Lakshmi Baramma: ಲಕ್ಷ್ಮೀಯ ಮಾತು ಅಮ್ಮನನ್ನು ನೆನಪಿಸಿದೆ.. ಇನ್ಮುಂದೆ ಸುಪ್ರೀತಾ ಕಾವೇರಿಯ ಸೊಸೆ ಪರ! | Lakshmi Baramma serial Written Update on July 27th episode

bredcrumb

Tv

oi-Muralidhar S

By ಎಸ್ ಸುಮಂತ್

|

ಸಿಕ್ಕಾಪಟ್ಟೆ
ಕನಸು
ಕಂಡಿದ್ದಂತಹ
ಜೋಡಿ
ಅದು.
ಇಬ್ಬರು
ಮದುವೆಯಾ
ಆಗಲೇ
ಬೇಕೆಂದುಕೊಂಡಿದ್ದರು.
ಆದರೆ,
ವಿಧಿ
ಅವರಿಬ್ಬರಿಗಿಂತ
ಇನ್ನೊಂದು
ಜೋಡಿಯನ್ನು
ಜೊತೆಯಾಗಿ
ಮಾಡಿತ್ತು.
ಅದೇ
ಲಕ್ಷ್ಮೀ
ಮತ್ತು
ವೈಷ್ಣವ್
ಜೋಡಿ.
ವಿಧಿಯಾಟದ
ಮುಂದೆ
ನಡೆಯದ
ಪ್ರೀತಿ,
ಮತ್ತೆ
ಮತ್ತೆ
ವೈಷ್ಣವ್
ಕಾಲನ್ನು
ಸುತ್ತಿಕೊಂಡು
ಬರುತ್ತಿದೆ.
ಅದು
ವೈಷ್ಣವ್‌ಗೆ
ಬೇಡವಾದ
ಬಳ್ಳಿ.
ಆದರೂ
ಅದರ
ಬುಡ
ಚಿಗುರಿರುವುದು
ಎಲ್ಲಿ
ಎಂದು
ತಿಳಿದುಕೊಳ್ಳುವ
ಹಂಬಲ.

ಇಂದು
ಕಶ್ಯಪ್
ಮನೆಯಲ್ಲಿ
ನಡೆದಿದ್ದು
ಸಣ್ಣ
ಜಗಳವಲ್ಲ.
ಬೀದಿ
ರಂಪಾಟ.
ಸುಪ್ರೀತಾಳನ್ನು
ಮನೆಯಿಂದ
ಹೊರಗೆ
ಕಳುಹಿಸಿ,
ನೆಮ್ಮದಿಯಿಂದ
ಇರಬೇಕು
ಎಂಬ
ಪ್ಲ್ಯಾನ್
ಮಾಡಿದ್ದು
ಕಾವೇರಿ.
ಕೀರ್ತಿಯೂ
ಅದಕ್ಕೆ
ಅತಿ
ಉತ್ಸಾಹ
ತೋರಿದ್ದಳು.
ಆದರೆ,
ಅದು
ಸಾಧ್ಯವಾಗಲೇ
ಇಲ್ಲ.
ಎಲ್ಲವೂ
ಉಲ್ಟಾ
ಆಗಿದೆ.

