Fitkari Health Benefits: ರಾಸಾಯನಿಕ ಮುಕ್ತ ನೈಸರ್ಗಿಕ ಉತ್ಪನ್ನ ಆಲಂ ಆರೋಗ್ಯ ಪ್ರಯೋಜನಗಳು ಇಲ್ಲಿವೆ | Fitkari: Ayurvedic Health Benefits of Using Alum Stone or Fitkari in Daily Life

Features

oi-Mamatha M

|

Google Oneindia Kannada News

ಯಾರಿಗೆ ತಾನೇ ಆರೋಗ್ಯ ಮತ್ತು ಸೌಂದರ್ಯದ ಅಗತ್ಯಗಳಿಗಾಗಿ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸಲು ಆಸೆಯಿರುತ್ತದೆ ಅಲ್ಲವೇ? ರಾಸಾಯನಿಕ ಮುಕ್ತ ಮತ್ತು ನೈಸರ್ಗಿಕ ಉತ್ಪನ್ನಗಳಿಗಾಗಿ ಎಲ್ಲರೂ ಇಷ್ಟಪಡುತ್ತಾರೆ. ಇಂತಹದ್ದೆ ಒಂದು ಉತ್ಪನ್ನ ಆಲಂ ಕಲ್ಲು. ಹೌದು ಫಿಟ್ಕರಿ, ಪಟಿಕ, ಪಡಿಖಾರಂ, ಶಿನಾಕಾರಮ್, ಫಟ್ಕರಿ ಎಂದು ವಿವಿಧ ಭಾಷೆಗಳಲ್ಲಿ ಕರೆಸಿಕೊಳ್ಳುವ ಇದು, ನೈಸರ್ಗಿಕ ಆರೋಗ್ಯ ಮತ್ತು ಸೌಂದರ್ಯ ವರ್ಧಕ.

ಇದು ನಿಮ್ಮ ಬಾಯಿಯ ನೈರ್ಮಲ್ಯವನ್ನು ಕಾಪಾಡುವುದರಿಂದ ಹಿಡಿದು ದೇಹದ ವಾಸನೆಯನ್ನು ಕಡಿಮೆ ಮಾಡುವವರೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದೇ ಕಾರಣಕ್ಕೆ ಆಯುರ್ವೇದ ಔಷಧದಲ್ಲಿ ಈ ಬಹುಮುಖ ವಸ್ತುವನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಆಲಂ ಎಂಬುದು ಶುದ್ಧ ಮತ್ತು ಅಶುದ್ಧ ರೂಪಗಳಲ್ಲಿ ಪ್ರಕೃತಿಯಲ್ಲಿ ಕಂಡುಬರುವ ಖನಿಜವಾಗಿದೆ.

Amazing Health Benefits of Fitkari or Alum Stone

ಇದು ಖನಿಜ ಉಪ್ಪು. ನೇಪಾಳ, ಬಿಹಾರ, ಪಂಜಾಬ್ ಮತ್ತು ಕಥಿಯಾವಾರ್ ಪ್ರದೇಶದಲ್ಲಿ ಕಂಡುಬರುವ ಮಣ್ಣಿನ ಅದಿರಿನಿಂದ ಇದನ್ನು ಪಡೆಯಲಾಗುತ್ತದೆ. ಇದು ಕಡು ಬಣ್ಣರಹಿತ, ಸ್ಪಷ್ಟ, ವಾಸನೆಯಿಲ್ಲದ, ಸ್ಫಟಿಕದ ದ್ರವ್ಯರಾಶಿ ಅಥವಾ ಸಿಹಿಯಾದ ಸಂಕೋಚಕ ಪರಿಮಳವನ್ನು ಹೊಂದಿರುವ ಹರಳಿನ ಪುಡಿಯಾಗಿದೆ. ಆಲಮ್ ಪೊಟ್ಯಾಸಿಯಮ್, ಅಲ್ಯೂಮಿನಿಯಂ, ಹೈಡ್ರೋಜನ್, ಸಲ್ಫರ್ ಮತ್ತು ಆಮ್ಲಜನಕದಿಂದ ಕೂಡಿದೆ. ಇದು ಈಜಿಪ್ಟ್, ಇಟಲಿ, ಇಂಗ್ಲೆಂಡ್, ಜರ್ಮನಿ ಮತ್ತು ಭಾರತದಲ್ಲಿ ಕಂಡುಬರುತ್ತದೆ.

