India
oi-Malathesha M
ಭೋಪಾಲ್: 2023ರ ಅಂತ್ಯಕ್ಕೆ ನಡೆಯಲಿರುವ ಬಹುನಿರೀಕ್ಷಿತ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಇದೇ ಸಂದರ್ಭದಲ್ಲಿ ‘ಲೋಕ್ ಪೋಲ್’ ಸಂಸ್ಥೆ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರಿ ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ 2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Madhya Pradesh Election) ಗೆಲ್ಲೋದು ಯಾರು? ಕಾಂಗ್ರೆಸ್ ಅಥವಾ ಬಿಜೆಪಿ? ಬನ್ನಿ ತಿಳಿಯೋಣ.
ಹೌದು, ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಚುನಾವಣೆಯ ರಿಸಲ್ಟ್ ಬೂಸ್ಟರ್ ಡೋಸ್ ಕೊಟ್ಟಿದೆ. ಈ ಹೊತ್ತಲ್ಲಿ ಮಧ್ಯಪ್ರದೇಶ ವಿಧಾನಸಭೆ ಎಲೆಕ್ಷನ್ ಕೂಡ ಹತ್ತಿರವೇ ಇದ್ದು, ಭಾರಿ ಕುತೂಹಲ ಕೆರಳಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳಿದ್ದ ‘ಲೋಕ್ ಪೋಲ್’ ಸಂಸ್ಥೆ ಮಧ್ಯಪ್ರದೇಶದ ಬಗ್ಗೆ ಭವಿಷ್ಯ ನುಡಿದಿದೆ. ಹಾಗಾದರೆ ‘ಲೋಕ್ ಪೋಲ್’ ಸಮೀಕ್ಷೆ ಪ್ರಕಾರ ಗೆಲ್ಲೋದು ಯಾರು ಗೊತ್ತಾ? ಬಿಜೆಪಿ ಎಷ್ಟು ಸ್ಥಾನ ಪಡೆಯುತ್ತೆ, ಹಾಗೇ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತು? ಸಂಪೂರ್ಣ ಮಾಹಿತಿ ಇಲ್ಲಿದೆ.
ಮಧ್ಯಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ದಿಗ್ವಿಜಯ?
ಅಂದಹಾಗೆ ಕರ್ನಾಟಕದಲ್ಲಿ ಬರೋಬ್ಬರಿ 130+ ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್‌ಗೆ ಈಗ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಸಿಹಿಸುದ್ದಿ ಸಿಕ್ಕಿದೆ. ಲೋಕ್ ಪೋಲ್ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಬರೋಬ್ಬರಿ 130ರಿಂದ 135 ಸ್ಥಾನ ಪಡೆಯಲಿದೆಯಂತೆ. ಆದರೆ ಆಡಳಿತರೂಢ ಬಿಜೆಪಿ ಮಾತ್ರ 2ನೇ ಸ್ಥಾನಕ್ಕೆ ಕುಸಿದು, ಕೇವಲ 90ರಿಂದ 95 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆಯು ಹೇಳಿದೆ. ಬಿಎಸ್‌ಪಿ ಕೇವಲ ಒಂದು ಅಥವಾ ಎರಡು ಸ್ಥಾನ ಪಡೆದರೆ ಇತರರು ಐದು ಸ್ಥಾನದಲ್ಲಿ ಗೆಲ್ಲಬಹುದು ಎಂದು ‘ಲೋಕ್ ಪೋಲ್’ ಸಮೀಕ್ಷೆ ಭವಿಷ್ಯ ನುಡಿದಿದೆ.
After a month-long MEGA ground survey with 750 samples from each constituency, We present you the pre-poll seat projection for the state of #MadhyaPradesh
Projected seats: (230)
▪️BJP 90 – 95
▪️INC 130 – 135
▪️BSP 1 – 2
▪️OTH 0 – 5Sample size:… pic.twitter.com/gNrXAyp7kF
— Lok Poll (@LokPoll) July 20, 2023
ಪ್ರಚಾರ ಆರಂಭಿಸಿದ ಪ್ರಿಯಾಂಕಾ ಗಾಂಧಿ!
