Jailer censor: ತಲೈವಾ ಜೊತೆ ಸಿಗರೇಟ್ ಹಿಡಿದ ಶಿವಣ್ಣ? ‘ಜೈಲರ್‌’ಗೆ ಸೆನ್ಸಾರ್‌ ಶಾಕ್ | Rajinikanth’s Jailer Runtime, cuts And Other Censor Details

bredcrumb

Tamil

oi-Narayana M

|

ಸೂಪರ್
ಸ್ಟಾರ್
ರಜನಿಕಾಂತ್
ನಟನೆಯ
‘ಜೈಲರ್’
ಸಿನಿಮಾ
ಇತ್ತೀಚೆಗೆ
ಸಿಕ್ಕಾಪಟ್ಟೆ
ಸೌಂಡ್
ಮಾಡ್ತಿದೆ.
ಚೆನ್ನೈನಲ್ಲಿ
ನಡೆದ
ಆಡಿಯೋ
ಲಾಂಚ್
ಕಾರ್ಯಕ್ರಮ
ಸೂಪರ್
ಸಕ್ಸಸ್
ಕಂಡಿದೆ.
ಸೆಂಚುರಿ
ಸ್ಟಾರ್
ಶಿವರಾಜ್‌ಕುಮಾರ್
ಕೂಡ

ಆಕ್ಷನ್
ಎಂಟರ್‌ಟೈನರ್
ಚಿತ್ರದಲ್ಲಿ
ನಟಿಸಿದ್ದು
ಸಹಜವಾಗಿಯೇ
ಸಿನಿಮಾ
ಕುತೂಹಲ
ಮೂಡಿಸಿದೆ.
ಬಹುಕೋಟಿ
ವೆಚ್ಚದಲ್ಲಿ
ಸನ್
ಪಿಕ್ಚರ್ಸ್
ಸಂಸ್ಥೆ
ಸಿನಿಮಾ
ನಿರ್ಮಿಸಿದೆ.

ನೆಲ್ಸನ್
ದಿಲೀಪ್
ಕುಮಾರ್
‘ಜೈಲರ್’
ಚಿತ್ರಕ್ಕೆ
ಆಕ್ಷನ್
ಕಟ್
ಹೇಳಿದ್ದಾರೆ.
ತಮನ್ನಾ,
ರಮ್ಯಾಕೃಷ್ಣನ್,
ಜಾಕಿಶ್ರಾಫ್,
ಯೋಗಿ
ಬಾಬು
ಚಿತ್ರದ
ತಾರಾಗಣದಲ್ಲಿದ್ದಾರೆ.
ಮಲಯಾಳಂ
ನಟ
ಮೋಹನ್
ಲಾಲ್
ಕೂಡ
ಚಿತ್ರದಲ್ಲಿ
ಗೆಸ್ಟ್
ಅಪಿಯರೆನ್ಸ್
ಮಾಡಿದ್ದಾರೆ.
ಹಾಗಾಗಿ
ಸಿನಿಮಾ
ಸಿಕ್ಕಾಪಟ್ಟೆ
ನಿರೀಕ್ಷೆ
ಹುಟ್ಟು
ಹಾಕಿದೆ.
ಅನಿರುದ್ಧ್
ರವಿಚಂದರ್
ಸಂಗೀತದಲ್ಲಿ
‘ಜೈಲರ್’
ಸಾಂಗ್ಸ್
ಸೂಪರ್
ಹಿಟ್
ಆಗಿದೆ.
‘ಕಾವಾಲ’
ಸಾಂಗ್
ಸದ್ಯ
ಟ್ರೆಂಡಿಂಗ್‌ನಲ್ಲಿದೆ.
‘ಬೀಸ್ಟ್’
ಸೋಲಿನ
ಬಳಿಕ
ನೆಲ್ಸನ್

ಚಿತ್ರ
ಕಟ್ಟಿಕೊಟ್ಟಿರುವುದರಿಂದ
ಅಭಿಮಾನಿಗಳಿಗೆ
ಕೊಂಚ
ಆತಂಕವೂ
ಇದೆ.

