಸು ಇದ್ದರೆ ಅದು ಈಡೇರುವ ಸಮಯ ಇದು ಎನ್ನಬಹುದು. ಸಿಂಹ ರಾಶಿವರು ಹೊಸ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವೃತ್ತಿ ಜೀವನದಲ್ಲಿಯೂ ಇದು ಉತ್ತಮ ಸಮಯ. ಆರೋಗ್ಯ ಸುಧಾರಿಸುವುದರಿಂದ ಜೀವನೋತ್ಸಾಹ ಹಚ್ಚಾಗುತ್ತದೆ. ಹೊಸ ಬಾಂಧವ್ಯದಿಂದ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ವೈಯಕ್ತಿಕ ಜೀವನವು ಉತ್ತಮವಾಗಿರುತ್ತದೆ.
ಧನು ರಾಶಿ
ಸಿಂಹ ರಾಶಿಯಲ್ಲಿ ಮಂಗಳ ಸಂಚಾರವು ಧನು ರಾಶಿಯವರು ಮತ್ತಷ್ಟು ಅದೃಷ್ಟವಂತರಾಗುತ್ತಾರೆ. ಈ ರಾಶಿಯವರಿಗೆ ಮಂಗಳ ಸಂಚಾರದಿಂದ ಉತ್ತಮ ಫಲಿತಾಂಶ ಸಿಗಲಿದೆ. ಆಸ್ತಿ ಅಥವಾ ಮನೆ ಖರೀದಿ ಮಾಡಲು ಇದು ಉತ್ತಮ ಸಮಯ. ನಿಮ್ಮ ಆರ್ಥಿಕ ಪರಿಸ್ಥಿತಿಯೂ ಈ ಸಮಯದಲ್ಲಿ ಸುಧಾರಿಸುತ್ತದೆ.
ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಹಾಗೂ ಅದೃಷ್ಟ ನಿಮ್ಮ ಹಿಂದೆಯೇ ಇರುತ್ತದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಹೀಗಾಗಿ ವ್ಯಾಪಾರ ವ್ಯಹಿವಾಟು ಉತ್ತಮ ರೀತಿಯಲ್ಲಿ ಸಾಗಲಿದೆ. ಉದ್ಯೋಗದಲ್ಲಿಯು ಬಡ್ತಿ ಪಡೆಯುವ ಸುಸಮಯ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.
English summary
Mangala Gochara July 2023 These 3 Zodiac Signs to get financial success from Mars Transit in Leo. Know more
Story first published: Wednesday, June 21, 2023, 14:47 [IST]