Immadi Pulikeshi: ಇಮ್ಮಡಿ ಪುಲಿಕೇಶಿ ಸಾಮ್ರಾಜ್ಯ ಮರುಸೃಷ್ಟಿ! | Immadi Pulikeshi and Badami Chalukya Dynasty Through AI

Karnataka

oi-Malathesha M

|

Google Oneindia Kannada News

ತಂತ್ರಜ್ಞಾನ ಬೆಳೆದಂತೆಲ್ಲಾ ಮನುಷ್ಯ ಏನು ಬೇಕಾದ್ರೂ ಸಾಧಿಸುತ್ತಿದ್ದಾನೆ. ಕಳೆದು ಹೋದ ಘಟನೆಗಳು ಹಾಗೂ ದಿನಗಳನ್ನು ಮತ್ತೆ ಸೃಷ್ಟಿ ಮಾಡುವಷ್ಟು ಶಕ್ತಿಶಾಲಿಯಾಗಿದ್ದಾನೆ. ಇದೇ ಜಮಾನದಲ್ಲಿ ‘ಕೃತಕ ಬುದ್ಧಿಮತ್ತೆ’ ಅಥವಾ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಕೂಡ ಲಗ್ಗೆ ಇಟ್ಟಿದೆ. ಆ ಮೂಲಕ ಮನುಷ್ಯನ ಭವಿಷ್ಯವೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ. ಇದೇ ‘ಕೃತಕ ಬುದ್ಧಿಮತ್ತೆ’ ಇದೀಗ ಕನ್ನಡಿಗರ ಹೆಮ್ಮೆಯ ರಾಜನ ಸಾಮ್ರಾಜ್ಯ ಮರುಸೃಷ್ಟಿಸಿದೆ.

ಹೌದು, ಚಾಲುಕ್ಯರ ದೊರೆ ಹಾಗೂ ಭಾರತ ಕಂಡಿದ್ದ ಅತ್ಯುತ್ತಮ ಆಡಳಿತಗಾರ ಇಮ್ಮಡಿ ಪುಲಿಕೇಶಿ ಸಾಮ್ರಾಜ್ಯ ಮತ್ತೆ ಕಣ್ಣೆದುರು ಬಂದಿದೆ. ಇದೆಲ್ಲವನ್ನು ಸಾಧ್ಯವಾಗಿಸಿದ್ದು ‘ಕೃತಕ ಬುದ್ಧಿಮತ್ತೆ’ ಅಥವಾ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’. ಪದೇ ಪದೆ ತನ್ನ ಕಲ್ಪನೆಯಲ್ಲಿ ಹಲವು ರೀತಿ ಫೋಟೋಗಳನ್ನ ಸೃಷ್ಟಿಸುವ ಕೃತಕ ಬುದ್ಧಿಮತ್ತೆ ಇದೀಗ ಕನ್ನಡಿಗರಿಗೂ ಖುಷಿ ಕೊಟ್ಟಿದೆ. 6ನೇ ಶತಮಾನದಲ್ಲಿ ಕನ್ನಡ ನಾಡನ್ನ ಆಳಿದ್ದ ಇಡೀ ಭಾರತದಲ್ಲೇ ಅತಿದೊಡ್ಡ ಸಾಮ್ರಾಜ್ಯ ಕಟ್ಟಿದ್ದ ಇಮ್ಮಡಿ ಪುಲಿಕೇಶಿಯ ಅಂದಿನ ಸಾಮ್ರಾಜ್ಯ ಹೇಗಿತ್ತು? ಎಂಬುದನ್ನು ಕೆತ್ತಿಕೊಟ್ಟಿದೆ ಎಐ. ಈಗ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

immadi-pulikeshi-and-badami-chalukya-dynasty

ಕನ್ನಡಿಗರ ಹೆಮ್ಮೆಯ ದೊರೆ ಪುಲಿಕೇಶಿ

ಚಾಲುಕ್ಯರ ದೊರೆಗಳಲ್ಲೇ ಇಮ್ಮಡಿ ಪುಲಿಕೇಶಿ ಅತ್ಯಂತ ಪ್ರಭಾವಶಾಲಿ ರಾಜ. ಪುಲಿಕೇಶಿಯ ಘರ್ಜನೆಗೆ ಇಡೀ ಭಾರತದ ಘಟಾನುಘಟಿ ಸಾಮ್ರಾಜ್ಯಗಳೇ ಬೆಚ್ಚಿಬಿದ್ದಿದ್ದವು. ಅದರಲ್ಲೂ ದಕ್ಷಿಣ ಭಾರತದಲ್ಲಿ ಅಂದಿನ ಕಾಲಕ್ಕೆ ಹವಾ ಇಟ್ಟಿದ್ದ ಪಲ್ಲವರು ಪುಲಿಕೇಶಿಯ ಎದುರು ಸೋತರೆಂಬುದು ಇತಿಹಾಸದ ಮಾಹಿತಿ. ಬಲಾಡ್ಯ ಪಲ್ಲವರ ಮೇಲೆ ಎರಗಿದ್ದ ಪುಲಿಕೇಶಿಯು, ಪಲ್ಲವರ ರಾಜಧಾನಿ ಕಂಚಿ ಬಿಟ್ಟು, ಬಹುಪಾಲು ರಾಜ್ಯವನ್ನು ವಶಪಡಿಸಿಕೊಂಡನು ಅಂತಾ ಹೇಳುತ್ತದೆ ಇತಿಹಾಸ. ಇದು ಪುಲಿಕೇಶಿಯ ಜೀವನದಲ್ಲಿ ಕಂಡ ರೋಚಕ ತಿರುವು. ಅಲ್ಲಿಂದ ವೈರಿಗಳ ವಿರುದ್ಧ ಪುಲಿಕೇಶಿಯ ಘರ್ಜನೆ ಜೋರಾಗಿತ್ತು. ಇಂತಹ ಹೆಮ್ಮೆಯ ರಾಜನ ಚಿತ್ರ ಹಾಗೂ ಆತನ ಸಾಮ್ರಾಜ್ಯದ ಚಿತ್ರಣ ಮತ್ತೆ ಕಣ್ಣೆದುರು ಬಂದಿದೆ.

