Gruha Jyothi Scheme Online: ಗೃಹ ಜ್ಯೋತಿ ಯೋಜನೆಗೆ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್! | Griha Jyoti scheme application details of Karnataka

Karnataka

oi-Malathesha M

|

Google Oneindia Kannada News

ಬೆಂಗಳೂರು: ಕರ್ನಾಟಕದಲ್ಲಿ ‘ಗೃಹ ಜ್ಯೋತಿ’ಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಒಟ್ಟು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಗೆ ನೋಂದಾಯಿಸಿಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಜೂನ್ 18ರಿಂದ ಸರ್ಕಾರ ಗೃಹ ಜ್ಯೋತಿಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸುತ್ತಿದೆ. ಹೀಗೆ ಅರ್ಜಿ ಸ್ವೀಕರಿಸಲು ಶುರುವಾಗಿ ಕೇವಲ 10 ದಿನ ಕಳೆದಿದ್ದು, ಈವರೆಗೂ ರಿಜಿಸ್ಟರ್ ಮಾಡಿಕೊಂಡಿದ್ದು ಎಷ್ಟು ಜನ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ಭರ್ಜರಿ 5 ಗ್ಯಾರಂಟಿ ಕೊಟ್ಟು, 2023ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿತ್ತು ಕಾಂಗ್ರೆಸ್ ಪಕ್ಷ. ಈ ಪೈಕಿ ಕನ್ನಡಿಗರ ಮನೆಗಳಿಗೆ ಪ್ರತಿ ತಿಂಗಳೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ನೀಡಲಾಗಿತ್ತು. ಹೀಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 1 ತಿಂಗಳು ಕಳೆಯುವ ಒಳಗೆ ಯೋಜನೆಗೆ ಅರ್ಜಿ ಸ್ವೀಕರಿಸುತ್ತಿದೆ. ಜೂನ್ 18ರಿಂದ ಸರ್ಕಾರ ಆನ್‌ಲೈನ್ ಮೂಲಕ ಅರ್ಜಿ ಪಡೆಯುತ್ತಿದೆ. ಈ ಮೂಲಕ ರಾಜ್ಯದಲ್ಲಿ ಬರೋಬ್ಬರಿ ಮುಕ್ಕಾಲು ಕೋಟಿ ಗ್ರಾಹಕರು ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಈವರೆಗೆ ನೊಂದಾಯಿಸಿಕೊಂಡಿದ್ದಾರೆ. ಹಾಗಾದರೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ (Gruha Jyothi Scheme).

Griha Jyoti scheme application details of Karnataka

ಬರೋಬ್ಬರಿ 77 ಲಕ್ಷ ಅರ್ಜಿ ಸಲ್ಲಿಕೆ!

‘ಗೃಹ ಜ್ಯೋತಿ’ ಯೋಜನೆಗೆ ಆನ್‌ಲೈನ್ ಮೂಲಕ ಭಾರಿ ಪ್ರಮಾಣದಲ್ಲಿ ಅರ್ಜಿಗಳ ಸಾಗರ ಹರಿದು ಬರುತ್ತಿದೆ. ಹೀಗೆ ಅರ್ಜಿ ಸ್ವೀಕರಿಸಲು ಶುರುವಾಗಿ ಕೇವಲ 9 ದಿನಗಳು ಕಳೆದಿದೆ. ಆದರೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ ಮುಕ್ಕಾಲು ಕೋಟಿ ಗಡಿಯನ್ನ ದಾಟಿದೆ. ಹೀಗೆ ರಾಜ್ಯದಲ್ಲಿ 6 ವಿದ್ಯುತ್ ನಿಗಮಗಳು ವಲಯವಾರು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಭಾಗದಲ್ಲಿ ಬೆಸ್ಕಾಂ ಇದ್ದರೆ, ರಾಜ್ಯದ ವಿವಿಧ ವಿಭಾಗದಲ್ಲಿ ವಿದ್ಯುತ್ ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ 6 ವಿದ್ಯುತ್ ನಿಗಮಗಳಲ್ಲಿ ಗೃಹ ಜ್ಯೋತಿ ಯೋಜನೆ ಅಡಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗ್ತಿದೆ. ಅರ್ಜಿ ಸಲ್ಲಿಕೆ ಶುರುವಾದ ನಂತರ ಬರೋಬ್ಬರಿ 77 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ಅರ್ಜಿಗಳ ವಲಯವಾರು ಸಂಪೂರ್ಣ ಮಾಹಿತಿ

