Jobs
oi-Ravindra Gangal
ನವದೆಹಲಿ, ಜುಲೈ 01: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್, ಐಬಿಪಿಎಸ್ ಕ್ಲರ್ಕ್ ನೇಮಕಾತಿ ಪ್ರಕ್ರಿಯೆಯ ಕುರಿತು ಅಧಿಸೂಚನೆ ಹೊರಡಿಸಿದೆ. ಒಟ್ಟು 4,045 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್- ibps.in ನಲ್ಲಿ ಜುಲೈ 21 ರವರೆಗೆ ಅರ್ಜಿ ಸಲ್ಲಿಸಬಹುದು.
ಕ್ಲರ್ಕ್ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ, ibpsonline.ibps.in ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು IBPS ಕ್ಲರ್ಕ್ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ತೆರೆಯಲಾದ IBPS ಕ್ಲರ್ಕ್ ನೋಂದಣಿ ಲಿಂಕ್ನಲ್ಲಿ, ಹೆಸರು ಮತ್ತು ಮೊಬೈಲ್ ಸಂಖ್ಯೆಯ ವೈಯಕ್ತಿಕ ವಿವರಗಳನ್ನು ನಮೂದಿಸಿ, ನಂತರ ನಿಮ್ಮ ಫೋಟೋ ಮತ್ತು ಸಹಿಯನ್ನು ನೀಡಿಬೇಕಾಗುತ್ತದೆ.
ಶೈಕ್ಷಣಿಕ ಅರ್ಹತೆಗಳ ವಿವರಗಳನ್ನು ನಮೂದಿಸಿ, ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿಬೇಕಾಗುತ್ತದೆ. ಆ ನಂತರ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಬೇಕಾಗುತ್ತದೆ. IBPS ಕ್ಲರ್ಕ್ ಅರ್ಜಿ ನಮೂನೆಯನ್ನು ಸೇವ್ ಮಾಡಿ ಮತ್ತು ಡೌನ್ಲೋಡ್ ಮಾಡಬೇಕಾಗುತ್ತದೆ. ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿಬೇಕೆಂದು ಸೂಚಿಸಲಾಗಿದೆ.
IBPS ಕ್ಲರ್ಕ್ ನೇಮಕಾತಿ 2023: ibps.in ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: ibps.in
IBPS ಕ್ಲರ್ಕ್ ನೋಂದಣಿ ಫಾರ್ಮ್ ಲಿಂಕ್ ಅನ್ನು ಕ್ಲಿಕ್ ಮಾಡಿ
ಹೆಸರು, ಮೊಬೈಲ್ ಸಂಖ್ಯೆ, ಮೇಲ್ ಐಡಿ, ಶೈಕ್ಷಣಿಕ ಅರ್ಹತೆಯ ವೈಯಕ್ತಿಕ ವಿವರಗಳನ್ನು ನಮೂದಿಸಿ
ಫೋಟೋ, ಸಹಿ, ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಅರ್ಜಿ ಶುಲ್ಕವನ್ನು ಪಾವತಿಸಿ
ಸಬ್ಮಿಟ್ ಕ್ಲಿಕ್ ಮಾಡಿ
IBPS ಕ್ಲರ್ಕ್ ನೋಂದಣಿ ಫಾರ್ಮ್ ಅನ್ನು ಸೇವ್ ಮತ್ತು ಡೌನ್ಲೋಡ್ ಮಾಡಿ
ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ
IBPS ಕ್ಲರ್ಕ್ ನೇಮಕಾತಿ 2023: ಅರ್ಹತಾ ಮಾನದಂಡ
ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷಗಳಾಗಿರಬೇಕು. ಅಭ್ಯರ್ಥಿಗಳು ಜುಲೈ 1, 2003 ರ ನಂತರ ಜನಿಸಬಾರದು.
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಕಾಲೇಜುಗಳಿಂದ ಪದವಿ ಪಡೆದಿರಬೇಕು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ 850 ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ರೂ 175 ಆಗಿರಬೇಕು- SC/ST/PwBD/EXSM.
ಪರೀಕ್ಷಾ ದಿನಾಂಕ: ಐಬಿಪಿಎಸ್ ಕ್ಲರ್ಕ್ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ನಡೆಸಲಾಗುವುದು ಮತ್ತು ಮುಖ್ಯ ಪರೀಕ್ಷೆಯು ಅಕ್ಟೋಬರ್ನಲ್ಲಿ ನಡೆಯಲಿದೆ.
IBPS ಕ್ಲರ್ಕ್ ನೇಮಕಾತಿ 2023 ರ ವಿವರಗಳಿಗಾಗಿ, ದಯವಿಟ್ಟು ಅಧಿಕೃತ ವೆಬ್ಸೈಟ್- ibps.in ಗೆ ಭೇಟಿ ನೀಡಿ.
English summary
IBPS Clerk Recruitment 2023: The Institute of Banking Personnel Selection, IBPS has notified about the Clerk recruitment process.
Story first published: Saturday, July 1, 2023, 11:46 [IST]