IND vs WI T20 squad: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ- ಕೊಹ್ಲಿ, ಶರ್ಮಾಗಿಲ್ಲ ಸ್ಥಾನ, ಕ್ಯಾಪ್ಟನ್‌ ಯಾರು? | India T20I Squad vs West Indies: Indian Players full list is here- Who is the captain?

Sports

oi-Ravindra Gangal

|

Google Oneindia Kannada News

ನವದೆಹಲಿ, ಜುಲೈ 05: ಐದು ಪಂದ್ಯಗಳ ವೆಸ್ಟ್‌ ಇಂಡೀಸ್‌ ಸರಣಿಗೆ ( ಟಿ20 ) ಭಾರತ ತಂಡವನ್ನು ಪ್ರಕಟಿಸಲಾಗಿದೆ. ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಅಚ್ಚರಿಯ ಆಯ್ಕೆಗಳಿವೆ. ಸ್ಪೋಟಕ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯು ಕೆರಿಬಿಯನ್‌ ದ್ವೀಪಗಳು ಮತ್ತು ಅಮೆರಿಕದ ಫ್ಲೋರಿಡಾದಲ್ಲಿ ಆಯೋಜನೆಗೊಂಡಿದೆ.

ವೆಸ್ಟ್‌ ಇಂಡೀಸ್‌ ಸರಣಿಗೆ ಆಯ್ಕೆಯಾದ ಭಾರತ ತಂಡ

ಇಶಾನ್ ಕಿಶನ್ ( ಉಪ ನಾಯಕ ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ ( ಉಪ ನಾಯಕ ), ಸಂಜು ಸ್ಯಾಮ್ಸನ್ ( ವಿಕೆಟ್ ಕಿಪರ್), ಹಾರ್ದಿಕ್ ಪಾಂಡ್ಯ ( ನಾಯಕ ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್

 IND vs WI T20 squad

ಭಾರತ ತಂಡವನ್ನು ಹಾರ್ದಿಕ್‌ ಪಾಂಡ್ಯ ಅವರು ಮುನ್ನೆಡಸಲಿದ್ದಾರೆ. ಸೂರ್ಯಕುಮಾರ್ ಯಾದವ್‌ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಇಸಂಜು ಸ್ಯಾಮ್ಸನ್, ಇಶಾನ್‌ ಕಿಶನ್‌ ವಿಕೆಟ್‌ ಕಿಪರ್‌ ಆಗಿ ಆಡಲಿದ್ದಾರೆ.

ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿ ಅಜಿತ್ ಅಗರಕರ್ ನೇಮಕಗೊಂಡ ಒಂದು ದಿನದ ನಂತರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರು ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ T20I ಸರಣಿ ಅಲ್ಲಿ ಆಡಲಿದ್ದಾರೆ. ಯಶಸ್ವಿ ಮತ್ತು ವರ್ಮಾ ಇಬ್ಬರೂ ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಆಟಗಾರರು. ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮತ್ತೊಂದೆಡೆ ರಿಂಕು ಸಿಂಗ್‌ಗೆ ಅವಕಾಶ ನಿರಾಕರಿಸಲಾಗಿದೆ. ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಸಂಜು ಸ್ಯಾಮ್ಸನ್ ತಂಡಕ್ಕೆ ಮರಳಿದ್ದಾರೆ. ಈ ತಂಡವನ್ನು ಅಜಿತ್ ಅಗರ್ಕರ್ ನೇತೃತ್ವದ ಹಿರಿಯ ಪುರುಷರ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿಯನ್ನು ಮುಂದುವರಿಸಲಾಗಿದೆ. ಹಾರ್ದಿಕ್ ಪಾಂಡ್ಯ ನಾಯಕರಾಗಿ ಮುಂದುವರಿದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

ವೆಸ್ಟ್ ಇಂಡೀಸ್ T20I ಸರಣಿ ವೇಳಾಪಟ್ಟಿ:

5 ಪಂದ್ಯಗಳ T20I ಸರಣಿ, ಆಗಸ್ಟ್ 4 ರಿಂದ ಆಗಸ್ಟ್ 8 ರ ವರೆಗೆ

1 ನೇ T20I: ಆಗಸ್ಟ್ 4, ಟ್ರಿನಿಡಾಡ್

2ನೇ T20I: ಆಗಸ್ಟ್ 6, ಗಯಾನಾ

3ನೇ T20I: ಆಗಸ್ಟ್ 8, ಗಯಾನಾ

4 ನೇ T20I: ಆಗಸ್ಟ್ 12, ಫ್ಲೋರಿಡಾ

5 ನೇ T20I: ಆಗಸ್ಟ್ 13, ಫ್ಲೋರಿಡಾ

English summary

India T20I Squad vs West Indies: Indian Players full list is here-

Source link