Rajinikanth-shivarajkumar-jailer-censor

ಆಗಸ್ಟ್
10ಕ್ಕೆ
‘ಜೈಲರ್’
ಚಿತ್ರವನ್ನು
ತೆರೆಗೆ
ತರುವ
ಪ್ರಯತ್ನ
ನಡೀತಿದೆ.
ಕಥೆಯ
ಬಗ್ಗೆ
ಯಾವುದೇ
ಸುಳಿವು
ಬಿಟ್ಟುಕೊಡದೇ
ಸಿನಿಮಾ
ಬಗ್ಗೆ
ನಿರೀಕ್ಷೆ
ಹೆಚ್ಚುವಂತೆ
ಮಾಡಿದೆ
ಚಿತ್ರತಂಡ.
ಇತ್ತೀಚಿನ
ವರ್ಷಗಳಲ್ಲಿ
ರಜನಿಕಾಂತ್
ಸಿನಿಮಾಗಳು
ಅಷ್ಟಾಗಿ
ಸದ್ದು
ಮಾಡ್ತಿಲ್ಲ.
ಆದರೆ
‘ಜೈಲರ್’
ಸಿನಿಮಾ
ಮೇಲೆ
ಭಾರೀ
ನಿರೀಕ್ಷೆಯಿದೆ.

‘ಜೈಲರ್’
ಚಿತ್ರಕ್ಕೆ
ಸೆನ್ಸಾರ್

ಆಕ್ಷನ್
ಎಂಟರ್‌ಟೈನರ್
‘ಜೈಲರ್’
ಚಿತ್ರಕ್ಕೆ
ಈಗಾಗಲೇ
ಸೆನ್ಸಾರ್
ಮಂಡಳಿಯಿಂದ
ಯು/ಎ
ಸರ್ಟಿಫಿಕೇಟ್
ಸಿಕ್ಕಿದೆ.
ಚಿತ್ರದಲ್ಲಿ
ಹಿಂಸಾತ್ಮಕ
ದೃಶ್ಯಗಳು
ಹೆಚ್ಚಿದ್ದು
ಅದನ್ನು
ಕಮ್ಮಿ
ಮಾಡುವಂತೆ
ಸೆನ್ಸಾರ್
ಮಂಡಳಿ
ಚಿತ್ರತಂಡಕ್ಕೆ
ಸೂಚಿಸಿದೆಯಂತೆ.
ಒಟ್ಟು
11
ಕಟ್‌ಚಿತ್ರದಲ್ಲಿ
ಮೋಹನ್‌
ಲಾಲ್
ಮಲಯಾಳಿ
ಮ್ಯಾಥೂ
ಆಗಿ
ಕಾಣಿಸಿಕೊಂಡಿದ್ದಾರೆ.
ಆದರೆ
ಒಂದು
ಮಲಯಾಳಿ
ಪದವನ್ನು
ಮ್ಯೂಟ್
ಮಾಡಲು
ಸೆನ್ಸಾರ್
ಮಂಡಳಿ
ಹೇಳಿದೆಯಂತೆ.

Rajinikanth-shivarajkumar-jailer-censor

ರಜನಿ-
ಶಿವಣ್ಣ
ಸಿಗರೇಟ್
ಸೀನ್?

‘ಜೈಲರ್’
ಚಿತ್ರದಲ್ಲಿ
ಮುತ್ತುವೇಲ್
ಪಾಂಡಿಯನ್
ಆಗಿ
ರಜನಿಕಾಂತ್,
ನರಸಿಂಹ
ಆಗಿ
ಶಿವಣ್ಣ
ಕಾಣಿಸಿಕೊಂಡಿದ್ದಾರೆ.
ಕ್ಲೈಮ್ಯಾಕ್ಸ್‌ನಲ್ಲಿ
ಮುತ್ತುವೇಲ್,
ನರಸಿಂಹ
ಹಾಗೂ
ಮ್ಯಾಥ್ಯೂ
ಮೂವರು
ಸಿಗರೇಟ್
ಸೇದುವ
ಸನ್ನಿವೇಶವೊಂದಿದೆಯಂತೆ.

