Gruha Jyothi Scheme Apply Online: ಕೇವಲ 5 ನಿಮಿಷದಲ್ಲಿ ಗೃಹ ಜ್ಯೋತಿ ಯೋಜನೆಗೆ ನೋಂದಣಿ! | Gruha Jyothi Scheme Apply Online: Register for 200 Units Free Electricity in 5 Mins

Karnataka

oi-Naveen Kumar N

|

Google Oneindia Kannada News

Gruha Jyothi Scheme Apply Online: ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುಬ ಗೃಹ ಜ್ಯೋತಿ ಯೋಜನೆಗೆ ಆನ್‌ಲೈನ್‌ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಜೂನ್ 18ರಂದು ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 21ರಂದು ಸಂಜೆ 7 ಗಂಟೆಯ ವೇಳೆಗೆ 12.51 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಗ್ರಾಹಕರು ನೋಂದಣಿ ಮಾಡಿಕೊಳ್ಳಲು ಭಾರಿ ಸಮಸ್ಯೆ ಉಂಟಾಗಿತ್ತು, ಸೇವಾಸಿಂಧು ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು, ಆದರೆ ಭಾರಿ ಸಂಖ್ಯೆಯ ಗ್ರಾಹಕರು ನೋಂದಣಿ ಮಾಡಿಕೊಳ್ಳಲು ಮುಂದಾದ ಕಾರಣ ಸರ್ವರ್ ಡೌನ್ ಸಮಸ್ಯೆ ಉಂಟಾಗಿತ್ತು.

ಗೃಹ ಜ್ಯೋತಿ: ಮೂರು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ನೋಂದಣಿ ಗೃಹ ಜ್ಯೋತಿ: ಮೂರು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ನೋಂದಣಿ

ನಂತರ ಸರ್ವರ್ ಸಮಸ್ಯೆಯನ್ನು ಸರಿ ಮಾಡಲು ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸದ್ಯ ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಳ್ಳಲು ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ನೋಂದಣಿ ಮಾಡುವ ವಿಧಾನ ಕೂಡ ಮೊದಲಿಗಿಂತ ತುಂಬಾ ಸರಳವಾಗಿದೆ.

ಈ ಮೊದಲು ಆಧಾರ್ ಕಾರ್ಡ್ ಮಾಹಿತಿ ಪಡೆಯಲು, ಗ್ರಾಹಕರ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿ ಅದನ್ನು ನಮೂದಿಸಲು ಕೇಳಲಾಗುತ್ತಿತ್ತು, ನಂತರ ಸಂಪರ್ಕದ ಅನುಕೂಲಕ್ಕೆ ಮೊಬೈಲ್ ಸಂಖ್ಯೆ ನಮೂದಿಸಿದರೆ ಅದಕ್ಕೆ ಮತ್ತೊಂದು ಒಟಿಪಿ ಬರುತ್ತಿತ್ತು ಅದನ್ನು ನಮೂದಿಸಿದರೆ ಮಾತ್ರ ನಿಮ್ಮ ಅರ್ಜಿ ಸ್ವೀಕೃತವಾಗುತ್ತಿತ್ತು.

Gruha Jyothi Scheme Apply Online

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

https://sevasindhugs.karnataka.gov.in/ ಈ ವೆಬ್‌ಸೈಟ್‌ಗೆ ಮೊದಲು ಭೇಟಿ ನೀಡಿ ಅಲ್ಲಿ ಕಾಣಿಸುವ ಗೃಹಜ್ಯೋತಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಹೊಸ ವಿಂಡೋ ತೆರೆಯಲಿದೆ.

Gruha Jyothi Scheme Apply Online

ಹೊಸ ವಿಂಡೋದಲ್ಲಿ ಕ್ಯಾಪ್ಚಾ ವನ್ನು ನಮೂದಿಸಿ, ಒಪ್ಪಿಗೆ (Agree) ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ, ಹೊಸ ವಿಂಡೋ ತೆರೆಯುತ್ತದೆ. ಹೊಸ ವಿಂಡೋದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ Get Details ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Gruha Jyothi Scheme Apply Online

ನಂತರ ಆಧಾರ್ ಮಾಹಿತಿ ಒಳಗೊಂಡ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ಗ್ರಾಹಕರ ಐಡಿಯನ್ನು ನಮೂದಿಸಿ, ನಂತರ ಬಾಡಿಗೆಯವರ, ಮಾಲೀಕರ ಎನ್ನುವುದನ್ನು ಆಯ್ಕೆ ಮಾಡಿ, ಸಂಪರ್ಕ ಸಂಖ್ಯೆಯನ್ನು ನಮೂದಿಸಿದರೆ, ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿ, ಕೆಳಗಡೆ ನೀಡಿರುವ ‘ಕ್ಯಾಪ್ಚಾ’ವನ್ನು ನಮೂದಿಸಿ Submitt ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅರ್ಜಿ ಸ್ವೀಕರಿಸುವ ಮಾಹಿತಿ ಬರುತ್ತದೆ. ಅದನ್ನು ಡೌನ್‌ ಲೋಡ್ ಅಥವಾ ಪ್ರಿಂಟ್‌ಔಟ್ ತೆಗೆದು ಇಟ್ಟುಕೊಳ್ಳಿ.

Gruha Jyothi Scheme Apply Online

ನಿಮ್ಮ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮೂಲಕ ನೀವೇ ನೋಂದಣಿ ಮಾಡಿಕೊಳ್ಳಬಹುದು ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡ ಅರ್ಜಿ ನೋಂದಣಿ ನಡೆಯುತ್ತಿದೆ.

ವಿದ್ಯುತ್ ಕಚೇರಿಗಳಲ್ಲಿ ಕೂಡ ಸಮಸ್ಯೆ ಇಲ್ಲದೆ ಅರ್ಜಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಅರ್ಜಿ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ, ಗ್ರಾಹಕರು ಆತಂಕಕ್ಕೆ ಒಳಗಾಗದೆ ಅರ್ಜಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

English summary

Applying for Gruha Jyothi will now be easier, despite the numerous challenges faced. The Karnataka government has introduced a new link for application. However, it is advised to exercise caution while making online payments for electricity bills.

Source link