Travel
oi-Madhusudhan KR
ಮುಂಬೈ, ಜೂನ್, 26: ಭಾರತೀಯ ರೈಲ್ವೆಯು ಪ್ರತಿ ಹಬ್ಬಗಳ ಸಂದರ್ಭದಲ್ಲೂ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಅದೇ ರೀತಿ ಸೆಪ್ಟೆಂಬರ್ 18ರಿಂದ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ 156 ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಹಾಗಾದರೆ ಈ ರೈಲುಗಳ ಮಾರ್ಗ, ಆರಂಭವಾಗುವ ದಿನಾಂಕ ಮತ್ತು ಸಮಯದ ವಿವರವನ್ನು ಇಲ್ಲಿ ತಿಳಿಯಿರಿ.
ಸೆಪ್ಟೆಂಬರ್ ತಿಂಗಳಿನಲ್ಲಿ ಗಣಪತಿ ಹಬ್ಬದ ದೃಷ್ಟಿಯಿಂದ ಭಾರತೀಯ ರೈಲ್ವೆಯು 156 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ನೀವು ಜೂನ್ 27ರಿಂದಲೇ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.
01172 ಸಂಖ್ಯೆಯ ರೈಲು ಸಂಚಾರ ಮಾರ್ಗಗಳು
ರೈಲು ಸಂಖ್ಯೆ 01172 ಸಾವಂತವಾಡಿ-ಮುಂಬೈ ಮಾರ್ಗವಾಗಿದೆ ಸಂಚಾರ ಮಾಡಲಿದೆ. ಇದು ಸೆಪ್ಟೆಂಬರ್ 13ರಿಂದ ಅಕ್ಟೋಬರ್ 2ರವರೆಗೆ (20 ಟ್ರಿಪ್‌ಗಳು) ಪ್ರತಿದಿನ ಮಧ್ಯಾಹ್ನ 3:10ಕ್ಕೆ ಸಾವಂತವಾಡಿ ಮಾರ್ಗವಾಗಿದೆ ಹೊರಡಲಿದೆ. ಮತ್ತು ಮರುದಿನ 2:35ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮೂಲಕ ಮುಂಬೈ ತಲುಪಲಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಈ ರೈಲು ದಾದರ್, ಥಾಣೆ, ಪನ್ವೇಲ್, ಮಂಗಾಂವ್, ವೀರ್, ಖೇಡ್, ಚಿಪ್ಲುನ್, ಸವಾರ್ದಾ, ಅರಾವಳಿ ರಸ್ತೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅದಾವಲಿ, ವಿಲವಾಡೆ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ನಂದಗಾಂವ್ ರಸ್ತೆ, ಕಂಕಾವಲಿ, ಸಿಂಧುದುರ್ಗ ಮತ್ತು ಕುಡಾಲ್‌ನಲ್ಲಿ ನಿಲುಗಡೆಯಾಗಲಿದೆ.
01167, 01168 ಸಂಖ್ಯೆಯ ರೈಲುಗಳ ಸಂಚಾರ