ಆಲಂ ಕಲ್ಲನ್ನು ಬಿಸಿಮಾಡಿದಾಗ, ಇದು ಸುಮಾರು 200 ಡಿಗ್ರಿಗಳಲ್ಲಿ ಕರಗುತ್ತದೆ. ಇದು ಅನೇಕ ಔಷಧೀಯ, ಸೌಂದರ್ಯವರ್ಧಕ ಮತ್ತು ಆಹಾರ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಇದು ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ. ಬಿಳಿ, ಹಸಿರು, ಹಳದಿ ಮತ್ತು ಕೆಂಪು. ಬಿಳಿ ಬಣ್ಣವನ್ನು ಫಿಟ್ಕಾರಿ ಎಂದು ಕರೆಯಲಾಗುತ್ತದೆ. ಹಸಿರು ಬಣ್ಣವನ್ನು ಹೀರಾ ಕಾಸೀಸ್ ಎಂದು ಕರೆಯಲಾಗುತ್ತದೆ. ಹಳದಿ ಬಣ್ಣವನ್ನು ಕಾಸೀಸ್ ಎಂದು ಕರೆಯಲಾಗುತ್ತದೆ ಮತ್ತು ಕೆಂಪು ಬಣ್ಣವನ್ನು ಸುರ್ಖ್ ಫಿಟ್ಕಾರಿ ಎಂದು ಕರೆಯಲಾಗುತ್ತದೆ. ಯುನಾನಿ ವೈದ್ಯರ ಪ್ರಕಾರ ಅತ್ಯಂತ ಗಮನಾರ್ಹ ಗುಣಮಟ್ಟದ ಆಲಂ ಕಲ್ಲು ಸುಲಭವಾಗಿ ಒಡೆದುಹೋಗುತ್ತದೆ.

ಈ ಲೇಖನದಲ್ಲಿ, ಆಲಂ ಕಲ್ಲನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬಹುದಾದ ಹಲವು ವಿಧಾನಗಳನ್ನು ಮತ್ತು ಅದರ ಪ್ರಯೋಜನಗಳನ್ನು ನಾವು ಪಟ್ಟಿ ಮಾಡಿದ್ದೇವೆ.

Amazing Health Benefits of Fitkari or Alum Stone

1. ಬಾಯಿಯ ಆರೋಗ್ಯ

ಆಲಂ ಕಲ್ಲು ಅನೇಕ ಬಾಯಿ ಆರೈಕೆ ಉತ್ಪನ್ನಗಳಲ್ಲಿ ಕಂಡು ಬರುವ ಸಾಮಾನ್ಯ ಘಟಕಾಂಶವಾಗಿದೆ. ಇದು ಬಾಯಿಯ ಒಸಡುಗಳನ್ನು ಬಿಗಿಗೊಳಿಸಲು ಮತ್ತು ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುವ ಅತ್ಯುತ್ತಮ ಗುಣಗಳನ್ನು ಹೊಂದಿದೆ. ಈ ನೈಸರ್ಗಿಕ ವಸ್ತುವು ಬಾಯಿಯ ಕೆಟ್ಟ ವಾಸನೆಯನ್ನು ನಿಲ್ಲಿಸಲು ಮತ್ತು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇದು ಹಲ್ಲು ಹುಳುಕು ಮತ್ತು ಒಸಡು ಕಾಯಿಲೆಗೆ ಕಾರಣವಾಗಬಹುದಾದ ಕ್ರಿಮಿಗನ್ನು ಕೊಂದು, ಹಲ್ಲುಗಳನ್ನು ಬಿಳುಪುಗೊಳಿಸಲು ಸಹ ಸಹಾಯ ಮಾಡುತ್ತದೆ. ಇದನ್ನು, ಬೆಚ್ಚಗಿನ ಉಪ್ಪು ನೀರಿನಲ್ಲಿ ಕರಗಿಸಿ ಮತ್ತು ಹಲ್ಲುಜ್ಜಿದ ನಂತರ ನಿಮ್ಮ ಬಾಯಿಯನ್ನು ತೊಳೆಯುವ ಮೂಲಕ ಮೌತ್ವಾಶ್ ಆಗಿ ಬಳಸಬಹುದು.

