Good News: ಕೈಲಾಸ ಪರ್ವತಕ್ಕೆ ಭೇಟಿ ನೀಡಲು ಟಿಬೆಟ್‌ಗೆ ಹೋಗುವ ಅಗತ್ಯವಿಲ್ಲ, ಭಾರತದಲ್ಲಿದೆ ವ್ಯೂ ಪಾಯಿಂಟ್ | Uttarakhand: Mount kailash view point survey pithoragarh lipulekh hills

India

oi-Sunitha B

|

Google Oneindia Kannada News

ನೀವೂ ಮುಂದಿನ ಕೆಲವು ವರ್ಷಗಳಲ್ಲಿ ಕೈಲಾಸ ಪರ್ವತಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ. ಈಗ ನೀವು ಶಿವನ ‘ಘರ್’ ದರ್ಶನಕ್ಕೆ ಟಿಬೆಟ್‌ಗೆ ಹೋಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ಕೈಲಾಸ ಪರ್ವತವು ಸ್ಪಷ್ಟವಾಗಿ ಭಾರತದಲ್ಲೇ ಗೋಚರಿಸುತ್ತದೆ.

ಹೌದು.. ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಕೈಲಾಸ ಪರ್ವತ ವ್ಯೂ ಪಾಯಿಂಟ್ ಅನ್ನು ಕಂಡುಹಿಡಿಯಲಾಗಿದೆ.

Uttarakhand: Mount kailash view point survey pithoragarh lipulekh hills

ವಿಶೇಷವೆಂದರೆ ಈ ಮಾರ್ಗವನ್ನು ಸ್ಥಳೀಯರು ಕಂಡುಹಿಡಿದಿದ್ದಾರೆ. ಅವರ ಪ್ರಕಾರ, ಲಿಪುಲೇಖ್ ಬೆಟ್ಟಗಳಿಂದ ಕೈಲಾಸ ಪರ್ವತವು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ವ್ಯೂ ಪಾಯಿಂಟ್ ತಲುಪುವುದು ಅಷ್ಟು ಸುಲಭವಲ್ಲ. ಈ ವ್ಯೂ ಪಾಯಿಂಟ್ 18 ಸಾವಿರ ಅಡಿ ಎತ್ತರದಲ್ಲಿದೆ. ಆ ಮಾರ್ಗ ತುಂಬಾ ಕಷ್ಟಕರವಾಗಿದೆ.

ಮುಡುಕುತೊರೆ ಭಕ್ತರಿಂದ ಯುಗಾದಿ ಹಬ್ಬಕ್ಕೆ ಶ್ರೀಶೈಲ ಪರ್ವತ ಪರಿಷೆ! ಮುಡುಕುತೊರೆ ಭಕ್ತರಿಂದ ಯುಗಾದಿ ಹಬ್ಬಕ್ಕೆ ಶ್ರೀಶೈಲ ಪರ್ವತ ಪರಿಷೆ!

ವ್ಯೂ ಪಾಯಿಂಟ್ ಕುರಿತು ಸ್ಥಳೀಯರು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇತ್ತೀಚೆಗೆ ತಂಡವೊಂದು ಅಲ್ಲಿಗೆ ತೆರಳಿ ಸಮೀಕ್ಷೆ ನಡೆಸಿತ್ತು. ಅವರು ಸಮೀಕ್ಷೆಯ ವರದಿಯನ್ನು ಪ್ರವಾಸೋದ್ಯಮ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಹೀಗಾಗಿ ಶೀಘ್ರವೇ ಅಲ್ಲಿಗೆ ತಲುಪುವ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೇ ಅಲ್ಲಿ ಜನರಿಗೆ ತಂಗಲು ವ್ಯವಸ್ಥೆಯೂ ಇರುತ್ತದೆ.

ಒಟ್ಟಾರೆಯಾಗಿ, ಆಡಳಿತವು ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಇದರಿಂದ ಜನರು ಆರಾಮವಾಗಿ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಬಹುದು. ಸಮೀಕ್ಷಾ ತಂಡದ ಭಾಗವಾಗಿದ್ದ ಕೃತಿ ಚಂದ್ ಅವರ ಪ್ರಕಾರ, ಪರ್ವತವು ಸ್ಪಷ್ಟವಾಗಿ ಗೋಚರಿಸುವ ಸ್ಥಳವು ನಾಭಿಧಾಂಗ್ ಮೇಲೆ 2 ಕಿ.ಮೀ. ದೂರದಲ್ಲಿದೆ.

Uttarakhand: Mount kailash view point survey pithoragarh lipulekh hills

ಈ ವಿಶೇಷ ಸ್ಥಳವನ್ನು ತಲುಪಲು, ಮೊದಲು ಧಾರ್ಚುಲಾ ಮತ್ತು ಬುಧಿ ಮೂಲಕ ರಸ್ತೆಯ ಮೂಲಕ ನಾಭಿಧಾಂಗ್ ತಲುಪಬೇಕು. ಇದಾದ ನಂತರ ಎರಡು ಕಿಮೀ ಹತ್ತಿದ ನಂತರ ವ್ಯೂ ಪಾಯಿಂಟ್ ಸಿಗುತ್ತದೆ. ಈ ಆರೋಹಣವು ತುಂಬಾ ಕಷ್ಟಕರವೆಂದು ಪರಿಗಣಿಸಲ್ಪಟ್ಟಿದ್ದರೂ, ಅದರ ಮೇಲೆ ಚಾರಣ ಮಾರ್ಗವನ್ನು ಭವಿಷ್ಯದಲ್ಲಿ ಸಿದ್ಧಪಡಿಸಬಹುದು.

