India Monsoon: 62 ವರ್ಷಗಳ ನಂತರ ಒಂದೇ ದಿನ ಈ 2 ನಗರಗಳಲ್ಲಿ ಮುಂಗಾರು ಸಕ್ರಿಯ | Monsoon Rain Active in Same day in Mumbai and New Delhi After 62 years, Says IMD

India

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 25: ದೇಶದ ಎರಡು ಪ್ರಮುಖ ನಗರಗಳು ಎನ್ನಲಾಗುವ ನವದೆಹಲಿ ಮತ್ತು ಮುಂಬೈ ನಗರಗಳು ಒಂದೇ ದಿನ ಅಧಿಕ ಮಳೆಗೆ ಸಾಕ್ಷಿಯಾಗಿವೆ. ಭಾನುವಾರ ಬೆಳಗ್ಗೆ ಚುರುಕುಗೊಂಡಿರುವ ಮುಂಗಾರು ಮಳೆ ಇವೆರಡು ನಗರಗಳಲ್ಲಿ ಅಬ್ಬರಿಸಿದೆ. ಹೀಗಾಗಿರುವುದು ಕಳೆದ 62 ವರ್ಷಗಳಲ್ಲಿಯೇ ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಭಾನುವಾರ ಬೆಳಗ್ಗೆ 8.30 ರವರೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ದೆಹಲಿಯ ಸಫ್ದರ್‌ಜಂಗ್ ನಲ್ಲಿ ಒಟ್ಟು 48.3 ಮಿಮೀ ಮಳೆ ದಾಖಲಾಗಿದೆ. ಈ ಮೂಲಕ ನೈಋತ್ಯ ಮಾನ್ಸೂನ್ ಇಂದು25 ಜೂನ್ ರಿಂದ ದೆಹಲಿ ಮಾತ್ರವಲ್ಲದೇ ಮುಂಬೈ ನಗರದಲ್ಲೂ ಸಕ್ರಿಯವಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸಿತು.

Monsoon Rain Active in Same day in Mumbai and New Delhi After 62 years, Says IMD

ವಾಡಿಕೆಯಂತೆ ಮುಂಬೈ ನಗರಕ್ಕೆ ಮುಂಗಾರು 14 ದಿನ ವಿಳಂಬವಾದರೆ, ದೆಹಲಿಗೆ ಎರಡು ದಿನ ಮುಂಚಿತ ಸುರಿದಿದೆ. 1961 ರಿಂದ 2019ವರೆಗಿನ ನಿರಂತರ ಅಂಕಿ ಅಂಶ ನೋಡಿದರೆ ಮುಂಬೈಗೆ ಮುಂಗಾರು ಮಳೆ ಜೂನ್ 11ಕ್ಕೆ ಆಗಮಿಸಿದರೆ, ದೆಹಲಿಗೆ ಇದೇ ಜೂನ್ 27ರಂದು ಆಗಮಿಸಬೇಕಿತ್ತು. ಇದೀಗ ಇವೆರಡು ನಗರಗಳಲ್ಲಿ ಒಂದೇ ದಿನ ಮಳೆ ಅಬ್ಬರಿಸಲು ಪ್ರಾರಂಭಿಸಿವೆ. ಈ ಹಿಂದೆ 1961ರ ಜೂನ್ ಜೂನ್ 21 ರಂದು ಮುಂಬೈ-ದೆಹಲಿಯಲ್ಲಿ ಒಟ್ಟೊಟ್ಟಿಗೆ ಮಳೆ ಆರಂಭವಾಗಿತ್ತು. ಅದನ್ನು ಬಿಟ್ಟರೆ ಸುಮಾರು 62 ವರ್ಷಗಳ ಬಳಿಕ ಮತ್ತೆ ಒಂದೇ ದಿನ ಅಧಿಕ ಮಳೆ ಬಿದ್ದಿವೆ.

