Infosys: ಉದ್ಯೋಗಿಗಳ ವೇತನ ಹೆಚ್ಚಳ ಮುಂದೂಡಿದ ಇನ್ಫೋಸಿಸ್‌- ಕಾರಣವೇನು? ಇಲ್ಲಿದೆ ಮಾಹಿತಿ | Indian Tech Company Infosys Defers Salary Hike of Employees- Whats the reason?

Business

oi-Ravindra Gangal

|

Google Oneindia Kannada News

ಬೆಂಗಳೂರು, ಜುಲೈ 12: ಉನ್ನತ ನಿರ್ವಹಣಾ ಸ್ಥಾನಗಳಿಂತ ಕೆಳಗಿರುವ ಇನ್ಫೋಸಿಸ್ ಉದ್ಯೋಗಿಗಳ ವೇತನ ಹೆಚ್ಚಳವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. ತಮ್ಮ ವೇತನ ಹೆಚ್ಚಳವನ್ನು ತಡೆಹಿಡಿಯಲಾಗಿದೆ ಎಂಬುದಾಗಿ ಇನ್ಫೋಸಿಸ್‌ನ ಹಲವಾರು ಉದ್ಯೋಗಿಗಳು ಖಚಿತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಉನ್ನತ ನಿರ್ವಹಣಾ ಸ್ಥಾನಗಳಿಗಿಂತ ಕೆಳಗಿರುವ ಉದ್ಯೋಗಿಗಳಿಗೆ ಇನ್ಫೋಸಿಸ್ ವೇತನ ಹೆಚ್ಚಳವನ್ನು ಮಾಡುತ್ತದೆ. ಆದರೆ, ಉದ್ಯೋಗಿಗಳು ಹೆಚ್ಚಿನ ವೇತನವನ್ನು ಇಲ್ಲಿಯವರೆಗೆ ಸ್ವೀಕರಿಸಿಲ್ಲ.

ಮನಿ ಕಂಟ್ರೋಲ್‌ ವರದಿಯ ಪ್ರಕಾರ, ಹಿರಿಯ ನಿರ್ವಹಣಾ ಮಟ್ಟಕ್ಕಿಂತ ಕೆಳಗಿರುವ ಉದ್ಯೋಗಿಗಳ ವೇತನ ಹೆಚ್ಚಳವು ವಿಳಂಬವಾಗಿದೆ. ಅವರು ತಮ್ಮ ವೇತನ ಹೆಚ್ಚಳವನ್ನು ಯಾವಾಗ ಪಡೆಯುತ್ತಾರೆ ಎಂಬುದರ ಕುರಿತು ಕಂಪನಿಯಿಂದ ಯಾವುದೇ ಮಾಹಿತಿಯನ್ನು ಸ್ವೀಕರಿಸಿಲ್ಲ.

: Indian Tech Company Infosys

ಹಿರಿಯ ನಿರ್ವಹಣಾ ಮಟ್ಟದ ನೌಕರರ ವೇತನ ಹೆಚ್ಚಳವು ಜುಲೈನಲ್ಲಿ ಆಗುತ್ತದೆ. ಆದರೆ, ಅದನ್ನೂ ತಡೆಹಿಡಿಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉದ್ಯೋಗಿಗಳ ಸಂಬಳ ಹೆಚ್ಚಳದ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲವೆಂದು ತಿಳಿದುಬಂದಿದೆ.

ಕಂಪನಿಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದನ್ನು ಸೂಚಿಸುತ್ತದೆ. ಇನ್ಫೋಸಿಸ್‌ನ ಹಲವು ಪ್ರಾಜೆಕ್ಟ್‌ಗಳು ರದ್ದಾಗಿವೆ ಅಥವಾ ಸ್ಥಗಿತಗೊಂಡಿವೆ ಎಂದು ‘ಮಿಂಟ್‌’ ವರದಿ ಮಾಡಿದೆ.

 ಬೆಂಗಳೂರು ಬಳಿ ಐಫೋನ್‌ ತಯಾರಿಕಾ ಕಂಪನಿಗೆ ಭೂಮಿ ನೀಡಿದ ಸರ್ಕಾರ- ಎಲ್ಲಿ? ಎಷ್ಟು ಸಾವಿರ ಉದ್ಯೋಗ ಸೃಷ್ಟಿ? ತಿಳಿಯಿರಿ ಬೆಂಗಳೂರು ಬಳಿ ಐಫೋನ್‌ ತಯಾರಿಕಾ ಕಂಪನಿಗೆ ಭೂಮಿ ನೀಡಿದ ಸರ್ಕಾರ- ಎಲ್ಲಿ? ಎಷ್ಟು ಸಾವಿರ ಉದ್ಯೋಗ ಸೃಷ್ಟಿ? ತಿಳಿಯಿರಿ

ವಾರ್ಷಿಕ ವೇಳಾಪಟ್ಟಿಯ ಪ್ರಕಾರ, ಕಂಪನಿಯು ತನ್ನ ಉದ್ಯೋಗಿಗಳಿಗೆ ಜೂನ್ ತ್ರೈಮಾಸಿಕದಲ್ಲಿ ರಿವೀವ್‌ ರಿಪೋರ್ಟ್‌ ಅನ್ನು ನೀಡುತ್ತದೆ. ಆದರೂ, ಈ ಬಾರಿ ಕಂಪನಿಯು ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುವುದನ್ನು ಮುಂದೂಡಿದೆ ಎಂದು ತಿಳಿದುಬಂದಿದೆ.

ಹಣಕಾಸು ವರ್ಷ 22-23 ರ ಕೊನೆಯ ತ್ರೈಮಾಸಿಕದಲ್ಲಿ, ಭಾರತೀಯ ಟೆಕ್ ದೈತ್ಯ ಟೆಕ್ ಕಂಪನಿಗಳಾದ ವಿಪ್ರೋ, ಟಿಸಿಎಸ್‌, ಎಚ್‌ಸಿಎಲ್‌ ಹಾಗೂ ಇನ್‌ಫೋಸಿಸ್‌ಗಳು ಸರಿಯಾದ ಗಳಿಕೆ ಕಂಡಿಲ್ಲವೆಂದು ವರದಿಯಾಗಿದೆ. ಎಚ್‌ಸಿಎಲ್ ಟೆಕ್ ಮತ್ತು ಟಿಸಿಎಸ್ ಸ್ವಲ್ಪ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಮತ್ತೊಂದೆಡೆ, ಇನ್ಫೋಸಿಸ್ ಬಹುತೇಕ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary

Reportedly, pay hikes for Infosys employees below top management positions have been deferred

Story first published: Wednesday, July 12, 2023, 20:05 [IST]

Source link