ಇನ್ನು ಮಧ್ಯಪ್ರದೇಶದಲ್ಲಿ ಪ್ರಿಯಾಂಕಾ ಮತಬೇಟೆ ಶುರುಮಾಡಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಿಷ್ಠಾವಂತ ಕಾಂಗ್ರೆಸ್ ಶಾಸಕರು 15 ತಿಂಗಳ ಕಮಲ್ ನಾಥ್ ಸರ್ಕಾರವನ್ನು ಉರುಳಿಸಿದ ಮೂರೂವರೆ ವರ್ಷಗಳ ನಂತರ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೆ ಚುನಾವಣೆಗೆ ಸಿದ್ಧರಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಪ್ರಚಾರ ಪ್ರಾರಂಭಿಸಿರುವ ಅವರು, ಇದಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ತವರು ಗ್ವಾಲಿಯರ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಚುನಾವಣೆಗೆ ರಣಕಹಳೆ ಮೊಳಗಿಸಿದೆ. ಇದೇ ಸಂದರ್ಭದಲ್ಲಿ ಸಮೀಕ್ಷೆ ವರದಿ ಕೂಡ ಸಂಚಲನ ಸೃಷ್ಟಿಸಿದೆ.
ಬಿಜೆಪಿ ಭದ್ರಕೋಟೆಗೆ ಪ್ರಿಯಾಂಕಾ ಎಂಟ್ರಿ!
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶುಕ್ರವಾರ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತವರು ಕ್ಷೇತ್ರ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸಲಿದ್ದಾರೆ. ಇಲ್ಲಿ ಭರ್ಜರಿ ಭಾಷಣ ಕೂಡ ಮಾಡಲಿದ್ದಾರೆ. ಗ್ವಾಲಿಯರ್‌ನ ಮೇಲಾ ಮೈದಾನದಲ್ಲಿ ಮೆಗಾ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಸಿಂಧಿಯಾಗೆ ಮಾತ್ರವಲ್ಲದೇ ಕೇಂದ್ರ ಕೃಷಿ ಸಚಿವ ಮತ್ತು ಇತ್ತೀಚೆಗೆ ಮಧ್ಯಪ್ರದೇಶ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡ ನರೇಂದ್ರ ಸಿಂಗ್ ತೋಮರ್ ಮತ್ತು ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕೂಡ ಆಗಿದೆ.
ತೆಲಂಗಾಣ ಚುನಾವಣೆ 2023; ಕಾಂಗ್ರೆಸ್ ಪ್ರದೇಶ ಚುನಾವಣಾ ಸಮಿತಿ ರಚನೆ
ಒಟ್ನಲ್ಲಿ ಮಧ್ಯಪ್ರದೇಶ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಲ್ಲೇ ಭರ್ಜರಿ ಸುದ್ದಿ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಹುರುಪು ನೀಡಿದೆ. ಒಂದು ಕಡೆ ಕೇಂದ್ರ ಕಾಂಗ್ರೆಸ್ ನಾಯಕರು ಮಧ್ಯಪ್ರದೇಶಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಚುನಾವಣೆ ಬಗ್ಗೆ ಸಮೀಕ್ಷೆಗಳು ಕೂಡ ಹೊರಬಿದ್ದಿದ್ದು, ಕಾಂಗ್ರೆಸ್ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿವೆ. ಹೀಗೆ ಕರ್ನಾಟಕದ ಬಳಿಕ ಮತ್ತೊಂದು ದೊಡ್ಡ ರಾಜ್ಯದಲ್ಲಿ ಭರ್ಜರಿ ಗೆಲುವು ಪಡೆಯೋದಕ್ಕೆ ಕಾಂಗ್ರೆಸ್ ಹುಮ್ಮಸ್ಸಿನಿಂದ ಮುಂದೆ ನುಗ್ಗಿದೆ. ಆದರೆ ಇದೆಲ್ಲವೂ ಚುನಾವಣೆ ನಂತರವಷ್ಟೇ ಪಕ್ಕಾ ಆಗಲಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ.
English summary
Pre Poll Survey of Madhya Pradesh election 2023 has revealed
Story first published: Thursday, July 20, 2023, 20:25 [IST]