Astrology
oi-Mallika P
ಜೋತಿಷ್ಯದ ಪ್ರಕಾರ ಭರಣಿ ನಕ್ಷತ್ರವು ಮರಣ ಮತ್ತು ಪುನರ್ಜನ್ಮ, ಲೈಂಗಿಕ ಆಕರ್ಷಣೆಯನ್ನು ಸೂಚಿಸುತ್ತದೆ. ಭರಣಿ ನಕ್ಷತ್ರವು ಸ್ತ್ರೀವಾದಿ ಗುಣಲಕ್ಷಣಗಳನ್ನು ಹೊಂದಿರುವ ನಕ್ಷತ್ರವಾಗಿದೆ. ಭರಣಿ ನಕ್ಷತ್ರಕ್ಕೆ ಗುರುವಿನ ಪ್ರವೇಶವು ಕೆಲವು ರಾಶಿಚಕ್ರಗಳಿಗೆ ಫಲದಾಯಕ ಫಲಿತಾಂಶಗಳನ್ನು ತರುತ್ತದೆ. ಇದರಿಂದ ಕೆಲವು ರಾಶಿಯ ಜನರ ಅದೃಷ್ಟ ದುಪ್ಪಟ್ಟುಗೊಳ್ಳುತ್ತದೆ.
ಭರಣಿ ನಕ್ಷತ್ರಕ್ಕೆ ಪ್ರವೇಶಿಸುವ ಗುರುವು ಸೂರ್ಯನ ಅಂಶವನ್ನು ಹೊಂದಿದ್ದರೆ, ವ್ಯಕ್ತಿಯು ಸತ್ಯವಂತನಾಗಿದ್ದು, ಸಾಮಾಜಿಕ ಚಟುವಟಿಗಳಲ್ಲಿ ಸಕ್ರಿಯನಾಗುತ್ತಾನೆ. ಗುರುವು ಚಂದ್ರನ ದೃಷ್ಟಿಯನ್ನು ಹೊಂದಿದ್ದರೆ, ವ್ಯಕ್ತಿಯು ವಿಧೇಯನಾಗಿ, ಶಾಂತವಾಗಿ ಮತ್ತು ಸಮಾಜದಲ್ಲಿ ಉತ್ತಮ ಹೆಸರನ್ನು ಹೊಂದಿರುತ್ತಾನೆ.
ಭರಣಿ ನಕ್ಷತ್ರಕ್ಕೆ ಗುರುವಿನ ಪ್ರವೇಶ ಈ ಕೆಳಗಿನ ಆರು ರಾಶಿಗಳ ಜನರಿಗೆ ಅದೃಷ್ಟವನ್ನು ಹೆಚ್ಚುತ್ತದೆ.
ಮೇಷ ರಾಶಿ
ಮಂಗಳನ ಮೂಲ ತ್ರಿಕೋನ ಚಿಹ್ನೆ ಮತ್ತು ಭರಣಿ ನಕ್ಷತ್ರದಲ್ಲಿ ಗುರುವಿನ ಉಪಸ್ಥಿತಿಯು ಮೇಷ ರಾಶಿಯ ವೃತ್ತಿಪರ ಜೀವನದಲ್ಲಿ ಬೆಳವಣಿಗೆಗೆ ಕಾರಣವಾಗುತ್ತದೆ. ಯಶಸ್ಸಿನ ಸಾಧ್ಯತೆಗಳು ಹೆಚ್ಚಿರುವುದರಿಂದ ವ್ಯವಹಾರದಲ್ಲಿ ಒಪ್ಪಂದಗಳನ್ನು ಮಾಡಲು ಇದು ಅನುಕೂಲಕರ ಸಮಯವಾಗಿದೆ.
ಮೇಷ ರಾಶಿಯವರು ವ್ಯಾಪಾರದಲ್ಲಿ ದೊಡ್ಡ ಆದಾಯವನ್ನು ಗಳಿಸುವ ಅವಕಾಶವನ್ನು ಹೊಂದಿರುತ್ತಾರೆ. ಇದು ಹೂಡಿಕೆಗೆ ಸೂಕ್ತ ಸಮಯ. ನಿಮ್ಮ ವೈವಾಹಿಕ ಜೀವನದಲ್ಲಿ ಸಂಗಾತಿಯೊಡನೆ ಹೊಂದಾಣಿಕೆ ಇದ್ದು ಶಾಂತಿ ಇರುತ್ತದೆ.
ವೃಷಭ ರಾಶಿ
ಗುರುವು 12 ನೇ ಮನೆಯಲ್ಲಿ ಇರುವುದರಿಂದ ವೃಷಭ ರಾಶಿಯವರು ವಿದೇಶಿ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ, ಗಳಿಕೆ ಉತ್ತಮವಾಗಿರುತ್ತದೆ. ಆಮದು ರಫ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದವರು ಈ ಅವಧಿಯಲ್ಲಿ ಹೆಚ್ಚು ಲಾಭವನ್ನು ಗಳಿಸುವ ಸಾಧ್ಯತೆ ಇದೆ. ವೃಷಭ ರಾಶಿಯ ಜನರು ಈಗ ಆಧ್ಯಾತ್ಮಿಕತೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ.ಈ ಅವಧಿಯಲ್ಲಿ ಕುಟುಂಬ ಜೀವನವು ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಸಿಂಹ ರಾಶಿ
9ನೇ ಮನೆಯಲ್ಲಿ ಗುರುವಿನ ಸ್ಥಾನವು ಸಿಂಹ ರಾಶಿಯವರಿಗೆ ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹಾಯವಾಗುತ್ತದೆ. ಅದೃಷ್ಟವು ರಾಶಿಚಕ್ರಕ್ಕೆ ಅನುಕೂಲಕರವಾಗಿರುವುದರಿಂದ ಜನಪ್ರಿಯತೆ ಹೆಚ್ಚುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗ ಹೊಂದಿರುವವರಿಗೆ ಅನುಕೂಲಕರ ಪ್ರಗತಿಯನ್ನು ತರುತ್ತದೆ. ಉದ್ಯಮಿಗಳಿಗೆ ಹೊಸ ಕ್ಷೇತ್ರಕ್ಕೆ ಕಾಲಿಡಲು ಸೂಕ್ತ ಸಮಯ. ಬಹುನಿರೀಕ್ಷಿತ ವ್ಯವಹಾರಗಳನ್ನು ಮಾಡಲು ಕಾಲ ಕೂಡಿ ಬಂದಿದೆ. ಲಾಭ ಹೆಚ್ಚಾಗುವುದರಿಂದ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಹಣಕಾಸು ಉಳಿತಾಯವಾಗುತ್ತದೆ.
