International yoga day 2023: ಯೋಗ ದಿನಾಚರಣೆಗೆ ಮೈಸೂರು ಸಜ್ಜು: ಈ ಬಾರಿ ದಾಖಲೆ ಇಲ್ಲ, ಪ್ರದರ್ಶನ ಮಾತ್ರ | International Yoga Day Preparation In Mysuru

Mysuru

oi-Mallika P

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜೂನ್‌ 19: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಜೂನ್‌ 21ರಂದು ಬೆಳಗ್ಗೆ 6ರಿಂದ 8ರವರೆಗೆ ಯೋಗ ಕಾರ್ಯಕ್ರಮ ನಡೆಯಲಿದ್ದು, ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾಡಳಿ ಸಕಲ ಸಿದ್ಧತೆ ಕೈಗೊಂಡಿದೆ. ಈ ಬಾರಿ 12 ಸಾವಿರ ಯೋಗಪಟುಗಳನ್ನು ಸೇರಿಸುವ ನಿರೀಕ್ಷೆ ಇದೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 500 ಜನರಿಂದ ಸಾಂಕೇತಿಕ ಯೋಗ ಪ್ರದರ್ಶನ ಹಾಗೂ ನಗರದ ಅರಮನೆಯ ಮೈದಾನದಲ್ಲಿ 12 ಸಾವಿರ ಜನರು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ.

Yoga Day Preparation In Mysuru

ಜಿಲ್ಲೆಯ ಯೋಗ ಸಂಸ್ಥೆಗಳು, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಎನ್‌ಎಸ್‌ಎಸ್ ಘಟಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆಯುಷ್ ಯೋಗ ತರಬೇತುದಾರರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗ ತರಬೇತುದಾರರು ಇವರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಪ್ರತಿ ಮನೆ ಅಂಗಳಕ್ಕೂ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ.

ಈ ಬಾರಿ ಮಕ್ಕಳೇ ಪ್ರಮುಖ ಆಕರ್ಷಣೆ

ಅರಮನೆ ಅಂಗಳದಲ್ಲಿ ನಡೆಯುವ ಯೋಗ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜು ಮಕ್ಕಳನ್ನು ಆಕರ್ಷಿಸಲು ಕ್ರಮ ವಹಿಸಲಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.

ದಾಖಲೆ ಇಲ್ಲದೆ ಯೋಗದಿನಾಚರಣೆ

ಕಳೆದ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. 17 ಸಾವಿರ ಮಂದಿ ಅರಮನೆ ಅಂಗಳದಲ್ಲಿ ಯೋಗಾಸನ ಮಾಡಿದ್ದರು. ಈ ಹಿಂದೆಯೇ ಮೈಸೂರು ಹಲವು ದಾಖಲೆಗಳ ಯೋಗ ದಿನಾಚರಣೆ ನಡೆಸಿದೆ. ಆದರೆ, ಈ ವರ್ಷ ಯಾವುದೇ ದಾಖಲೆ ಮಾಡುವ ಕಸರತ್ತು ಇಲ್. ಸರಳ ಮತ್ತು ಸಾಂಕೇತಿಕವಾಗಿ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ.

Yoga Day Preparation In Mysuru

ಈ ಬಾರಿ ಮ್ಯಾಟ್‌ಗಳನ್ನು ಪೂರೈಸಲಾಗುವುದಿಲ್ಲ. ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರು ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸುವುದು ಹಾಗೂ ಯೋಗ ಮ್ಯಾಟ್ ತರಬೇಕು. ಯೋಗ ನಡೆಯುವ ಸ್ಥಳದಲ್ಲಿ ಆಂಬ್ಯುಲೆನ್ಸ್‌, ಶೌಚಗೃಹ, ಧೈರ್ಯ, ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಲು ಸಿದ್ಧತೆ ಭರದಿಂದ ಸಾಗುತ್ತಿದೆ.

International Yoga Day 2023: ಯೋಗ ದಿನದ ಥೀಮ್ ಏನು? 5 ನಿಮಿಷಗಳ ಯೋಗ ಏಕೆ ಮುಖ್ಯ?International Yoga Day 2023: ಯೋಗ ದಿನದ ಥೀಮ್ ಏನು? 5 ನಿಮಿಷಗಳ ಯೋಗ ಏಕೆ ಮುಖ್ಯ?

ಯೋಗ ದಿನಾಚರಣೆಯ ಯಶಸ್ವಿಗಾಗಿ ಜಿಲ್ಲಾಡಳಿತ ಈಗಾಗಲೇ ಯೋಗ ಒಕ್ಕೂಟ ಹಾಗೂ ವಿವಿಧ ಯೋಗ ಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ವಿವಿಧ ಶಾಲಾ-ಕಾಲೇಜುಗಳಲ್ಲಿ ಯೋಗಪಟುಗಳಿಂದ ಯೋಗ ಪ್ರದರ್ಶನದ ತರಬೇತಿ ನಡೆಯುತ್ತಿದೆ.

30 ನಿಮಿಷ ಸಭಾ ಕಾರ್ಯಕ್ರಮ

ಬೆಳಗ್ಗೆ 6.30ರಿಂದ 7 ಗಂಟೆವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 7ರಿಂದ 7.45ರವರೆಗೆ ಯೋಗ ಪ್ರದರ್ಶನ ಇರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪ ತಿಳಿಸಿದ್ದಾರೆ.

English summary

International yoga day 2023: In Mysuru No record this time, just a performance. Know more

Source link