ರೈಲು ಸಂಖ್ಯೆ 01167 ಸೆಪ್ಟೆಂಬರ್ 13, 14, 19, 20, 21, 24, 25, 26, 27, 28 ಮತ್ತು ಅಕ್ಟೋಬರ್ 1, 2 ರಂದು (12 ಟ್ರಿಪ್‌ಗಳು) ಬೆಳಗ್ಗೆ 10:15ಕ್ಕೆ LTTಯಿಂದ ನಿರ್ಗಮಿಸುತ್ತದೆ. ಮರುದಿನ 09:30ಕ್ಕೆ ಕುಡಾಲ್‌ಗೆ ತಲುಪಲಿದೆ. ಹಾಗಯೆ ರೈಲು ಸಂಖ್ಯೆ 01168 ಸೆಪ್ಟೆಂಬರ್ 14, 15, 20, 21, 22, 25, 26, 27, 28, 29 ಮತ್ತು ಅಕ್ಟೋಬರ್ 2 ಮತ್ತು 3ರಂದು (12 ಟ್ರಿಪ್‌ಗಳು) ಬೆಳಗ್ಗೆ 10:30ಕ್ಕೆ ಕುಡಾಲ್‌ನಿಂದ ಹೊರಡಲಿದ್ದು, ಇದು ಅದೇ ದಿನ ರಾತ್ರಿ 09:55ಕ್ಕೆ LTTಗೆ ಆಗಮಿಸಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಈ ರೈಲುಗಳು ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಳಿ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ಕಂಕಾವಲಿ ಮತ್ತು ಸಿಂಧುದುರ್ಗದಲ್ಲಿ ನಿಲುಗಡೆ ಆಗಲಿದೆ ಎಂದು ತಿಳಿಸಿದೆ. ಪುಣೆ-ಕರ್ಮಾಲಿ/ಕೂಡಲ್-ಪುಣೆ ವಿಶೇಷ (6 ಸೇವೆಗಳು)
01169, 01170 ಸಂಖ್ಯೆಯ ರೈಲುಗಳ ಸಂಚಾರ ಮಾರ್ಗ
ರೈಲು ಸಂಖ್ಯೆ 01169 ಸೆಪ್ಟೆಂಬರ್ 15, 22, ಮತ್ತು 29ರಂದು ಸಂಜೆ 6:45ಕ್ಕೆ ಪುಣೆಯಿಂದ ಹೊರಡಲಿದೆ. ಇದು ಮರುದಿನ ಬೆಳಗ್ಗೆ 10 ಗಂಟೆಗೆ ಕುಡಾಲ್‌ಗೆ ಆಗಮಿಸುತ್ತದೆ. ಇನ್ನು ರೈಲು ಸಂಖ್ಯೆ 01170 ಸೆಪ್ಟೆಂಬರ್ 17, 24 ಮತ್ತು ಅಕ್ಟೋಬರ್ 1ರಂದು ಸಂಜೆ 4:05ಕ್ಕೆ ಕುಡಾಲ್‌ನಿಂದ ಹೊರಡಲಿದ್ದು, ಇದು ಮರುದಿನ ಬೆಳಗ್ಗೆ 05:50ಕ್ಕೆ ಪುಣೆಗೆ ತಲುಪಲಿದೆ.
ಈ ರೈಲು ಲೋನಾವಾಲಾ, ಪನ್ವೇಲ್, ಮಂಗಾಂವ್, ಖೇಡ್, ಚಿಪ್ಲುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಲಿ, ವಿಲವಾಡೆ, ರಾಜಾಪುರ ರಸ್ತೆ, ವೈಭವವಾಡಿ ರಸ್ತೆ, ನಂದಗಾಂವ್ ರಸ್ತೆ, ಕಂಕಾವಲಿ ಮತ್ತು ಸಿಂಧುದುರ್ಗದಲ್ಲಿ ನಿಲುಗಡೆಯಾಗಲಿದೆ. ಕರ್ಮಲಿ-ಪನ್ವೇಲ್-ಕೂಡಲ್ ವಿಶೇಷ (ಸಾಪ್ತಾಹಿಕ) 6 ಸೇವೆಗಳು.
01187, 01188 ಸಂಖ್ಯೆಯ ರೈಲುಗಳ ಸಂಚಾರ ಮಾರ್ಗ
ರೈಲು ಸಂಖ್ಯೆ 01187 ಸೆಪ್ಟೆಂಬರ್ 16, 23 ಮತ್ತು 30ರಂದು ಕರ್ಮಾಲಿಯಿಂದ (3 ಟ್ರಿಪ್‌ಗಳು) ಮಧ್ಯಾಹ್ನ 2:50ಕ್ಕೆ ಹೊರಡಲಿದೆ, ಮರುದಿನ ಮರುದಿನ 02:45ಕ್ಕೆ ಪನ್ವೆಲ್‌ಗೆ ತಲುಪಲಿದೆ. ಹಾಗೆಯೆ ರೈಲು ಸಂಖ್ಯೆ 01188 ಸೆಪ್ಟೆಂಬರ್ 17, 24 ಮತ್ತು ಅಕ್ಟೋಬರ್ 01ರಂದು (3 ಟ್ರಿಪ್‌ಗಳು) ಪನ್ವೇಲ್‌ನಿಂದ ಸಂಜೆ 5 ಗಂಟೆಗೆ ಹೊರಡಲಿದೆ. ಅದೇ ದಿನ ಮಧ್ಯಾಹ್ನ 2ಕ್ಕೆ ಕುಡಾಲ್‌ಗೆ ತಲುಪಲಿದೆ.