ತುಲಾ ರಾಶಿ
ಭರಣಿ ನಕ್ಷತ್ರಕ್ಕೆ ಗುರುವಿನ ಪ್ರವೇಶದಿಂದ ತುಲಾ ರಾಶಿಯವರ ಪರಿಸ್ಥಿತಿ ಸುಧಾರಿಸುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅನುಕೂಲಕರ ಸಮಯವಾಗಿದೆ. 7 ನೇ ಮನೆಯಲ್ಲಿ ಗುರುವಿನ ಸ್ಥಾನವು ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಅದೃಷ್ಟವು ತುಲಾ ರಾಶಿಯವರಿಗೆ ಒಲವು ತೋರುವುದರಿಂದ ಸಮಯ ಅನುಕೂಲವಾಗಿರುತ್ತದೆ. ಪ್ರಯತ್ನಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ. ಆದರೆ ಸಕಾರಾತ್ಮಕ ಮನಸ್ಸಿನಿಂದ ಕೆಲಸ ಆರಂಭಿಸುವುದು ಮುಖ್ಯ. ಉತ್ತಮ ಆರ್ಥಿಕ ಲಾಭಕ್ಕಾಗಿ ವಿಭಿನ್ನ ಶಾರ್ಟ್ಕಟ್ಗಳನ್ನು ಸಹ ಪ್ರಯತ್ನಿಸಬಹುದು.
ಧನು ರಾಶಿ
ಭರಣಿ ನಕ್ಷತ್ರಕ್ಕೆ ಗುರುವಿನ ಪ್ರವೇಶದಿಂದ ಧನು ರಾಶಿಯವರಿಗೆ ವ್ಯವಹಾರದಲ್ಲಿ ಲಾಭದ ಸಮಯ. ಜೀವನದ ವಿವಿಧ ಅಂಶಗಳು ಕಾಲಾನಂತರದಲ್ಲಿ ಸುಧಾರಿಸುತ್ತವೆ. ಬಳಿಕ ಸಿಗುವ ಫಲಿತಾಂಶದಿಂದ ತೃಪ್ತಿ ಇರುತ್ತದೆ. ಈ ಅವಧಿಯಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸಬಹುದು.
ಸ್ಟಾರ್ಟ್-ಅಪ್ಗಳಿಗೆ ಇದು ಅನುಕೂಲಕರ ಸಮಯ. ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಸಂಬಂಧಗಳು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಳು ಮತ್ತು ಇತರ ಚಟುವಟಿಕೆಗಳಿಂದ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ.
ಮಕರ ರಾಶಿ
ಭರಣಿ ನಕ್ಷತ್ರಕ್ಕೆ ಗುರುವಿನ ಪ್ರವೇಶದಿಂದ ಮಕರ ರಾಶಿಯವರ ಅದೃಷ್ಟ ಹೆಚ್ಚುತ್ತದೆ. ನಿಮ್ಮ ಜೀವನ ಗುರಿ ತಲುಪಲು ಒಂದು ಅವಕಾಶ ಸಿಗುತ್ತದೆ. ಹೊಸ ಉದ್ಯೋಗಗಳು ಅಥವಾ ಪೋಸ್ಟಿಂಗ್ಗಳು ಸಿಗುವ ಸಮಯ. ಕೆಲಸದ ವಾತಾವರಣದ ಸುತ್ತಮುತ್ತಲಿನ ಜನರು ಪ್ರೇರಪಿತರಾಗುತ್ತಾರೆ. ಹೀಗಾಗಿ ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಿನ ವಿಶ್ವಾಸ ಹೆಚ್ಚುತ್ತದೆ.
ಸರ್ಕಾರಿ ನೌಕರರಿಗೆ, ಬಡ್ತಿಯ ಅವಕಾಶಗಳು ಸಿಗುತ್ತದೆ. ಖಾಸಗಿ ವಲಯದ ಉದ್ಯೋಗಿಗಳಿಗೂ ಸೂಕ್ತ ಸಮಯ. ಈ ಅವಧಿಯಲ್ಲಿ ಕುಟುಂಬದ ಬೆಂಬಲದಿಂದ ಸಮಸ್ಯೆಗೆ ಪರಿಹಾರವನ್ನು ಪಡೆಯಿರಿ ಸಂಬಂಧಗಳು ಸುಧಾರಿಸಲು ಅವಕಾಶವಿರುತ್ತದೆ.
English summary
Jupiter Transit in Bharani Nakshatra: Know the lucky zodiac signs Know more,
Story first published: Wednesday, June 21, 2023, 17:31 [IST]