Hatti Gold Mines: 77ನೇ ವರ್ಷಕ್ಕೆ ಕಾಲಿಟ್ಟ “ಹಟ್ಟಿ ಚಿನ್ನದ ಗಣಿ” ಕಂಪನಿ, ಇಲ್ಲಿದೆ ರೋಚಕ ಸ್ಟೋರಿ | How did the Hatti gold mines compony become famous?, Know details

Raichur

oi-Umapathi Ramoji

By ರಾಯಚೂರು ಪ್ರತಿನಿಧಿ

|

Google Oneindia Kannada News

ರಾಯಚೂರು, ಜುಲೈ, 09: ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು 76ನೇ ವಸಂತಗಳನ್ನು ಪೂರೈಸಿ 77ನೇ ವರ್ಷಕ್ಕೆ ಕಾಲಿಟ್ಟಿದೆ.

ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಈ ಕಂಪನಿಯಲ್ಲಿ ಒಟ್ಟು 4,200 ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ನಿತ್ಯ ಹಲವು ಕೆ.ಜಿ ಬಂಗಾರ ಉತ್ಪಾದನೆಯಾಗುತ್ತಿದೆ.

How did the Hatti gold mines compony become famous?, Know details

ಕಂಪನಿ ಅಡಿಯಲ್ಲಿ ‌ಮೂರು ಘಟಕಗಳಿದ್ದು, ಮೂರು ಪಾಳೆಗಳಲ್ಲಿ ಕೆಲಸ ನಡೆಯುತ್ತದೆ. ಪ್ರತಿ ಘಟಕದಲ್ಲಿ ಪ್ರತಿ ಪಾಳೆಯಲ್ಲಿ 250ರಿಂದ 300 ಮಂದಿ ಕೆಲಸ ಮಾಡುತ್ತಾರೆ. ಇಲ್ಲಿ 2022-2023ರಲ್ಲಿ ನಿತ್ಯ ಸರಾಸರಿ 3.86 ಕೆ.ಜಿ ಚಿನ್ನ ಉತ್ಪಾದಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್‌: ಹುಬ್ಬಳ್ಳಿ ಬಾಲಕಿಯ ಅಸಮಾನ್ಯ ಸಾಧನೆಇಂಡಿಯಾ ಬುಕ್ ಆಫ್ ರೆಕಾರ್ಡ್‌: ಹುಬ್ಬಳ್ಳಿ ಬಾಲಕಿಯ ಅಸಮಾನ್ಯ ಸಾಧನೆ

ಹಟ್ಟಿ ಚಿನ್ನದ ಗಣಿಗಿದೆ ದಶಕಗಳ ಇತಿಹಾಸ

ಈ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಸಿದ ಬಗ್ಗೆ ನೂರಾರು ವರ್ಷಗಳ ಇತಿಹಾಸವಿದೆ. ಆದರೂ, 1947 ಜುಲೈ 8ರಂದು ಮೊದಲ ಬಾರಿಗೆ “ಹೈದರಾಬಾದ್‌ ಹಟ್ಟಿ ಚಿನ್ನದ ಗಣಿ” ಎಂಬ ಹೆಸರಿನಲ್ಲಿ ಅಧಿಕೃತವಾಗಿ ನೋಂದಾಯಿತವಾಗಿದೆ. ಭಾಷವಾರು ಪ್ರಾಂತ್ಯಗಳ ಪುನರ್ ವಿಂಗಡನೆಯಾದ ನಂತರ 1956ರಲ್ಲಿ ಈ ಕಂಪನಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿತ್ತು. ಆಗ “ದಿ ಹಟ್ಟಿ ಚಿನ್ನದ ಗಣಿ ಕಂಪನಿ” ಎಂದು ಮರು ನಾಮಕರಣಗೊಂಡಿತು.

ಹಲವು ಏಳು-ಬೀಳು ಕಂಡ ಕಂಪನಿ

ಕಳೆದ 76 ವರ್ಷದಲ್ಲಿ ಗಣಿ ಕಂಪನಿ ಹಲವು ಏಳು ಬೀಳು ಕಂಡಿದೆ. ಚಿನ್ನದ ಬೆಲೆ ಏರಿಕೆ ಹಾಗೂ ಉತ್ಪಾದನೆಯಲ್ಲಿ ಸಾಧಿಸಿ ಕಳೆದೆರಡು ದಶಕದಿಂದ ಗಣಿ ಕಂಪನಿ ಲಾಭದಲ್ಲಿದೆ. 1998ದಿಂದ 2002 ಅವಧಿಯಲ್ಲಿ ಚಿನ್ನದ ಬೆಲೆ ಕುಸಿದಿದ್ದಾಗ ಗಣಿ ಕಂಪನಿ ಹಲವು ಸಂಕಷ್ಟಗಳನ್ನು ಎದುರಿಸಿತ್ತು ಎನ್ನುತ್ತಾರೆ ಇಲ್ಲಿನ ಕಾರ್ಮಿಕರು.

