Karnataka Budget 2023: ಮದ್ಯದ ಮೇಲಿನ ಸುಂಕದಲ್ಲಿ ಭಾರೀ ಹೆಚ್ಚಳ: ಮದ್ಯಪ್ರಿಯರಿಗೆ ಸಿದ್ದು ಶಾಕ್- ಯಾವುದಕ್ಕೆ ಎಷ್ಟು? ಅಂಕಿಅಂಶ | Karnataka Budget 2023: Liquor Prices Set to Rise as Excise Duty Increased by 20%

ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 14 ನೇ ಬಜೆಟ್‌ ಮಂಡಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಮದ್ಯಪ್ರಿಯರ ಮೇಲೆ ಬರೆ ಎಳೆದಿದ್ದಾರೆ. ಮದ್ಯದ ಮೇಲಿನ ಅಬಕಾರಿ ಸುಂಕದಲ್ಲಿ ಭಾರೀ ಹೆಚ್ಚಳವನ್ನು ಘೋಷಿಸಿದ್ದಾರೆ. ಈ ಮೂಲಕ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದ್ದು, ಹಾಲಿ ದರದ ಮೇಲೆ ಶೇ 20ರಷ್ಟು ಸುಂಕವನ್ನು ಹೆಚ್ಚಿಸಲಾಗಿದೆ. ಪ್ರಮುಖವಾಗಿ, ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದ್ದು, ಶೇ. 175 ರಿಂದ 185ರಷ್ಟು ಏರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Source link