2. ದೇಹದ ವಾಸನೆ

ಆಲಂ ಅಥವಾ ಫಿಟ್ಕಾರಿ ಸಹ ಪರಿಣಾಮಕಾರಿ ನೈಸರ್ಗಿಕ ಡಿಯೋಡರೆಂಟ್ ಆಗಿದೆ. “ಇದು ಬೆವರು ಗ್ರಂಥಿಗಳನ್ನು ಮುಚ್ಚಲು ಮತ್ತು ಬೆವರನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಈ ನೈಸರ್ಗಿಕ ವಸ್ತುವು ದೇಹದ ವಾಸನೆಯನ್ನು ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ. ಹೀಗಾಗಿ ಇದು ರಾಸಾಯನಿಕಯುಕ್ತ ವಾಣಿಜ್ಯ ಡಿಯೋಡರೆಂಟ್‌ಗಳಿಗೆ ಅತ್ಯುತ್ತಮ ಪರ್ಯಾಯ ವಸ್ತುವಾಗಿದೆ.

ಟೊಮ್ಯಾಟೊ ಬೆಲೆ ಹೆಚ್ಚು ಎಂದು ಕೊಳ್ಳಲು ಆಗುವುದಿಲ್ಲವೇ? ಇಲ್ಲಿವೆ ಪರ್ಯಾಯ ಪದಾರ್ಥಗಳ ಪಟ್ಟಿಟೊಮ್ಯಾಟೊ ಬೆಲೆ ಹೆಚ್ಚು ಎಂದು ಕೊಳ್ಳಲು ಆಗುವುದಿಲ್ಲವೇ? ಇಲ್ಲಿವೆ ಪರ್ಯಾಯ ಪದಾರ್ಥಗಳ ಪಟ್ಟಿ

ಸ್ನಾನ ಮಾಡಿದ ನಂತರ ನೀವು ಆಲಂ ಕಲ್ಲನ್ನು ನೇರವಾಗಿ ನಿಮ್ಮ ತೋಳುಗಳಿಗೆ ಹಚ್ಚಬಹುದು ಇದರಿಂದ ನೀವು ದಿನವಿಡೀ ತಾಜಾ ವಾಸನೆಯನ್ನು ಹೊಂದಿರುತ್ತೀರಿ. ಇನ್ನೊಂದು ವಿಧಾನವೆಂದರೇ ನಿಮ್ಮ ಸ್ನಾನದ ನೀರಿನಲ್ಲಿ ಸ್ವಲ್ಪ ಕರಗಿಸಬಹುದು.

