KSRTC: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ 3636 ಪ್ರಕರಣ ಪತ್ತೆ, 5.9ಲಕ್ಷ ದಂಡ ವಸೂಲಿ | KSRTC Chicking Officers Detected 3636 Ticket Less Passengers, Collect Penalty 5.89 Lakh In May

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 22: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಜೂನ್ 11) ಶಕ್ತಿ ಯೋಜನೆ ಜಾರಿಗೆ ಮುನ್ನವೇ ಮೇ ತಿಂಗಳಲ್ಲಿ ಟಿಕೆಟ್ ಇಲ್ಲದೇ ಓಡಾಡಿದ 3 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ಮೂಲಕ ಭೊಕ್ಕಸಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.

ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನಿಖಾ ತಂಡಗಳು ತಪಾಸಣಾ ಕಾರ್ಯ ಚುರುಕುಗೊಳಿಸಿದ್ದರು. ಅಧಿಕಾರಿಗಳ ತಂಡ ಆ ತಿಂಗಳಲ್ಲಿ ಒಟ್ಟು 44,052 ಸಾರಿಗೆ ಬಸ್‌ಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.

KSRTC Chicking Officers Detected 3636 Ticket Less Passengers, Collect Penalty 5.89 Lakh In May

ಈ ವೇಳೆ ksrtc ಬಸ್‌ಗಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದ ಒಟ್ಟು ಸುಮಾರು 3266 ಪ್ರಕರಣಗಳಲ್ಲಿ 3636 ಪ್ರಕರಣಗಳು ಟಿಕೆಟ್ ರಹಿತ ಎಂಬುದು ಖಾತರಿಯಾಗಿದೆ. ಅದರಿಂದ ಒಟ್ಟು ನಿಗಮದ ಆದಾಯಕ್ಕೆ ಉಂಟಾಗುತ್ತಿದ್ದ 73,859 ರೂಪಾಯಿ ನಷ್ಟವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.

ಇನ್ನೂ ಪತ್ತೆಯಾದ ಟಿಕೆಟ್ ರಹಿತ ಒಟ್ಟು 3636 ಪ್ರಕರಣಗಳಿಂದ ಅಧಿಕಾರಿಗಳು ಒಟ್ಟು 5,89,453 ರೂಪಾಯಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಮೂಲಕ ತಿಳಿಸಿದೆ. ಇದೊಂದಿಗೆ ಸಾರ್ವಜನಿಕರು, ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುವಾಗ ದಯಮಾಡಿ ಟಿಕೆಟ್ ಪಡೆದು ಚಲಾಯಿಸಬೇಕು ಎಂದು ತಿಳಿಸಿದೆ. ಇದು ಪುರುಷರಿಗೆ ಅನ್ವಯವಾಗಲಿದೆ. ಏಕೆಂದರೆ ಜೂನ್ 11ರಂದು ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿದೆ.

KSRTC Chicking Officers Detected 3636 Ticket Less Passengers, Collect Penalty 5.89 Lakh In May

ವೇಗಧೂತ ಬಸ್ ಏರಿ ಮಹಿಳೆ ಜಗಳ: ಹಲ್ಲೆ ಮಾಡಿದವರ ಬಂಧನ

ಶಕ್ತಿ ಯೋಜನೆಯಡಿ ಮಹಿಳೆಯೊಬ್ಬರು ವೇಗಧೂತ ಸಾರಿಗೆ ಬಸ್ ಏರಿ ಗಲಾಟೆ ಮಾಡಿಕೊಂಡಿದ್ದರು.ನಿಲುಗಡೆ ಕೊಡಲಿಲ್ಲ ಎಂಬ ಕಾರಣಕ್ಕೆ ಬಸ್ ನಿರ್ವಾಹಕ ಮೇಲೆ ಮಹಿಳೆಯ ಕಡೆವರು ಹಲ್ಲೆ ಮಾಡಿದ್ದರು. ಸದ್ಯ ಮಹಿಳೆ ಸೇರಿದಂತೆ ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಿದ್ದಾರೆ.

ಬೆಂಗಳೂರಿಗೆ ಹೋಗಲು ಮಹಿಳೆಯೊಬ್ಬರು ಚಳ್ಳಕೆರೆ ಡಿಪೋಗೆ ಸೇರಿದ ರಾಯದುರ್ಗ-ಬೆಂಗಳೂರು ಬಸ್ ಏರಿದ್ದರು. ಮಹಿಳೆ ದಾಬಸ್‌ಪೇಟೆಗೆ ನಿಲುಗಡೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಈ ಬಸ್ ವೇಗಧೂತ ಬಸ್ ಆಗಿದ್ದರಿಂದ ಅವರು ಕೇಳಿದ ದಾಬಾಸ್‌ಪೇಟೆಯಲ್ಲಿ ನಿಲುಗಡೆ ನೀಡಲು ಸಾಧ್ಯವಾಗಿಲ್ಲ.

ಇದಾದ ಬಳಿಕ ಬೆಂಗಳೂರು ತಲುಪಿ ಬಸ್ ಕಂಡಕ್ಟರ್ ಜೊತೆ ಮಹಿಳೆ ಚಂದ್ರಿಕಾ ವಾಗ್ವಾದ ನಡೆಸಿದ್ದಳು. ಇಷ್ಟಕ್ಕೆ ಸುಮ್ಮನಾಗದೇ ಮಹಿಳೆಯ ಕಡೆಯವರಾದ ಮಲ್ಲಿಕಾರ್ಜುನ್, ಶಿವರಾಜ್, ನವೀನ್ ಅವರು ಬಂದು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದರು. ಈ ಸಂಬಂಧ ಪ್ರಕಟಣ ದಾಖಲಾಗಿದ್ದು, ಗುರುವಾರ ಮಹಿಳೆ ಸೇರಿ ಹಲ್ಲೆ ಮಾಡಿದವರನ್ನು ಬಂಧಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

English summary

KSRTC chicking officers detected 3636 ticket less passengers, collect 5.89 lakh penalty in month of May.

Story first published: Thursday, June 22, 2023, 19:05 [IST]

Source link