IPL 2024: ಮುಂದಿನ ಐಪಿಎಲ್‌ ವಿದೇಶದಲ್ಲಿ ಆಯೋಜನೆ? ಕಾರಣ ಇಲ್ಲಿದೆ | IPL 2024 Likely to Move Abroad Due to Election Clash

Sports

oi-Naveen Kumar N

|

Google Oneindia Kannada News

2023ರ ಐಪಿಎಲ್ ಆನಂದಿಸಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ಐಪಿಲ್‌ ಅನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವುದು ಕಷ್ಟವಾಗಲಿದೆ, ಹೌದು, 2024ರ ಐಪಿಎಲ್ ಭಾರತದಲ್ಲಿ ನಡೆಯುವುದು ಅನುಮಾನವಾಗಿದೆ. ವಿದೇಶದಲ್ಲಿ ಐಪಿಎಲ್ ಆಯೋಜನೆ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.

ಜೂನ್ 4ರಿಂದ ಟಿ20 ವಿಶ್ವಕಪ್ 2024 ಪಂದ್ಯಾವಳಿ ಆರಂಭವಾಗಲಿದೆ. ಇದಕ್ಕೆ ತಯಾರಿ ಮಾಡಿಕೊಳ್ಳಲು ಐಪಿಎಲ್‌ ಪಂದ್ಯಾವಳಿಯನ್ನು ನಿಗದಿತ ಅವಧಿಗಿಂತ ಮುನ್ನವೇ ಮುಗಿಸಬೇಕಿದೆ. ಭಾರತದಲ್ಲಿ ಆಯೋಜನೆ ಮಾಡಲು ಇರುವ ಪ್ರಮುಖ ತೊಂದರೆ ಇಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ.

IPL 2024 Likely to Move Abroad Due to Election Clash

ಐಪಿಎಲ್ 2024ರ ಪಂದ್ಯಾವಳಿ ಮಾರ್ಚ್ 22ರಿಂದ ಶುರುವಾಗಿ ಮೇ 19ರಂದು ಕೊನೆಯಾಗುವ ಸಾಧ್ಯತೆಯಿದೆ. ಮೇ ತಿಂಗಳಿನಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ, ಭದ್ರತಾ ಸಮಸ್ಯೆಯನ್ನು ಪರಿಗಣಿಸಿ ಭಾರತದಿಂದ ಹೊರಗಡೆ ಐಪಿಎಲ್ ಆಯೋಜಿಸಲು ಚಿಂತನೆ ನಡೆಸುತ್ತಿದೆ.

 IPL 2024: ಈ ದಿನದಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ನಿರ್ಧಾರ IPL 2024: ಈ ದಿನದಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ನಿರ್ಧಾರ

ಮೇ 19ರ ಒಳಗೆ ಪಂದ್ಯಾವಳಿ ಮುಗಿಸಬೇಕಿದೆ

ಐಪಿಎಲ್‌ನ 2023ರ ಆವೃತ್ತಿಯು ಮಾರ್ಚ್ 31 ರಂದು ಆರಂಭವಾಗಿ ಮೇ 29 ರಂದು ಮುಕ್ತಾಯವಾಗಿತ್ತು. 58 ದಿನಗಳವರೆಗೆ ಪಂದ್ಯಾವಳಿ ನಡೆದಿತ್ತು, ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಬಯಸಿದೆಯಾದರು, ಮುಂದಿನ ಆವೃತ್ತಿಯಲ್ಲಿ ಅದು ಕೂಡ ಸಾಧ್ಯವಿಲ್ಲ. ಐಸಿಸಿ ಆದೇಶದ ಪ್ರಕಾರ ವಿಶ್ವಕಪ್‌ಗೆ ಮುನ್ನ ಕನಿಷ್ಠ ಎರಡು ವಾರಗಳ ವಿಶ್ರಾಂತಿ ಪಡೆಯಬೇಕಾಗಿದ್ದು, ಮೇ 19ರ ಭಾನುವಾರ ಫೈನಲ್ ಪಂದ್ಯ ಆಯೋಜಿಸಬೇಕಿದೆ.