ದೃಶ್ಯದ
ಕ್ಲೋಸ್‌ಅಪ್‌
ಶಾಟ್ಸ್
ಕತ್ತರಿಸುವಂತೆ
ಸೆನ್ಸಾರ್
ಮಂಡಳಿ
ಸೂಚಿಸಿದೆ
ಎಂದು
ಹೇಳಲಾಗುತ್ತಿದೆ.
ಮ್ಯಾಥ್ಯೂ
ಖಳನೊಬ್ಬನನ್ನು
ಕೊಲ್ಲುವುದು
ಸೇರಿದಂತೆ
ಹಲವು
ಸಣ್ಣ
ಸಣ್ಣ
ದೃಶ್ಯಗಳಿಗೆ
ಕತ್ತರಿ
ಬಿದ್ದಿದೆಯಂತೆ.

‘ಜೈಲರ್’
ರನ್‌
ಟೈಮ್

ಇತ್ತೀಚಿನ
ವರ್ಷಗಳಲ್ಲಿ
ಸಿನಿಮಾಗಳ
ಕಾಲಾವಧಿ
ಬಹಳ
ಮುಖ್ಯ
ಆಗುತ್ತದೆ.
ದೀರ್ಘಾವಧಿಯ
ಸಿನಿಮಾಗಳು
ಪ್ರೇಕ್ಷಕರನ್ನು
ರಂಜಿಸೋದು
ಕಷ್ಟ
ಎನ್ನಲಾಗುತ್ತದೆ.
ಆದರೆ
ಕೆಲ
ಸಿನಿಮಾಗಳು

ಮಾತನ್ನು
ಸುಳ್ಳಾಗಿಸುತ್ತಿವೆ.
‘ಜೈಲರ್’
ಸಿನಿಮಾ
ಬರೋಬ್ಬರಿ
2
ಗಂಟೆ
49
ನಿಮಿಷ
ಕಾಲಾವಧಿ
ಇದೆ
ಎಂದು
ವರದಿಯಾಗುತ್ತಿದೆ.
ಸೂಪರ್‌
ಸ್ಟಾರ್‌ಗಳೆಲ್ಲಾ
ಒಟ್ಟಿಗೆ
ಸೇರಿ
ನಟಿಸಿರುವುದರಿಂದ
ಎಲ್ಲರಿಗೂ
ಅವಕಾಶ
ಸಿಗುವಂತೆ
ಕಾಲಾವಧಿ
ಕೊಂಚ
ಜಾಸ್ತಿಯಿದೆ.

LinksRajinikanth: LinksRajinikanth:
“ನಾನು
ಜೀವನದಲ್ಲಿ

ದೊಡ್ಡ
ತಪ್ಪು
ಮಾಡಬಾರದಿತ್ತು”:
ತಲೈವಾ
ಪಶ್ಚಾತ್ತಾಪ

3
ಭಾಷೆಗಳಲ್ಲಿ
‘ಜೈಲರ್’

ಸದ್ಯ
ಎಲ್ಲಾ
ಕಡೆ
ಪ್ಯಾನ್
ಇಂಡಿಯಾ
ಸಿನಿಮಾ
ಟ್ರೆಂಡ್
ನಡೀತಿದೆ.
ಆದರೆ
‘ಜೈಲರ್’
ಚಿತ್ರವನ್ನು
3
ಭಾಷೆಗಳಲ್ಲಿ
ತೆರೆಗೆ
ತರಲಾಗುತ್ತಿದೆ.
ಕನ್ನಡಕ್ಕೂ
ಸಿನಿಮಾ
ಡಬ್
ಆಗಿ
ಬರ್ತಿದೆ.
ಸೂಪರ್
ಸ್ಟಾರ್
ಅಭಿಮಾನಿಗಳು
‘ಜೈಲರ್’
ರಜನಿಕಾಂತ್
ಆರ್ಭಟ
ನೋಡಲು
ಚಾತಕ
ಪಕ್ಷಿಗಳಂತೆ
ಕಾಯುತ್ತಿದ್ದಾರೆ.

English summary

Jailer Runtime, cuts, And Other Censor Details. know more.

Monday, July 31, 2023, 7:58

Story first published: Monday, July 31, 2023, 7:58 [IST]

Source link