Karnataka
oi-Shankrappa Parangi
ಬೆಂಗಳೂರು, ಜೂನ್ 22: ರಾಜ್ಯದಲ್ಲಿ ತಡವಾಗಿ ಮಳೆಗಾಲ ಆರಂಭವಾಗಿದೆ. ತೀವ್ರವಾಗಿ ಮಳೆ ನೆರೆ-ಪ್ರವಾಹ ಸೃಷ್ಟಿಯಾಗಿ ಜನರಿಗೆ ತೊಂದರೆ ಆಗುತ್ತದೆ. ಇತ್ತ ಮಳೆ ಬಾರದಿದ್ದರೂ ಬರಗಾಲ ಉಂಟಾಗಿ ಜಾನವಾರುಗಳಿಗೆ ಮೇವಿಲ್ಲದೇ, ನೀರಿಲ್ಲದೇ, ರೈತರಿಗೆ ತೊಂದರೆ ಉಂಟಾಗಿದೆ. ಇದೆಲ್ಲ ನಿಭಾಯಿಸಲು ರಾಜ್ಯ ಕಾಂಗ್ರಸ್ ಸರ್ಕಾರ ಸಮಿತಿ ರಚನೆ ಮಾಡಿದೆ.
ಕಾಂಗ್ರೆಸ್ ಸರ್ಕಾರದ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಸಂಭವನೀಯ ಪರಿಸ್ಥಿತಿ ಪರಾಮರ್ಶೆಗೆ ಹಾಗೂ ಅದರ ಸಮರ್ಥ ನಿವರ್ಹನೆಗೆ ಸಚಿವ ಸಂಪುಟದ ಉಪ ಸಮಿತಿ ರಚನೆ ಆಗಿದೆ.
ಈ ಸಮಿತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಎನ್ ರಾಜಣ್ಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸದಸ್ಯರಾಗಿದ್ದಾರೆ.
ಅವರೆಲ್ಲರೂ ಸಚಿವ ಕೃಷ್ಣ ಬೈರೇಗೌಡ ಅವರಿಗೆ ನರೆ, ಪ್ರವಾಹ, ಬರಗಾಲದ ಸಂದರ್ಭಗಳಲ್ಲಿ ಸಾಥ್ ನೀಡಲಿದ್ದಾರೆ. ಸಚಿವರೊಂದಿಗೆ ನೈಸರ್ಗಿಕ ವಿಕೋಪಗಳಂತಹ ಸಂದರ್ಭದಲ್ಲಿ ನೀತಿ ನಿರೂಪಣೆ ರಚನೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳು, ಅಗತ್ಯ ನಿರ್ದೇಶನಗಳನ್ನು ಸಚಿವ ಸಂಪುಟದ ಉಪ ಸಮಿತಿ ತಿಳಿಸಲಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ರಾಜ್ಯಕ್ಕೆ ಈ ಬಾರಿ ಮುಂಗಾರು ಮಳೆ ತಡವಾಗಿ ಆಗಮಿಸಿದೆ. ಬಿಪರ್‌ಜಾಯ್ ಚಂಡಮಾರುತದಿಂದಾಗಿ ಮಳೆಯ ಪ್ರಭಾವ ರಾಜ್ಯದ ಮಟ್ಟಿಗೆ ಕುಂಠಿತಗೊಂಡಿದೆ ಎನ್ನಬಹುದು. ಇನ್ನೂ ಕೆಲವು ದಿನಗಳನ್ನು ನೋಡಿ ಮಳೆಯಾಗದ ಜಿಲ್ಲೆಗಳನ್ನು ಬರಗಾಲದ ಜಿಲ್ಲೆಗಳು ಎಂದು ಘೋಷಿಸಲು ಯೋಜಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಪ್ರವಾಹ
ಇದೀಗ ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆ ಅಬ್ಬರು ಕಂಡು ಬರುತ್ತಿದೆ. ಕಳೆದ ವರ್ಷ ಬೆಂಗಳೂರು ನಗರದಲ್ಲಿ ಪ್ರವಾಹ ಪರಸ್ಥಿತಿ ಉಂಟಾಗಿತ್ತು. ಐಟಿ ಕಾರಿಡಾರ್‌ಗಳಲ್ಲಿ ದಿನಗಳಗಟ್ಟಲೇ ನೀರು ನಿಂತು ಸಮಸ್ಯೆ ಉಂಟಾಗಿತ್ತು. ಇದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು.
ಅಲ್ಲದೇ ಪ್ರತಿ ವರ್ಷ ಮಹರಾಷ್ಟ್ರ ಭಾಗದಲ್ಲಿ ತೀವ್ರ ಮಳೆಯಾದರೆ ಆ ನೀರು ಉತ್ತರ ಕರ್ನಾಟಕ ಭಾಗದ ಕೃಷ್ಣೆ, ಮಲಪ್ರಭಾ, ಭೀಮಾ ನದಿಗೆ ತುಂಬಿಕೊಳ್ಳುತ್ತದೆ. ಅದನ್ನು ನಿಯಮಿತವಾಗಿ ಬಿಟ್ಟರೂ ಸಹ ಅಲ್ಲಿನ ತೀರದ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ.
ಇಲ್ಲವೇ ಮಳೆ ಬಾರದೆಯು ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು, ಜನರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸಲು ಈ ಸಮಿತಿಯಿಂದ ಸಾಧ್ಯವಾಗುತ್ತದೆ. ಈ ಮೂಲಕ ಕಾಂಗ್ರೆಸ್ ಜನಪರ ಆಡಳಿತ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
English summary
Karnataka Congress Govt form cabinet committee with let Krishna Byre Gowda for flood-drought Management.
Story first published: Thursday, June 22, 2023, 18:14 [IST]