ಇನ್ಮುಂದೆ 2 ಲಕ್ಷ ಖರ್ಚು ಆಗದು..

ಪ್ರಸ್ತುತ, ಲಿಪುಲೇಖ್ ಪಾಸ್ (ಉತ್ತರಾಖಂಡ), ನಾಥು ಪಾಸ್ (ಸಿಕ್ಕಿಂ) ಮತ್ತು ನೇಪಾಳದ ಕಠ್ಮಂಡುವಿನಿಂದ ಕೈಲಾಸ ಮಾನಸ ಸರೋವರಕ್ಕೆ ಮೂರು ಮಾರ್ಗಗಳು ಪ್ರಯಾಣಿಸುತ್ತವೆ. ಇದರಲ್ಲಿ ಒಬ್ಬರಿಗೆ ಕನಿಷ್ಠ ಎರಡು ಲಕ್ಷ ರೂ. ಪ್ರಯಾಣ ದರವಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ಈ ಯಾತ್ರೆ ಕೈಗೊಳ್ಳಲು ಸಾಧ್ಯವಿಲ್ಲ. ಈ ಹೊಸ ಮಾರ್ಗದ ಮೂಲಕ, ಕಡಿಮೆ ವೆಚ್ಚದಲ್ಲಿ ಭಗವಾನ್ ಶಿವನ ‘ಘರ್’ ಅನ್ನು ಭೇಟಿ ಮಾಡಬಹುದು.

ಕೈಲಾಸ ಪರ್ವತದ ಬಗ್ಗೆ-

ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ, ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ, ಬೌದ್ಧ, ಜೈನ ಮತ್ತು ಬಾನ್ ಧರ್ಮೀಯರಿಗೆ ಪವಿತ್ರ ತಾಣವಾಗಿದೆ.

ಟಿಬೆಟ್ ನೆಲದಲ್ಲಿ ಗಗನದೆತ್ತರಕ್ಕೆ ನಿಂತಿರುವ ಕೈಲಾಸ ಪರ್ವತ ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿದ್ದು, ಇದನ್ನೇರುವುದು ದುಸ್ತರವೇ ಸರಿ. ಜಗತ್ತಿನ ಅತಿ ಪವಿತ್ರವಾದ ಹಾಗೂ ಅಷ್ಟೇ ನಿಗೂಢವಾದ ಪರ್ವತ ಇದಾಗಿದೆ. ಕೈಲಾಸ ಪರ್ವತದಲ್ಲಿದೆ ಎರಡು ಮುಖ್ಯ ಸರೋವರಗಳಿವೆ. ಮೊದಲನೆಯದು, ಮಾನಸ ಸರೋವರ ವಿಶ್ವದ ಶುದ್ಧ ನೀರಿನ ಅತ್ಯಂತ ಎತ್ತರದ ಸರೋವರಗಳಲ್ಲಿ ಒಂದಾಗಿದೆ.

ಎರಡನೆಯದಾಗಿ, ರಾಕ್ಷ ಸ ಎಂಬ ಹೆಸರಿನ ಸರೋವರವು ವಿಶ್ವದ ಅತಿ ಎತ್ತರದ ಉಪ್ಪುನೀರಿನ ಸರೋವರಗಳಲ್ಲಿ ಒಂದಾಗಿದೆ ಮತ್ತು ಅದರ ಆಕಾರವು ಚಂದ್ರನಂತೆಯೇ ಇರುತ್ತದೆ. ಈ ಎರಡೂ ಸರೋವರಗಳು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳಿಗೆ ಸಂಬಂಧಿಸಿರುವ ಸೌರ ಮತ್ತು ಚಂದ್ರನ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ದಕ್ಷಿಣದಿಂದ ನೋಡಿದಾಗ ಸ್ವಸ್ತಿಕ ಚಿಹ್ನೆಯನ್ನು ವಾಸ್ತವವಾಗಿ ಕಾಣಬಹುದು. ಈ ಸರೋವರಗಳು ಸ್ವಾಭಾವಿಕವಾಗಿ ರೂಪುಗೊಂಡಿವೆಯಾ ಅಥವಾ ನಿರ್ಮಿಸಲಾಗಿದೆಯಾ ಎಂಬುದು ಇನ್ನೂ ನಿಗೂಢವಾಗಿದೆ.

ಕೈಲಾಸಪರ್ವತವನ್ನು ಏರಲು ಪ್ರಯತ್ನಪಟ್ಟ ಎಷ್ಟೋ ಪರ್ವತರೋಹಿಗಳು ಕಾಣೆಯಾಗಿದ್ದಾರೆ ಹಲವರು ಮೃತಪಟ್ಟಿದ್ದಾರೆ. ಆದ್ದರಿಂದ ಚೀನಾ ಸರ್ಕಾರವು ಕೈಲಾಸಪರ್ವತಕ್ಕೆ ನಿರ್ಬಂಧವನ್ನು ಏರಿದೆ.

English summary

No need to go to Tibet to visit Mount Kailash, its view point is in India.

Story first published: Friday, June 30, 2023, 16:35 [IST]

Source link