Karnataka
oi-Reshma P
ಬೆಂಗಳೂರು,ಜೂನ್ 22: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಟೀನ್ ಗಳನ್ನ ಹೆಚ್ಚಳ ಮಾಡಲು ಸರ್ಕಾರ ನಿರ್ಧಾರಿಸಿದ್ದು, ಇಂದಿರಾ ಕ್ಯಾಟೀನ್ ಗಳಿಗೆ ಮತ್ತಷ್ಟು ಹೈಟೆಕ್ ರೂಪ ಕೊಡಲು ಸರ್ಕಾರ ಮುಂದಾಗಿದೆ.
ಈಗಾಗಲೇ ಈ ಹಿಂದೆ ಇಂದಿರಾ ಕ್ಯಾಟೀನ್ ನಲ್ಲಿ ನಂದಿನಿ ಹಾಲಿನ ಉತ್ಪನ್ನಗಳನ್ನ ಮಾರಾಟ ಮಾಡ್ಬೇಕು ಎನ್ನುವ ಚಿಂತನೆಯನ್ನ ಸಿಎಂ ಸಿದ್ದರಾಮಯ್ಯ ಅವರು ಹೊಂದಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ನಮ್ಮ ನಂದಿನಿಯಿಂದ ಯಾವೆಲ್ಲಾ ಉತ್ಪನ್ನ ಗಳು ಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ನೂತನ ಕೆಎಂ ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಟೀನ್ ಗಳನ್ನ ಮತಷ್ಟು ಹೈಟೆಕ್ ರೂಪ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಗೆ ಹೋದ್ರೆ ಊಟದ ಜೊತೆ ನಂದಿನಿ ಐಸ್ ಕ್ರೀಮ್, ಚಾಕಲೇಟ್, ಬಿಸ್ಕೇಟ್ , ಹಾಲು, ಮೊಸರು, ತುಪ್ಪಾ ಕೂಡಾ ಸಿಗಲಿದೆ. ಈ ಬಗ್ಗೆ KMF ಹಾಗೂ ರಾಜ್ಯ ಸರ್ಕಾರದಿಂದ ಮಹತ್ವದ ಚಿಂತನೆ ನಡೆಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿ ತಿರ್ಮಾನವನ್ನ ಕೆ ಎಂ ಎಫ್ ತೆಗೆದುಕೊಳ್ಳಲಿದೆ.
ಇತ್ತ ಇಂದಿರಾ ಕ್ಯಾಂಟೀನ್ ಜೊತೆ ನಂದಿನಿ ವ್ಯಾಪರ ವಹಿವಾಟು ಹೆಚ್ಚಿಸಲು ಚಿಂತನೆಯನ್ನ ಸರ್ಕಾರ ಮಾಡಿದ್ದು, ಇಂದಿರಾ ಕ್ಯಾಂಟೀನ್ ಗಳಲ್ಲಿಯೇ ಸರ್ಕಾರ ಹಾಗೂ KMF ಸಹಯೋಗದಲ್ಲಿ
ನಂದಿನಿ ಮಳಿಗೆ ತೆರಯಲು ಚಿಂತನೆ ನಡೆಸಿದೆ. ನಂದಿನಿ ಬೊಕ್ಕಸ ತುಂಬಲು ಸರ್ಕಾರ ಹಾಗೂ ನೂತನ ಕೆ ಎಮ್ ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಪ್ಲಾನ್ ಮಾಡಿದ್ದು, ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ನಡೆಸುವುದಾಗಿ ಭೀಮಾನಾಯ್ಕೆ ಹೇಳಿದ್ದಾರೆ.
English summary
Nandini products now available at Indira Canteen: Here’s what’s available.
Story first published: Thursday, June 22, 2023, 14:18 [IST]