How did the Hatti gold mines compony become famous?, Know details

1998ರಲ್ಲಿ ಗಣಿ ಕಂಪನಿ ವಿವಿಧ ಮೂಲಗಳಿಂದ ಸಾಲ ಪಡೆದರೂ ಕೂಡ ಕಾರ್ಮಿಕರಿಗೆ ಸಂಬಳ ಕೊಡಲು ಆಗದಂತಹ ಸ್ಧಿತಿ ಎದುರಾಗಿತ್ತು. ಆಗ ಬೆಂಗಳೂರಿನಲ್ಲಿ ಇದ್ದ ಗಣಿ ಕಂಪನಿಯ ನೋಂದಾಯಿತ ಕಚೇರಿಯನ್ನೇ ಮಾರಾಟ ಮಾಡಿ ಕಾರ್ಮಿಕರಿಗೆ ಸಂಬಳ ಕೊಟ್ಟ ಉದಾಹರಣೆಯೂ ಇದೆ. ಸಂಬಳ ಹಾಗೂ ಸೌಲಭ್ಯ ಕಡಿತವಾದರೂ ಕಾರ್ಮಿಕರು ಅಸಹಕಾರ ತೋರಲಿಲ್ಲ. ಮುಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಚೇತರಿಕೆ ಕಂಡಾಗ ಎಲ್ಲ ಸಂಕಷ್ಟಗಳು ನಿವಾರಣೆಯಾಗಿ ಕಾರ್ಮಿಕರ ಮೊಗದಲ್ಲಿ ಮುಗುಳ್ನಗೆ ಮೂಡಿತು ಎಂದು ಇಲ್ಲಿ ಹಿರಿಯ ಕಾರ್ಮಿಕರು ಹೇಳುತ್ತಿದ್ದಾರೆ.

ಹಟ್ಟಿ ಚಿನ್ನದ ಗಣಿ ಕಂಪನಿಯು ಚಿನ್ನ ಉತ್ಪಾದನೆ ಜೊತೆಗೆ ರಾಜ್ಯದ ವಿವಿಧೆಡೆ ಚಿನ್ನದ ನಿಕ್ಷೇಪಗಳ ಪತ್ತೆ, ಅವುಗಳ ಅಭಿವೃದ್ಧಿಯಲ್ಲೂ ತೊಡಗಿದೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ಅಜ್ಜನ ಹಳ್ಳಿಯಳ್ಳಿಯಲ್ಲಿ ತಲಾ ಒಂದು ಚಿನ್ನದ ಘಟಕ ಸ್ಧಾಪಿಸಿತ್ತು. ಹಲವು ವರ್ಷಗಳ ಚಿನ್ನದ ಅಧಿರು ತೆಗೆಯಲಾಯಿತು. ಆದರೆ, ಅಲ್ಲಿ ಸದ್ಯ ಚಿನ್ನದ ಅದಿರು ತೆಗೆಯುವುದನ್ನು ನಿಲ್ಲಿಸಿ ಪವನ (ಗಾಳಿ) ಯಂತ್ರಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಮತ್ತೊಂದೆಡೆ ದೇವದುರ್ಗ ತಾಲೂಕಿನ ಊಟಿ, ಸಿರವಾರ ತಾಲೂಕಿನ ಹೀರಾಬುದ್ದಿನಿ ಗ್ರಾಮಗಳಲ್ಲಿ ಚಿನ್ನದ ಅದಿರು ತೆಗೆದು ಹಟ್ಟಿ ಚಿನ್ನದ ಗಣಿ ಘಟಕಕ್ಕೆ ರವಾನಿಸಲಾಗುತ್ತಿದೆ. ಇನ್ನು ಜುಲೈ 8 ಹಟ್ಟಿ ಚಿನ್ನದ ಗಣಿ ಕಂಪನಿ ಸಂಸ್ಧಾಪನಾ ದಿನವಾಗಿದೆ. ಗಣಿ ಅಭಿವೃದ್ದಿಯಲ್ಲಿ ಕಾರ್ಮಿಕರ ಶ್ರಮ ಪ್ರಮುಖವಾಗಿದೆ. ಆದ್ದರಿಂದ ಹಲವು ವರ್ಷಗಳಿಂದ ಚಿನ್ನದ ಉತ್ಪಾದನೆ ಹೆಚ್ಚುತ್ತಿದೆ ಹೇಳಲಾಗುತ್ತಿದೆ.

2020-21ರಲ್ಲಿ 1,115 ಕೆ.ಜಿ ಚಿನ್ನ ಉತ್ಪಾದಿಸಲಾಗಿತ್ತು. 2021-2022ರಲ್ಲಿ 1,238 ಕೆ.ಜಿ ಬಂಗಾರ ಉತ್ಪಾದಿಸಲಾಗಿತ್ತು. 2022-2023ರಲ್ಲಿ 1,411 ಕೆ.ಜಿ ಚಿನ್ನ ಉತ್ಪಾದಿಸಲಾಗಿದ್ದು, 2023-24ನೇ ಸಾಲಿನಲ್ಲಿ 1,889 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್‌ ಬಹದ್ದೂರ್ ಅವರು ತಿಳಿಸಿದ್ದಾರೆ.

English summary

How did the Hatti gold mines compony become famous?, here see exciting story,

Story first published: Sunday, July 9, 2023, 18:12 [IST]

Source link