ಅಂದಹಾಗೆ ಆರಂಭದಲ್ಲಿ ಸರ್ವರ್ ಡೌನ್ ಸಮಸ್ಯೆ ಪರಿಣಾಮ ನಿಧಾನಗತಿಯಲ್ಲಿ ಸಾಗಿದ್ದ ಗೃಹ ಜ್ಯೋತಿಗೆ ವೇಗ ಸಿಕ್ಕಿದೆ. ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಲಕ್ಷ ಲಕ್ಷ ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಬುಧವಾರ ಸಂಜೆ 7 ಗಂಟೆ ವೇಳೆಗೆ ಒಟ್ಟಾರೆ 77,20,207 ಗ್ರಾಹಕರು ನೋಂದಾಯಿಸಿದ್ದಾರೆ. ಬೆಂಗಳೂರಿನ ಬೆಸ್ಕಾಂ ವಲಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬರೋಬ್ಬರಿ 31,55,367 ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗಾದ್ರೆ ಯಾವ ಯಾವ ವಲಯ ಎಷ್ಟು ಅರ್ಜಿ ಸ್ವೀಕರಿಸಿದೆ ಅನ್ನೋ ಮಾಹಿತಿ ಇಲ್ಲಿದೆ ತಿಳಿಯಿರಿ.

‘ಗೃಹ ಜ್ಯೋತಿ’ಗೆ ಎಲ್ಲೆಲ್ಲಿ ಎಷ್ಟು ಅರ್ಜಿ?

1) ಬೆಸ್ಕಾಂ – 31,55,367

2) ಸೆಸ್ಕಾಂ – 12,04,627

3) ಜೆಸ್ಕಾಂ – 8,15,968

4) ಹೆಸ್ಕಾಂ – 15,99,944

5) ಎಚ್ಆರ್‌ಇಸಿಎಸ್ – 36,906

6) ಮೆಸ್ಕಾಂ – 9,07,396

ಒಟ್ಟು – 77,20,207

‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಂದಹಾಗೆ ರಾಜ್ಯದ ಇ – ಆಡಳಿತ ಇಲಾಖೆ ಪ್ರತ್ಯೇಕವಾಗಿ ನೋಂದಣಿ ಲಿಂಕ್ ಅನ್ನು ರಾಜ್ಯದ ವಿದ್ಯುತ್ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆಗೆ ವೇಗ ದೊರೆತಿದೆ. ಗೃಹ ಜ್ಯೋತಿ ಯೋಜನೆಗೆ ಯಾವುದೇ ವಿದ್ಯುತ್ ಕಚೇರಿ, ನಾಡಕಚೇರಿ, ಕಂಪ್ಯೂಟರ್, ಲ್ಯಾಪ್‌ಟಾಪ್ & ಮೊಬೈಲ್ ಮೂಲಕ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಬಹುದು. ಇನ್ನು ನೋಂದಣಿ ಸಂಪೂರ್ಣ ಉಚಿತ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸಲು ಮೇಲ್ಕಂಡ ವೆಬ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ ಅಥವಾ ನಕಲಿ ವೆಬ್‌ಸೈಟ್ ಬಳಸದಂತೆ ಇಂಧನ ಇಲಾಖೆ ಸೂಚನೆ ನೀಡಿದೆ.

‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸುವ ಗ್ರಾಹಕರು ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೇರಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕ ಮಾತ್ರ ಪಾವತಿಸಿ ನೋಂದಾಯಿಸಲು ತಿಳಿಸಲಾಗಿದೆ. ಅಲ್ದೆ ಹೆಚ್ಚುವರಿ ಹಣಕ್ಕೆ ಯಾರಾದ್ರೂ ಬೇಡಿಕೆ ಇಟ್ಟಲ್ಲಿ, ಗ್ರಾಹಕರು ಕೂಡಲೇ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ ಮಾಹಿತಿ ನೀಡಬಹುದು. ಅಂತಹ ಸಮಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ‘ಗೃಹ ಜ್ಯೋತಿ’ ನಿಯಮದ ಪ್ರಕಾರ ಯೋಜನೆ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಉಪಯೋಗಿಸಿದಲ್ಲಿ ಯೋಜನೆ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

English summary

Griha Jyoti scheme application details of Karnataka.

Story first published: Wednesday, June 28, 2023, 21:49 [IST]

Source link