ಈ ರೈಲುಗಳು ಥಿವಿಮ್, ಸಾವಂತವಾಡಿ ರಸ್ತೆ, ಕುಡಾಲ್, ಸಿಂಧುದುರ್ಗ, ಕಾಕವ್ಲಿ, ನಂದಗಾಂವ್ ರಸ್ತೆ, ವೈಭವಾಡಿ ರಸ್ತೆ, ರಾಜಾಪುರ ರಸ್ತೆ, ವಿಲವಡೆ, ಅಡವಲಿ, ರತ್ನಗಿರಿ, ಸಂಗ್ಮೇಶ್ವರ ರಸ್ತೆ, ಸವರ್ದಾ, ಚಿಪ್ಲುನ್, ಖೇಡ್, ರೋಹಾ ಮತ್ತು ಮಂಗಾವ್‌ನಲ್ಲಿ ನಿಲುಗಡೆ ಆಗಲಿವೆ. ದಿವಾ-ರತ್ನಗಿರಿ MEMU ವಿಶೇಷ (ದೈನಂದಿನ) – 40 ಸೇವೆಗಳು
01151, 01152 ಸಂಖ್ಯೆಯ ರೈಲುಗಳ ಸಂಚಾರ ಮಾರ್ಗ
ರೈಲು ಸಂಖ್ಯೆ 01151 ಸೆಪ್ಟೆಂಬರ್ 13ರಿಂದ ಅಕ್ಟೋಬರ್ 02ರವರೆಗೆ (20 ಟ್ರಿಪ್‌ಗಳು) ಪ್ರತಿದಿನ ಬೆಳಗ್ಗೆ 11:50ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮುಂಬೈನಿಂದ ನಿರ್ಗಮಿಸಲಿದ್ದು, ಮರುದಿನ ಮಧ್ಯಾಹ್ನ 02:10ಕ್ಕೆ ಮಡಗಾಂವ್‌ಗೆ ತಲುಪಲಿದೆ. ಹಾಗೆಯೆ ರೈಲು ಸಂಖ್ಯೆ 01152 ಸೆಪ್ಟೆಂಬರ್ 13ರಿಂದ ಅಕ್ಟೋಬರ್ 02ರವರೆಗೆ (20 ಟ್ರಿಪ್‌ಗಳು) ಪ್ರತಿದಿನ 03:15ಕ್ಕೆ ಮಡಗಾಂವ್‌ನಿಂದ ನಿರ್ಗಮಿಸಲಿದ್ದು, ಅದೇ ದಿನ ಸಂಜೆ 05:05ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮುಂಬೈಗೆ ಆಗಮಿಸಲಿದೆ.
01153, 01154 ಸಂಖ್ಯೆಯ ರೈಲುಗಳ ಸಂಚಾರ ಮಾರ್ಗಗಳು
ರೈಲು ಸಂಖ್ಯೆ 01153 ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 02ರವರೆಗೆ (20 ಟ್ರಿಪ್‌ಗಳು) ದಿವಾದಿಂದ ಬೆಳಗ್ಗೆ 07:10ಕ್ಕೆ ನಿರ್ಗಮಿಸಲಿದ್ದು, ಅದೇ ದಿನ ಮಧ್ಯಾಹ್ನ 02:55ಕ್ಕೆ ರತ್ನಾಗಿರಿಗೆ ತಲುಪಲಿದೆ. ರೈಲು ಸಂಖ್ಯೆ 01154 ಸೆಪ್ಟೆಂಬರ್ 13ರಿಂದ ಅಕ್ಟೋಬರ್ 02ರವರೆಗೆ (20 ಟ್ರಿಪ್‌ಗಳು) ರತ್ನಗಿರಿಯಿಂದ ಮಧ್ಯಾಹ್ನ 3:40ಕ್ಕೆ ಹೊರಡಲಿದ್ದು, ಅದೇ ದಿನ ರಾತ್ರಿ 10:40ಕ್ಕೆ ದಿವಾಗೆ ಆಗಮಿಸಲಿದೆ.
ರೋಹಾ, ಮಂಗಾವ್, ವೀರ್, ಖೇಡ್, ಚಿಪ್ಲುನ್, ಸವಾರ್ದಾ, ಅರಾವಳಿ ರಸ್ತೆ ಮತ್ತು ಸಂಗಮೇಶ್ವರದಲ್ಲಿ ನಿಲುಗಡೆಯಾಗಲಿವೆ. ಮುಂಬೈ-ಮಡ್ಗಾಂವ್ ವಿಶೇಷ (ಪ್ರತಿನಿತ್ಯ) – 40 ಸೇವೆಗಳು
ಇನ್ನು ಈ ರೈಲುಗಳು ದಾದರ್, ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ವೀರ್, ಖೇಡ್, ಚಿಪ್ಲುನ್, ಸವರ್ದಾ, ಅರಾವಳಿ ರಸ್ತೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಲಿ, ವಿಲವಾಡೆ, ರಾಜಾಪುರ ರಸ್ತೆ, ವೈಭವಾಡಿ ರಸ್ತೆ, ನಂದಗಾಂವ್ ರಸ್ತೆ, ಕಂಕವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್ ಮತ್ತು ಕರ್ಮಾಲಿಯಲ್ಲಿ ನಿಲುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಜೂನ್ 27ರಿಂದಲೇ ಟಿಕೆಟ್ ಬುಕ್ಕಿಂಗ್ ಕಾರ್ಯ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.irctc.co.inಗೆ ಭೇಟಿ ನೀಡಬಹುದಾಗಿದೆ.
English summary
Ganesh Chaturthi 2023 in India: 156 special trains run for Ganesha festival, know details of routes, dates, timings, special trains announcement by Indian Railways,