Google Pay UPI Lite: ಭಾರತದಲ್ಲಿ UPI ಲೈಟ್ ಆರಂಭ: ಆಕ್ಟಿವ್ ಮಾಡಿಕೊಳ್ಳುವುದು, ಬಳಕೆ, ಲಿಮಿಟ್ ಬಗ್ಗೆ ತಿಳಿಯಿರಿ | Google Pay Has Launch UPI Lite In India, How To Activate, Know More Information Here

India

oi-Shankrappa Parangi

|

Google Oneindia Kannada News

ನವದೆಹಲಿ, ಜುಲೈ 13: ಅತ್ಯಧಿಕ ಬಳಕೆದಾರರನ್ನು ಹೊಂದಿರುವ ಡಿಜಿಟಲ್ ರೂಪದ ಹಣ ಪಾವತಿ ವೇದಿಕೆಯಾಗಿರುವ ಗೂಗಲ್ ಪೇ (Googl Pay) ಗುರುವಾರ ಒಂದೇ ಕ್ಲಿಕ್ಕಿನಲ್ಲಿ ಯುಪಿಐ ಇಲ್ಲದೇ ಸರಳವಾಗಿ ಹಣ ವಹೀವಾಟಿಗೆ ಅವಕಾಶ ಮಾಡಿಕೊಡುವ ಗೂಗಲ್ ಪೇ ಲೈಟ್ (Googl Pay Lite) ಅನ್ನು ಪ್ರಾರಂಭಿಸಿದೆ. ಬಳಕೆದಾರರು ಈ ಜಿಪೆ ಲೈಟ್ ಬಳಕೆ, ಹಣದ ಮಿತಿ, ಸಕ್ರಿಯೆ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಇಲ್ಲಿ ತಿಳಿಯಿರಿ.

ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲದೇ ವೇಗವಾಗಿ ಮತ್ತು ಒಂದು ಕ್ಲಿಕ್ ನಲ್ಲಿ ವಹೀವಾಟು ಮಾಡಲು ಬಳಕೆದಾರರಿಗೆ ಗೂಗಲ್ ಪೇ ಅನುಕೂಲ ಮಾಡಿಕೊಡುತ್ತಿದೆ. LITE ಖಾತೆಯು ಬಳಕೆದಾರರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ. ಆದರೆ ವಿತರಿಸುವ ಬ್ಯಾಂಕ್‌ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೈಜ ಸಮಯದಲ್ಲಿ ಅವಲಂಬಿಸಿರುವುದಿಲ್ಲ ಎಂದು ಕಂಪನಿ ತಿಳಿಸಿದೆ.

Google Pay Has Launch UPI Lite

ಗ್ರಾಹಕರು ಗೂಗಲ್ ಪೇ UPI LITE ಖಾತೆಗೆ ದಿನಕ್ಕೆ ಎರಡು ಬಾರಿ ಹಣ ಜಮೆ ಮಾಡಬಹುದು. ಒಂದು ಭಾರಿಗೆ ರೂ.2,000 ನಂತರ ಎರಡು ಬಾರಿ ಹಣ ಹಾಕಬಹುದು.ನಿತ್ಯ ಒಟ್ಟು ನಾಲ್ಕು 4000 ರೂಪಾಯಿ ಮಿತಿ ಇರಲಿದೆ. ಯುಪಿಐ ಪಿನ್ ಹಾಕದೇ 200 ರೂ.ವರೆಗೆ ತ್ವರಿತ ವಹಿವಾಟಿಗೂ ಲೈಟ್ ಅವಕಾಶ ಕಲ್ಪಿಸುತ್ತದೆ.

ಜನರು ಪದೇ ಪದೇ ಹಣ ಪಾವತಿ ಮಾಡಲು ಬಯಸುವರಿಗೆ ಈ ಗೂಗಲ್ ಪೇನ UPI ಲೈಟ್ ಉತ್ತಮ ಆಯ್ಕೆ ಆಗಿದೆ. ಲೈಟ್ ಬಳಕೆದಾರರು ಯಾವುದೇ ಸಮಯದಲ್ಲಿ ತಮ್ಮ ಖಾತೆಯನ್ನು ಕ್ಲೋಸ್ ಮಾಡಬಹುದಾಗಿದೆ. ಇಲ್ಲವೇ ತಮ್ಮ ಲೈಟ್ ಖಾತೆಯಿಂದ ತಮ್ಮ ಬ್ಯಾಂಕ್ ಖಾತೆಗೆ ಒಂದೇ ಕ್ಲಿಕ್ಕಿನಲ್ಲಿ ಮತ್ತು ಯಾವುದೇ ಶುಲ್ಕವಿಲ್ಲದ ಹಣ ವರ್ಗಾವಣೆ ಮಾಡುವಷ್ಟು ಲೈಟ್ ಗ್ರಾಹಕ ಸ್ನೇಹಿ ಆಗಿದೆ.

