Loksabha Elections : ಡಿಸೆಂಬರ್ 2023ರಲ್ಲೇ ಲೋಕಸಭಾ ಚುನಾವಣೆ: ರೋಹಿತ್ ಪವಾರ್ | EVM Checks Underway Lok Sabha Polls May Take Place In December 2023, States Rohit Pawar

India

oi-Naveen Kumar N

|

Google Oneindia Kannada News

ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯ ಶರದ್ ಪವಾರ್ ಮತ್ತು ಸೋದರಳಿಯ ಅಜಿತ್ ಪವಾರ್ ನಡುವೆ ಹಣಾಹಣಿ ನಡೆಯುತ್ತಿರುವ ಸಂದರ್ಭದಲ್ಲೇ, ಶರದ್ ಪವಾರ್ ಅವರ ಮೊಮ್ಮಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ 2024ಕ್ಕೆ ಬದಲಾಗಿ 2023ರ ಡಿಸೆಂಬರ್ ತಿಂಗಳಲ್ಲೇ ನಡೆಯಬಹುದು ಎಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನವೇ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ನಾಲ್ಕು ದಿನಗಳ ಹಿಂದೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಪರಿಶೀಲಿಸಲು ಅಥವಾ ಇವಿಎಂ ತಯಾರಿಕೆಯನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆಗಳು ಬಂದಿವೆ ಎಂದು ರೋಹಿತ್ ಪವಾರ್ ಹೇಳಿದ್ದಾರೆ.

 Loksabha election in December 2023

ಸುದ್ದಿಗಾರರ ಜೊತೆ ಮಾತನಾಡಿದ ರೋಹಿತ್ ಪವಾರ್, “ಡಿಸೆಂಬರ್ 2023 ರಲ್ಲಿ ಲೋಕಸಭೆ ಚುನಾವಣೆಗಳು ನಡೆಯಬಹುದು ಎಂದು ಅನಿಸುತ್ತದೆ. ಅಕ್ಟೋಬರ್ 2024 ರಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಲೋಕಸಭೆ ಚುನಾವಣೆಯ ಜೊತೆಗೆ ನಡೆಯಬಹುದು” ಎಂದು ಹೇಳಿದ್ದಾರೆ.

5-6 ತಿಂಗಳ ಮೊದಲು ಇವಿಎಂ ಪರಿಶೀಲನೆ

“ಸಾಮಾನ್ಯವಾಗಿ ಲೋಕಸಭೆ ಅಥವಾ ರಾಜ್ಯ ಚುನಾವಣೆಗಳಿಗೆ 5-6 ತಿಂಗಳ ಮೊದಲು ಇವಿಎಂಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ನಾಲ್ಕು ದಿನಗಳ ಹಿಂದೆ ಕೆಲವು ಮಹಾರಾಷ್ಟ್ರ ಅಧಿಕಾರಿಗಳಿಗೆ ಇವಿಎಂಗಳನ್ನು ದುರಸ್ತಿ ಮಾಡಲು ಮತ್ತು ತಯಾರಿಸಲು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಇದು 2023ರ ಡಿಸೆಂಬರ್‌ನಲ್ಲಿ ಲೋಕಸಭೆ ಚುನಾವಣೆ ನಡೆಸಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

Lok Sabha Elections 2024: ಬಿಜೆಪಿಯಲ್ಲಿ ಬಹಿರಂಗ ಕಿತ್ತಾಟ; ಲೋಕಸಭಾ ಚುನಾವಣೆಯ ಮೇಲಾಗುತ್ತಾ ಎಫೆಕ್ಟ್‌?Lok Sabha Elections 2024: ಬಿಜೆಪಿಯಲ್ಲಿ ಬಹಿರಂಗ ಕಿತ್ತಾಟ; ಲೋಕಸಭಾ ಚುನಾವಣೆಯ ಮೇಲಾಗುತ್ತಾ ಎಫೆಕ್ಟ್‌?

ಕರ್ನಾಟಕ ಚುನಾವಣೆಯಲ್ಲಿ ಸೋಲು

ಬಿಜೆಪಿಯ ಈ ನಿರ್ಧಾರಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆಯ ಸೋಲು ಕಾರಣ ಎಂದು ರೋಹಿತ್ ಪವಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸೋಲನುಭವಿಸಿದ್ದು, ಮಧ್ಯಪ್ರದೇಶ, ಹರಿಯಾಣ ಮತ್ತು ಇತರ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಬಂದಿರುವ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆಯಲ್ಲಿದ್ದ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದ್ದು, ಇತರೆ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಎದುರಾಗುವ ಆತಂಕ ಎದುರಾಗಿದೆ. ಈ ಕಾರಣಕ್ಕೆ ಚುನಾವಣೆ ಸಮಯವನ್ನು ಬದಲಾಯಿಸುವ ತಂತ್ರ ಮಾಡಲಾಗುತ್ತಿದೆ ಎನ್ನುವುದು ರೋಹಿತ್ ಪವಾರ್ ಅವರ ಆರೋಪವಾಗಿದೆ.

2024ರಲ್ಲಿ ಲೋಕಸಭಾ ಚುನಾವಣೆ ನಡೆಯಬೇಕಿದೆ. ಈಗಾಗಲೇ ತಮಿಳುನಾಡಿನಲ್ಲಿ ಕೂಡ ಚುನಾವಣಾ ಅಧಿಕಾರಿಗಳು ಇವಿಎಂ ಯಂತ್ರಗಳ ಪರಿಶೀಲನೆಯನ್ನು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಒಂದು ವರ್ಷಗಳವರೆಗೆ ಇವಿಎಂ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary

In the midst of the power struggle between Sharad Pawar and his nephew Ajit Pawar over control of the Nationalist Congress Party (NCP), MLA Rohit Pawar, the grandnephew of the senior politician, suggested that the Lok Sabha and Maharashtra Assembly elections could be held earlier than anticipated.

Story first published: Wednesday, July 5, 2023, 15:45 [IST]

Source link