“ಮುಂದಿನ ಐಪಿಎಲ್‌ನಲ್ಲಿನ ಸಮಸ್ಯೆಗಳ ಬಗ್ಗೆ ನಮಗೆ ತಿಳಿದಿದೆ. ಇಂಗ್ಲೆಂಡ್ ಸರಣಿ ಮತ್ತು ನಂತರ ಸಾರ್ವತ್ರಿಕ ಚುನಾವಣೆಗಳು ಮತ್ತು ಜೂನ್‌ನಲ್ಲಿ ಟಿ20 ವಿಶ್ವಕಪ್ ಇದೆ. ಸದ್ಯ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಅನ್ನು ಯಶಸ್ವಿಯಾಗಿ ಆಯೋಜನೆ ಮಾಡುವತ್ತ ಗಮನಹರಿಸಲಾಗಿದೆ. ಡಿಸೆಂಬರ್-ಜನವರಿಯಲ್ಲಿ ಮುಂದಿನ ಐಪಿಎಲ್‌ ಬಗ್ಗೆ ನಿರ್ಧಾರ ಮಾಡುವುದಾಗಿ” ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಾರ್ಚ್‌ನಿಂದ ಆರಂಭವಾಗಿ ಮೇ ತಿಂಗಳ ಒಳಗಾಗಿ ಐಪಿಎಲ್ ಮುಗಿಸಬೇಕಿದೆ. ಮಾರ್ಚ್ 11ರಂದು ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿಯಲಿದ್ದು ನಂತರ ಐಪಿಎಲ್ ಪಂದ್ಯಾವಳಿ ಆಯೋಜನೆ ಮಾಡಬೇಕಿದೆ. ಟಿ20 ವಿಶ್ವಕಪ್‌ಗೆ ಮುನ್ನ ಭಾರತ ಶ್ರೀಲಂಕಾ ವಿರುದ್ಧ ಸರಣಿ ಆಡಬೇಕಿದೆ.

ಜನವರಿ 21 ರಿಂದ ಮಾರ್ಚ್ 11ರವರೆಗೆ ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಮೇ-ಜೂನ್‌ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಜೂನ್ 4 ರಿಂದ 30ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ.

2009ರಲ್ಲಿ ಕೂಡ ಲೋಕಸಭಾ ಚುನಾವಣೆ ಕಾರಣ ಐಪಿಎಲ್ ಪಂದ್ಯಾವಳಿಯನ್ನು ಭಾರತದಿಂದ ಹೊರಕ್ಕೆ ಸ್ಥಳಾಂತರಿಸಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಪೊಲೀಸರಿಂದ ಭದ್ರತೆ ನೀಡುವುದು ಕಷ್ಟವಾಗುವ ಕಾರಣ ಬಿಸಿಸಿಐ ವಿದೇಶದಲ್ಲಿ ಪಂದ್ಯಾವಳಿ ಆಯೋಜನೆ ಬಗ್ಗೆ ಗಂಭೀರವಾಗಿ ಚಿಂತಿಸಲಿದೆ.

“2024ರಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರತದಲ್ಲೇ ಐಪಿಎಲ್ ಪಂದ್ಯಾವಳಿ ನಡೆಸಿದ್ದೇವೆ. ಪಂದ್ಯಾವಳಿಯನ್ನು ಸ್ಥಳಾಂತಿರಸಲು ಯಾವುದೇ ಕಾರಣ ಇಲ್ಲ. ಒಂದು ವೇಳೆ ಸ್ಥಳಾಂತರ ಮಾಡಬೇಕು ಎನ್ನುವುದಾದರೆ, ವಿದೇಶದಲ್ಲಿ ಆಯೋಜನೆ ಮಾಡಲಾಗುವುದು. ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯುಎಸ್‌, ಯುಎಇ ಆಯ್ಕೆಗಳು

ಭಾರತದಲ್ಲಿ ಐಪಿಎಲ್ ಪಂದ್ಯಾವಳಿ ಆಯೋಜನೆ ಸಾಧ್ಯವಾಗದಿದ್ದರೆ, ಯುಎಇ ಅಥವಾ ವೆಸ್ಟ್ ಇಂಡೀಸ್‌-ಯುಎಸ್‌ನಲ್ಲಿ ಪಂದ್ಯಾವಳಿ ಆಯೋಜಿಸುವ ಬಗ್ಗೆ ಚಿಂತಿಸಲಾಗುತ್ತದೆ. 2024ರ ಟಿ20 ವಿಶ್ವಕಪ್ ಯುಎಸ್‌ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುವುದರಿಂದ ಇದನ್ನೂ ಪರಿಗಣಿಸಬಹುದು.

ಆದರೂ, ಯುಎಸ್ ಮತ್ತು ವೆಸ್ಟ್ ಇಂಡೀಸ್ ಸಮಯ ಭಾರತೀಯ ವೀಕ್ಷಕರಿಗೆ ಅನುಕೂಲಕರವಾಗಿ ಇಲ್ಲದ ಕಾರಣ ಯುಎಇಯಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆ ಕೂಡ ಹೆಚ್ಚಾಗಿದೆ.

English summary

Due to the limited window caused by the T20 World Cup and the Lok Sabha Elections in May 2024, IPL 2024 is expected to start on March 22 and end on May 19. To avoid clashes with the General Elections, BCCI may need to host matches outside of India.

Story first published: Sunday, July 30, 2023, 16:03 [IST]

Source link