Lakshmi Baramma-ColorsKannada

ಮಿತಿಮೀರಿ
ಮಾತಾಡಿದ್ದ
ಕೀರ್ತಿ

ಸುಪ್ರೀತಾಳಿಂದ
ತನ್ನ
ಪ್ರೀತಿ
ದೂರವಾಗ್ತಿದೆ
ಎಂದು
ಕೀರ್ತಿಗೆ
ಕೋಪ
ಹೆಚ್ಚಾಗಿತ್ತು.
ಅದಕ್ಕೆಂದೇ
ಪ್ಲ್ಯಾನ್
ಮಾಡಿ,
ಸುಪ್ರೀತಾಳನ್ನು
ಲಾಕ್
ಮಾಡಿಸಿದ್ದಳು.
ಜೊತೆಗೆ
ಮನೆಯಿಂದ
ಹೊರಗೆ
ಹಾಕುವಂತೆ
ಮಾಡಿದ್ದಳು.
ಕಾವೇರಿಗೂ
ಅದೇ
ಬೇಕಿತ್ತು.
ಮನೆಯ
ಜಗಳದ
ನಡುವೆ
ಕೀರ್ತಿ
ನಾಲಿಗೆ
ಉದ್ಧ
ಮಾಡಿದ್ದಳು.
ಸುಪ್ರೀತಾಗೆ
ಬಾಯಿಗೆ
ಬಂದ
ಹಾಗೇ
ಮಾತನಾಡುತ್ತಿದ್ದಳು.
ಇದನ್ನು
ಸಹಿಸುವುದಕ್ಕೆ
ಆಗದ
ಲಕ್ಷ್ಮೀ,
ಕೀರ್ತಿಯ
ನಾಲಿಗೆಗೆ
ಬ್ರೇಕ್
ಹಾಕಿದ್ದಳು.

Kannada Serial TRP: ಕಳೆದ ವಾರ ಟಿವಿಯಲ್ಲಿ 'ಪುಟ್ಟಕ್ಕನ ಮಕ್ಕಳು' ಟಾಪ್.. 'ಸೀತಾ ರಾಮ'ಗೆ ಯಾವ ಸ್ಥಾನ?Kannada
Serial
TRP:
ಕಳೆದ
ವಾರ
ಟಿವಿಯಲ್ಲಿ
‘ಪುಟ್ಟಕ್ಕನ
ಮಕ್ಕಳು’
ಟಾಪ್..
‘ಸೀತಾ
ರಾಮ’ಗೆ
ಯಾವ
ಸ್ಥಾನ?

ಸುಪ್ರೀತಾಗೆ
ಅಮ್ಮನ
ನೆನಪಿಸಿದ
ಲಕ್ಷ್ಮೀ
ಮಾತು

ಲಕ್ಷ್ಮೀ
ತನ್ನ
ಪರ
ಮಾತನಾಡಿದಾಗಲೇ
ಸುಪ್ರೀತಾಗೆ
ಖುಷಿಯಾಗಿತ್ತು.
ಅದರಲ್ಲೂ
ಸಂಬಂಧದ
ಬೆಲೆ
ಬಗ್ಗೆ
ಹೇಳುವಾಗ
ಅಮ್ಮನೇ
ಕಣ್ಣ
ಮುಂದೆ
ಬಂದಳು.
ಮನೆ
ವೈಷ್ಣವ್
ದುಡಿದ
ಹಣದಲ್ಲಿಯೇ
ಕಟ್ಟಿಸಿರಬಹುದು.
ಆದರೆ,
ಮನೆಯಲ್ಲಿ
ಎಲ್ಲರೂ
ಇರಬೇಕು.
ಒಬ್ಬರು
ದುಡಿದು,
ಇನ್ನೊಬ್ಬರು
ಕೂತು
ತಿನ್ನುತ್ತಾರೆ
ಅಂತ
ಹೇಳುವುದಲ್ಲ.
ನನ್ನದು
ಎಂದಾಗುವುದಿಲ್ಲ
ಎಂಬ
ಲಕ್ಷ್ಮೀಯ
ಮಾತು
ಸುಪ್ರೀತಾಗೆ
ತನ್ನ
ತಾಯಿ
ಹೇಳಿದ್ದನ್ನು
ನೆನಪಿಸಿತ್ತು.
ಕಾವೇರಿ
ಹೊಸದಾಗಿ
ಮದುವೆಯಾಗಿ
ಬಂದಾಗಲೂ
ತನ್ನ
ತಾಯಿ
ಹೇಳಿದ
ಒಂದೊಂದು
ಮಾತನ್ನು
ಈಗ
ಲಕ್ಷ್ಮೀ
ಹೇಳಿದ್ದಾಳೆ‌‌.

Lakshmi Baramma-ColorsKannada

ಸುಪ್ರೀತಾ
ಮಾತನ್ನು
ನಂಬಿದನಾ
ವೈಷ್ಣವ್?