 Karnataka Monsoon: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮುಂಗಾರು ಚರುಕು, ಇಲ್ಲಿದೆ ವಿವರ Karnataka Monsoon: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮುಂಗಾರು ಚರುಕು, ಇಲ್ಲಿದೆ ವಿವರ

ಸೋಮವಾರವೂ ಅಧಿಕ ಮಳೆ: ಆರೇಂಜ್ ಅಲರ್ಟ್

ಈ ನಗರಗಳಿಗೆ ನಿರಂತರ ಮಳೆ ಮುನ್ಸೂಚನೆ ಇದೆ. ಸೋಮವಾರ ಹೆಚ್ಚಿನ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುಂಬೈ-ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ನಂತರ ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಭಾನುವಾರ ದೆಹಲಿಯಾದ್ಯಂತ ಮಳೆ ಆಗಿದ್ದರಲ್ಲಿ ಲೋಧಿ ರಸ್ತೆಯಲ್ಲಿ 59.6 ಮಿಮೀ, ಅಯನಗರ 54 ಮಿಮೀ, ರಿಡ್ಜ್ 27.4 ಮಿಮೀ ಮತ್ತು ಪಾಲಂ 29.6 ಮಿಮೀ ಮಳೆ ದಾಖಳಾಗಿದೆ. ಜೂನ್‌ನಲ್ಲಿ ದೆಹಲಿಯಲ್ಲಿ ವಾಡಿಕೆ 74.1 ಮಿಮೀ ನಷ್ಟು ಮಳೆ ಆಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತಲೂ ಹೆಚ್ಚು ಮಳೆ ಮುಂದಿನ ದಿನಗಳಲ್ಲಿ ಆಗಲಿದೆ.

Monsoon Rain Active in Same day in Mumbai and New Delhi After 62 years, Says IMD

ಒಂದು ದಿನದದಲ್ಲಿ ಆಗುವ ಮಳೆಯ (24-ಗಂಟೆ) ವಿವರ ನೋಡುವದಾದರೆ 0- 2.4 ಮಿಮೀ ನಷ್ಟು ಮಳೆ ಆದರೆ ಅದನ್ನು ‘ಅತ್ಯಂತ ಲಘು’ ಮಳೆ ಎಂದು ವರ್ಗೀಕರಿಸಲಾಗುತ್ತದೆ. 2.5 ಮಿಮೀ -15.5 ಮಿಮೀ ನಡುವಿನ ಮಳೆಗೆ ಹಗುರ ಮಳೆ ಅಂತಲೂ, 15.6 ಮಿಮಿ ಯಿಂದ 64.4ಮಿಮೀ ಮಧ್ಯದ ಮಳೆಗೆ ‘ಸಾಧಾರಣ’ ಮತ್ತು 64.4 ಮಿಮಿಗಿಂತ ಅಧಿಕ ಮಳೆಯಾದರೆ ಅದನ್ನು ಭಾರೀ ಮಳೆ ಎಂದು ಐಎಂಡಿ ಗುರುತಿಸುತ್ತದೆ.

ದೆಹಲಿಯಲ್ಲಿ ನಾಳೆ ಸೋಮವಾರ ಭಾರೀ ಮಳೆ ಆಗಲಿದೆ. ನಂತರ ಮಂಗಳವಾರ ಮತ್ತು ಬುಧವಾರವೂ ಲಘು ಮಳೆ ಆಗುವ ಸಾಧ್ಯತೆ ಇದೆ. ಕೆಲವೆಡೆ ತುಂತುರು ಮಳೆ ಶುಕ್ರವಾರದವರೆಗೆ ಮುಂದುವರಿಯಬಹುದು. ಕಳೆದ ವರ್ಷ ಜೂನ್ 30 ರಂದು ದೆಹಲಿಯಲ್ಲಿ ಮಳೆ ಅತ್ಯಧಿಕ ಮಳೆ ದಾಖಲಾಗಿತ್ತು.

ದೆಹಲಿ ತಾಪಮಾನ- ಗಾಳಿ ಗುಣಮಟ್ಟ ಹೇಗಿದೆ?

ಮಳೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ 23.1° ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ ಐದು ಡಿಗ್ರಿ ಕಡಿಮೆ ಎನ್ನಲಾಗಿದೆ. ಒಂದು ದಿನದ ಹಿಂದೆ ಇದು 30.4°C ಆಗಿತ್ತು. ಶನಿವಾರ ದೆಹಲಿಯಲ್ಲಿ 37.4 ಡಿಸೆ ಗರಿಷ್ಠ ತಾಪಮಾನ ದಾಖಲಾಗಿತ್ತು. ಭಾನುವಾರದ ಮುನ್ಸೂಚನೆ ಪ್ರಕಾರ, ಗರಿಷ್ಠ ತಾಪಾಮನ 32° ಡಿಸೆ ದಾಖಲಾಗಬಹುದು ಎನ್ನಲಾಗಿದೆ.

ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಭಾನುವಾರ ಬೆಳಗ್ಗೆ 10 ಗಂಟೆಗೆ 162 AQI ಇತ್ತು. ಶನಿವಾರ ಸಂಜೆ 4 ಗಂಟೆಗೆ 169 AQI ನಷ್ಟಿತ್ತು. ಈ ಸೂಚ್ಯಂಕವು ಸೋಮವಾರ ತೃಪ್ತಿದಾಯಕ (100 AQI) ಶ್ರೇಣಿಗಿಂತ ಕಡಿಮೆಯಾಗುವ ಲಕ್ಷಣಗಳು ಇವೆ ಎಂದು ಮುನ್ಸೂಚನೆ ದೊರೆತಿದೆ.

ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದ ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ್ ಜಮ್ಮು ಮತ್ತು ಕಾಶ್ಮೀರದ ಹಾಗೂ ಇನ್ನಿತರ ರಾಜ್ಯಗಳಲ್ಲಿ ಮುಂಗಾರು ಸಕ್ರಿಯಗೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಐಎಂಡಿ ತಿಳಿಸಿದೆ.

  • Monsoon 2023: ಕರ್ನಾಟಕ ಕರಾವಳಿಯಲ್ಲಿ ಜೂನ್ 28 ರ ವರೆಗೆ ಭಾರೀ ಮಳೆ, ಬಿರುಸಿನ ಗಾಳಿ, ಮೀನುಗಾರರಿಗೆ ಎಚ್ಚರಿಕೆ
  • Karnataka rains: ಕರಾವಳಿ ಜಿಲ್ಲೆಗಳಿಗೆ ‘ಆರೇಂಜ್-ಯೆಲ್ಲೋ’ ಅಲರ್ಟ್, ಒಳನಾಡಿಗೆ ಮುಂಗಾರು ದುರ್ಬಲ
  • ವಿಪರೀತ ಮಳೆ: ಅಸ್ಸಾಂನಲ್ಲಿ 22 ಜಿಲ್ಲೆಗಳ 5 ಲಕ್ಷ ಮಂದಿ ಸಂತ್ರಸ್ತ, ಒರ್ವ ಸಾವು
  • Karnataka Rain: ರೈತರಲ್ಲಿ ಹರ್ಷ ತಂದ ಮಳೆ: ಇಂದು ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ
  • Karnataka Rain: ಉತ್ತರ ಒಳನಾಡಿಗೆ ವರುಣನ ಶಾಕ್, ಕರಾವಳಿಗೆ 5 ದಿನ ಹಳದಿ ಎಚ್ಚರಿಕೆ
  • ಬೆಳಗಾವಿ; ಖಾಸಗಿ ಬೋರ್‌ವೆಲ್ ಬಾಡಿಗೆಗೆ, ಟ್ಯಾಂಕರ್‌ ಮೂಲಕ ನೀರು ಪೂರೈಕೆ
  • Karnataka Rain: ಉತ್ತರ ಕರ್ನಾಟಕದಲ್ಲೂ ಮುಂಗಾರು ಚುರುಕು: ತುಮಕೂರು, ಮಂಡ್ಯ ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ
  • Bengaluru Rains: ಬುಧವಾರವು ಬಿದ್ದ ಜಿಟಿ ಜಟಿ ಮಳೆ, ಮುನ್ಸೂಚನೆ ಏನಿದೆ? ನೋಡಿ
  • Heavy rain: ಅಸ್ಸಾಂ ಪ್ರವಾಹಕ್ಕೆ 34,000 ಕ್ಕೂ ಹೆಚ್ಚು ಜನರು ತತ್ತರ: ಭಾರೀ ಮಳೆಯ ಮುನ್ಸೂಚನೆ
  • Karnataka Monsoon: ಅಂತೂ ಇಂತು ಉತ್ತರ ಒಳನಾಡಿಗೆ ಸಿಹಿ ಸುದ್ದಿ, ರೈತರಲ್ಲಿ ಮಂದಹಾಸ, 10 ಜಿಲ್ಲೆಗೆ ‘ಹಳದಿ ಎಚ್ಚರಿಕೆ’
  • Karnataka Rain: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಉಳಿದ ಜಿಲ್ಲೆಗಳ ಮಳೆ ವರದಿ
  • ಬಿಪರ್‌ಜೋಯ್ ಚಂಡಮಾರುತ: ರಾಜಸ್ಥಾನದಲ್ಲಿ ಭಾರೀ ಮಳೆಗೆ 8 ಸಾವು, 17,000 ಮಂದಿ ಸ್ಥಳಾಂತರ

English summary

Monsoon rain active on Sunday June 25th same day in Mumbai and Delhi after 62 Years, IMD report says.

Story first published: Sunday, June 25, 2023, 14:48 [IST]

Source link