ಆಕ್ಟಿವ್ ಮಾಡಿಕೊಳ್ಳುವುದು ಹೇಗೆ?

ನೀವು ಹಳೇದ ಗೂಗಲ್ ಪೇ ಆಪ್ ಬಳಸುತ್ತಿದ್ದರೆ, ಮೊದಲು ಪ್ಲೇಸ್ಟೋರ್‌ಗೆ ಹೋಗಿ ಅಪ್‌ಡೇಟ್ ಮಾಡಿಕೊಳ್ಳಿ. ಇನ್ನೂ ಹೊಸ ಬಳಕೆದಾರರು ಪ್ಲೇಸ್ಟೋರ್ ನಲ್ಲಿ ಉಚಿತವಾಗಿ ಡೌನ್‌ ಲೋಡ್ ಮಾಡಿಕೊಳ್ಳಬಹುದು.

Google Pay Has Launch UPI Lite

ಈಗಾಗಲೇ ನೀವು ಈ ಗೂಗಲ್ ಪೇ ಬಳಕೆದಾರರು ಆಗಿದ್ದರೇ ನೀವು ಗೂಗಲ್ ಪೇ ಅಪ್ಲಿಕೇಷನ್‌ಗೆ ಹೋಗಿ ಮೇಲೆ ಕಾಣುವ ನಿಮ್ಮ ಪ್ರೋಫೈಲ್ ಮೇಲೆ ಕ್ಲಿಕ್ ಮಾಡಿ. ನಂತರ ಕಾಣುವ ಗೂಗಲ್ ಪೇ ಲೈಟ್ ಮೇಲೆ ಕ್ಲಿಕ್ ಮಾಡಿ ಕಂಟಿನ್ಯೂ ಕೊಡಿ. ಹೀಗೆ ಮಾಡುವ ಮೂಲಕ ನೀವು ಹೊಸದಾಗಿ ಆರಂಭವಾದ ಗೂಗಲ್ ಪೇ ಲೈಟ್ ಅನ್ನು ಬಳಕೆ ಮಾಡಬಹುದಾಗಿದೆ.

ಕ್ಯಾಶ್ ಬ್ಯಾಕ್, ವಿಶಿಷ್ಟ ಕೊಡುಗೆಗಳು (ಸ್ಕ್ರಾಚ್ ಕಾರ್ಡ್) ದೇಶದಲ್ಲಿ ಡಿಜಿಟಲ್ ಪಾವತಿಗಳ ಬಳಕೆಗಳನ್ನು ಹೆಚ್ಚಿಸಿವೆ.

Telangana: ತಂಪು ಪಾನೀಯ, ಭಜ್ಜಿಗಾಗಿ ಆಂಬುಲೆನ್ಸ್ ಸೈರನ್-ಲೈಟ್ ಹಾಕಿ ಸಿಗ್ನಲ್ ದಾಟಿದ ಭೂಪTelangana: ತಂಪು ಪಾನೀಯ, ಭಜ್ಜಿಗಾಗಿ ಆಂಬುಲೆನ್ಸ್ ಸೈರನ್-ಲೈಟ್ ಹಾಕಿ ಸಿಗ್ನಲ್ ದಾಟಿದ ಭೂಪ

ಸದ್ಯ UPI LITE ಡಿಜಿಟಲ್ ವೇದಿಕೆಯಲ್ಲಿ ಬಳಕೆದಾರರಿಗೆ ಅನುಕೂಲಕರ, ಕಾಂಪ್ಯಾಕ್ಟ್ ಮತ್ತು ಸೂಪರ್‌ಫಾಸ್ಟ್ ಪಾವತಿಗಳ ಅನುಭವ ಒದಗಿಸಲಿದೆ. ಸಣ್ಣ ಸಣ್ಣ ವಹೀವಾಟುಗಳನ್ನು ನೀವು ತಕ್ಷಣವೇ ಮಾಡಬಹುದು.

ಯುಪಿಐ ವಹೀವಾಟುಗಳನ್ನು ಸುಲಭಗೊಳಿಸಲು ಯುಪಿಐ ಲೈಟ್‌ ವೈಶಿಷ್ಟ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆಪ್ಟಂಬರ್ 2022ರಲ್ಲಿ ಆರಂಭಿಸಿತು. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾವು ಸಕ್ರಿಯಗೊಳಿಸಿದೆ. ಯುಪಿಐ ಲೈಟ್‌ ಅನ್ನು ಬೆಂಬಲಿಸುತ್ತಿರುವ ಬ್ಯಾಂಕುಗಳು ಭವಿಷ್ಯದಲ್ಲಿ ಈ ವ್ಯವಸ್ಥೆಯನ್ನು ಅನುಸರಿಸಲಿವೆ ಎಂದು ವರದಿ ಆಗಿದೆ.

English summary

Google Pay has launch UPI Lite in India, how to activate, know more information here.

Story first published: Thursday, July 13, 2023, 18:36 [IST]

Source link