Madhya Pradesh: ಕಾಡಿನಲ್ಲಿ ಕಾಮಕರು; ದೇಹದಾದ್ಯಂತ ಕಚ್ಚಿ ಬಾಲಕಿಯ ಮೇಲೆ ಅತ್ಯಾಚಾರ! | 12 year old girl being gang raped in Madhya Pradesh

India

oi-Reshma P

|

Google Oneindia Kannada News

ಮಧ್ಯಪ್ರದೇಶ, ಜುಲೈ 29: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮೈಹಾರ್ ಪಟ್ಟಣದ ಪ್ರಸಿದ್ಧ ದೇವಸ್ಥಾನವನ್ನು ನಿರ್ವಹಿಸುವ ಟ್ರಸ್ಟ್‌ನಲ್ಲಿ ಕೆಲಸ ಮಾಡುವ ಇಬ್ಬರು ಪುರುಷರು 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಅನೇಕ ಬಾರಿ ಕಚ್ಚಿ ಮತ್ತು ಕ್ರೂರವಾಗಿ ವರ್ತಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಅತ್ಯಾಚಾರವೆಸಗಿ ಬಂಧನಕ್ಕೊಳಗಾದ ಇಬ್ಬರು ವ್ಯಕ್ತಿಗಳು ಗುರುವಾರ ಬಾಲಕಿಯ ಖಾಸಗಿ ಭಾಗಗಳಲ್ಲಿ ಗಟ್ಟಿಯಾದ ವಸ್ತುವನ್ನು ಸೇರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ಇನ್ನೂ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರವೇ ಇದನ್ನು ದೃಢೀಕರಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

12 year old girl being gang raped in Madhya Pradesh

ಇನ್ನೂ ಅತ್ಯಾಚಾರಕೊಳ್ಳಗಾದ ಬಾಲಕಿಯೂ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವೈದ್ಯಕೀಯ ಚಿಕಿತ್ಸೆಗಾಗಿ ವಿಭಾಗೀಯ ಪ್ರಧಾನ ಕಛೇರಿ ರೇವಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಆರೋಪಿಗಳನ್ನು ರವೀಂದ್ರ ಕುಮಾರ್ ರವಿ ಮತ್ತು ಅತುಲ್ ಭಡೋಲಿಯಾ ಎಂದು ಗುರುತಿಸಲಾಗಿದೆ.

ಆರೋಪಿಗಳಾದ ರವೀಂದ್ರ ಕುಮಾರ್ ರವಿ ಮತ್ತು ಅತುಲ್ ಭಡೋಲಿಯಾ ಅವರು 12 ವರ್ಷದ ಬಾಲಕನ ಖಾಸಗಿ ಅಂಗಗಳಿಗೆ ಕೋಲು ಅಥವಾ ಇನ್ನಾವುದೇ ವಸ್ತುವನ್ನು ಸೇರಿಸಿದ್ದಾರೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಆದರೆ, ಇದು ವೈದ್ಯಕೀಯ ವರದಿಯಲ್ಲಿ ಮಾತ್ರ ದೃಢೀಕರಿಸಬಹುದಾದ ವಿಷಯ. ಆಕೆಯ ವೈದ್ಯಕೀಯ ವರದಿಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಹೌದು, ಆಕೆಗೆ ರಕ್ತಸ್ರಾವವಾಗುತ್ತಿತ್ತು ಮತ್ತು ವೈದ್ಯರು ಆಕೆಯ ಆರೋಗ್ಯದ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಸತ್ನಾ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಗುಪ್ತಾ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

12 year old girl being gang raped in Madhya Pradesh

ಇನ್ನೂ ಆರೋಪಿಗಳ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಗುಪ್ತಾ ಅವರು ಮಾತನಾಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ 30 ವರ್ಷ ವಯಸ್ಸಿನ ಆರೋಪಿಗಳನ್ನು ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ), 376 ಡಿಬಿ (12 ವರ್ಷದೊಳಗಿನ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಶಿಕ್ಷೆ), 366 ಎ, 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿಮೀ ದೂರದಲ್ಲಿರುವ ದೇವಸ್ಥಾನದ ಪಟ್ಟಣವಾದ ಮೈಹಾರ್‌ನಲ್ಲಿ ಅತ್ಯಾಚಾರ ಘಟನೆ ನಡೆದಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳು ಬಾಲಕಿಯನ್ನು ಆಮಿಷವೊಡ್ಡಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಬಾಲಕಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇನ್ನೂ ಈ ಘಟನೆಯನ್ನು ಖಂಡಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, 2012ರ ದೆಹಲಿಯ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಅಮಾನವೀಯ ದಾಳಿ ಎಂದು ಹೇಳಿದ್ದಾರೆ.

ನಿರ್ಭಯಾ ಪ್ರಕರಣ ಎಂದು ಸಾಮಾನ್ಯವಾಗಿ ಕರೆಯಲ್ಪಡುವ 2012 ರ ಭೀಕರ ಘಟನೆ ರಾಷ್ಟ್ರ ರಾಜಧಾನಿಯಲ್ಲಿ 23 ವರ್ಷ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಯನ್ನು ಒಳಗೊಂಡಿತ್ತು, ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ಮಧ್ಯಪ್ರದೇಶದಲ್ಲಿ ಸಹೋದರಿಯರು ಮತ್ತು ಹೆಣ್ಣುಮಕ್ಕಳೊಂದಿಗೆ ಇಂತಹ ಘಟನೆಗಳು ದಿನನಿತ್ಯದ ವಿಷಯವಾಗಿದೆ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರವು ಅವರಿಗೆ ಭದ್ರತೆಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ನಾಥ್ ಟ್ವೀಟ್ ಮಾಡಿದ್ದಾರೆ.

English summary

12-year-old raped, assaulted with ‘hard object’ by 2 men linked to temple trust.

Story first published: Saturday, July 29, 2023, 10:12 [IST]

Source link