ಗುಜರಾತ್ ತನಕ ಕನ್ನಡಿಗರದ್ದೇ ಹವಾ!

ಆಗಿನ ಕಾಲಘಟ್ಟದಲ್ಲಿ ಪರಿಸ್ಥಿತಿ ಹೇಗಿತ್ತು ಎಂದರೆ, ಉತ್ತರ ಭಾರತದ ರಾಜರು ಸಾಕಷ್ಟು ಪ್ರಭಾವ ಹೊಂದಿದ್ದರು. ಅಂದಿನ ಕಾಲಕ್ಕೆ ಅತ್ಯಾಧುನಿಕ ಯುದ್ಧ ತಂತ್ರಗಳು ಅವರಿಗೆಲ್ಲಾ ಗೊತ್ತಿತ್ತು. ಆದರೂ ಪುಲಿಕೇಶಿ ತನ್ನ ಸುತ್ತಮುತ್ತಲಿನ ರಾಜರುಗಳನ್ನು ಸೋಲಿಸಿದ ನಂತರ, ಉತ್ತರ ಭಾರತದೆಡೆಗೆ ತನ್ನ ಗಮನ ಹರಿಸಿದನು. ಮಾಳ್ವರು ಹಾಗೂ ಗುರ್ಜರ ಪದೇಶಗಳನ್ನು ಯುದ್ಧದಲ್ಲಿ ಗೆಲ್ಲುವುದರ ಮೂಲಕ ಇತಿಹಾಸ ಬರೆದನು. ಹೀಗೆ ಚಾಲುಕ್ಯರ ರಾಜ ಇಮ್ಮಡಿ ಪುಲಿಕೇಶಿಯ ಸಾಮ್ರಾಜ್ಯ ಗುಜರಾತ್ ತನಕ ಹರಡಿಕೊಂಡಿತ್ತು. ಈ ಮೂಲಕ ಕನ್ನಡಿಗರ ಸಾಮ್ರಾಜ್ಯ ಉತ್ತರ ಭಾರತಕ್ಕೂ ವ್ಯಾಪಿಸಿದ್ದು ಸ್ಪಷ್ಟವಾಗುತ್ತದೆ. ಹೀಗೆ ಕನ್ನಡ ನಾಡಿನ ಸಂಸ್ಕೃತಿ ಹಲವು ಶತಮಾನಗಳ ಹಿಂದೆಯೇ ಇಡೀ ಭಾರತಕ್ಕೆ ಗೊತ್ತಾಗಿತ್ತು.

ಅಪರಾಧಿಗಳನ್ನು ರೆಡ್‌ಹ್ಯಾಂಡಾಗಿ ಹಿಡಿಯಲು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ AI ಆಧಾರಿತ ಕ್ಯಾಮೆರಾ ಅಪರಾಧಿಗಳನ್ನು ರೆಡ್‌ಹ್ಯಾಂಡಾಗಿ ಹಿಡಿಯಲು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ AI ಆಧಾರಿತ ಕ್ಯಾಮೆರಾ

ಒಟ್ನಲ್ಲಿ ಜಗತ್ತಿನಾದ್ಯಂತ ಹೊಸ ಅಲೆ ಮೂಡಿದೆ ಮನುಷ್ಯ ತಾಂತ್ರಿಕವಾಗಿ ಎಷ್ಟು ಅಭಿವೃದ್ಧಿ ಹೊಂದುತ್ತಿದ್ದಾನೆ ಎಂದರೆ ಭಯ & ಖುಷಿ ಎರಡೂ ಎದುರಾಗುತ್ತಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ಚಾಟ್‌ಬಾಟ್‌ ಕುರಿತು ವ್ಯಾಪಕ ಆಕ್ರೋಶದ ಜೊತೆಗೆ, ಅದು ಅಗತ್ಯ ಎಂಬ ಮಾತು ಕೂಡ ಕೇಳಿಬರುತ್ತಿದೆ. ಆದರೆ ಎಲ್ಲವನ್ನೂ ಮೀರಿ ಅಭಿವೃದ್ಧಿ ಹೊಂದುತ್ತಿದೆ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’. ಇಂತಹ ಅತ್ಯಾಧುನಿಕ ತಂತ್ರಜ್ಞಾನ ಕನ್ನಡಿಗರ ಇತಿಹಾಸವನ್ನೂ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದೆ. ಹೀಗಾಗಿ ಇಮ್ಮಡಿ ಪುಲಿಕೇಶಿ ಸಾಮ್ರಾಜ್ಯವನ್ನು ಆಧುನಿಕ ಕಾಲದಲ್ಲೂ ಜನ ಕಣ್ತುಂಬಿಕೊಳ್ಳಲು ಸಾಧ್ಯವಾಗಿದೆ.

English summary

Immadi Pulikeshi and Badami Chalukya Dynasty Through AI

Story first published: Thursday, July 27, 2023, 23:25 [IST]

Source link