ಸುಪ್ರೀತಾ
ಸಾಕಷ್ಡು
ಮನವಿ
ಮಾಡಿಕೊಂಡಿದ್ದಾಳೆ‌.
ನಾನು
ಮಾಡಿದ್ದು
ತಪ್ಪೇ
ಆದರೂ
ಅದರ
ಹಿಂದೆ
ಒಂದು
ಕಾರಣ
ಇದೆ
ಎಂದು.
ಆದರೇ
ಕಾವೇರಿ
ಅದಕ್ಕೆ
ಅವಕಾಶ
ನೀಡಲಿಲ್ಲ.
ವೈಷ್ಣವ್
ನೀಡಿದ.
ಸುಪ್ರೀತಾ
ಮನೆಯೊಳಕ್ಕೆ
ಹೋಗಿ,
ತಾಯಿ
ಫೋಟೋ
ತಂದು,
ಆಣೆ
ಪ್ರಮಾಣ
ಮಾಡಿ,
ನಾನು
ನಿನ್ನ
ಲೈಫ್
ಗೋಸ್ಕರ
ಇದನ್ನು
ಮಾಡಿದ್ದು
ಎಂದು
ಹೇಳಿದಳು.

ಕಾವೇರಿಗೆ
ಕಂಟಕ
ತಪ್ಪಿದ್ದಲ್ಲ..!

ಸುಪ್ರೀತಾ
ಅಲ್ಲಿ
ಮನೆಯೊಳಗೆ
ಮಾತನಾಡುತ್ತಿದ್ದರೆ,
ಇಲ್ಲಿ
ಕೀರ್ತಿ
ಲಕ್ಷ್ಮೀ
ದಬ್ಬಾಳಿಕೆ
ಮಾಡುತ್ತಿದ್ದಳು.
ಇದನ್ನು
ನೋಡಿದ
ಕೃಷ್ಣ,
ಮತ್ತೆ
ಕೀರ್ತಿಗೆ
ಕ್ಲಾಸ್
ತೆಗೆದುಕೊಂಡ.
ಅವಳು
ನನ್ನ
ಸೊಸೆ.
ಏನು
ಸಂಬಂಧವಿಲ್ಲದ
ನೀನೆ
ಇಷ್ಟೊಂದು
ಮಾತನಾಡುವಾಗ,
ಲಕ್ಷ್ಮೀ
ಮಾತನಾಡಬಾರದಾ
ಎಂದು
ಸೊಸೆಯ
ಬೆಂಬಲಕ್ಕೆ
ನಿಂತ.
ಇನ್ನೇನು
ಕಾವೇರಿಯೂ
ಜೋರು
ಮಾಡಬೇಕಿತ್ತು.
ಅಷ್ಟರಲ್ಲಿ
ವೈಷ್ಣವ್
ಹಾಗೂ
ಸುಪ್ರೀತಾ
ಬಂದರು.
ಯಾರು
ಎಷ್ಟೆ
ಜೋರು
ಮಾಡಿದರು,
ವೈಷ್ಣವ್
ತನ್ನ
ನಿರ್ಧಾರ
ತಿಳಿಸಿದ್ದ.
ಅತ್ತೆ
ಎಲ್ಲಿಯೂ
ಹೋಗಲ್ಲ,
ಇಲ್ಲಿಯೇ
ಇರುತ್ತಾರೆ
ಎಂದಿದ್ದ.
ಇದನ್ನು
ಕೇಳಿ
ಕಾವೇರಿ,
ಕೀರ್ತಿಗೆ
ಶಾಕ್
ಆಗಿದೆ.
ಆದ್ರೆ
ಮನೆಯವರಿಗೆಲ್ಲಾ
ಖುಷಿಯಾಗಿದೆ.

English summary

Lakshmi Baramma serial Written Update on July 27th episode

Thursday, July 27, 2023, 23:35

Story first published: Thursday, July 27, 2023, 23:35 [IST]

Source link