Amazing Health Benefits of Fitkari or Alum Stone

3. ಮೂಲವ್ಯಾಧಿ ನಿವಾರಣೆ

ಮೂಲವ್ಯಾಧಿ ಅನೇಕ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವ ಅಥವಾ ಟಾಯ್ಲೆಟ್‌ಗೆ ಹೋದಾಗ ತುಂಬಾ ಹೊತ್ತು ಟಾಯ್ಲೆಟ್‌ನಲ್ಲಿ ಕೂರುವವರಲ್ಲಿ, ಮಲಬದ್ಧತೆ ತೊಂದರೆ ಇರುವವರಿಗೆ ಈ ಸಮಸ್ಯೆ ಕಾಡುವುದು. ಇಂತಹವರಿಗೆ ಆಲಂ ಕಲ್ಲು ಮೂಲವ್ಯಾಧಿಗೆ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ. ಇದು ಪೀಡಿತ ಪ್ರದೇಶದಲ್ಲಿ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲವ್ಯಾಧಿಯಿಂದ ಪರಿಹಾರಕ್ಕಾಗಿ ನೀವು ಆಲಂ ಕಲ್ಲನ್ನು ನೀರಿನೊಂದಿಗೆ ಬೆರೆಸಬಹುದು ಮತ್ತು ಪೀಡಿತ ಪ್ರದೇಶಕ್ಕೆ ಹಚ್ಚಬಹುದು.

4. ಚರ್ಮದ ಆರೈಕೆ

ಆಲಂ ಕಲ್ಲನ್ನು ಶತಮಾನಗಳಿಂದ ವಿವಿಧ ಚರ್ಮದ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಇದು ನಂಜುನಿರೋಧಕ ಗುಣಗಳನ್ನು ಹೊಂದಿದ್ದು ಅದು ಚರ್ಮವನ್ನು ಬಿಗಿಗೊಳಿಸುತ್ತದೆ. ಮೊಡವೆಗಳು, ಗುಳ್ಳೆಗಳು ಮತ್ತು ಕಪ್ಪು ಚುಕ್ಕೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್, ಸುಕ್ಕುಗಳು ಮತ್ತು ಮುಪ್ಪಿನ ಗೆರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಣ್ಣ ಕಡಿತ ಮತ್ತು ಗಾಯಗಳಿಗೆ ನೀವು ಇದನ್ನು ಬಳಸಬಹುದು.

ಇನ್ನು, ಮುಖಕ್ಕೆ ಬಳಸಲು ಇದನ್ನು ನೀರಿನ ಜೊತೆಗೆ ಮಿಶ್ರಣ ಮಾಡಿ ಪೇಸ್ಟ್ ಅನ್ನು ತಯಾರಿಸಿ ಅದನ್ನು ನಿಮ್ಮ ಮುಖಕ್ಕೆ ನೈಸರ್ಗಿಕ ಫೇಸ್ ಮಾಸ್ಕ್ ಆಗಿ ಬಳಸಬಹುದು.

Amazing Health Benefits of Fitkari or Alum Stone

5. ಕೆಮ್ಮು ಅಥವಾ ಗಂಟಲು ನೋವು

ಆಲಂ ಕಲ್ಲನ್ನು ಕೆಮ್ಮು ಮತ್ತು ಗಂಟಲು ನೋವಿನ ಉಪಶಮನಕ್ಕೆ ಸಾಂಪ್ರದಾಯಿಕ ಪರಿಹಾರವಾಗಿ ಬಳಸಲಾಗುತ್ತದೆ. ಇದರ ನಂಜುನಿರೋಧಕ ಗುಣಲಕ್ಷಣಗಳು ಗಂಟಲು ನೋವನ್ನು ಶಮನಗೊಳಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆಲಂ ಕಲ್ಲಿನಿಂದ ಮಾಡಿದ ಬೂದಿಯು ಶ್ವಾಸಕೋಶದಲ್ಲಿ ಲೋಳೆಯು ಸಂಗ್ರಹವಾಗುವುದನ್ನು ತಡೆಯುತ್ತದೆ.

ನೀವು ಜೇನುತುಪ್ಪ ಮತ್ತು ಆಲಂ ಪುಡಿಯ ಮಿಶ್ರಣವನ್ನು ಸೇವಿಸುವುದು ಅಥವಾ ನೀವು ಒಂದು ಲೋಟ ಬೆಚ್ಚಗಿನ ಉಪ್ಪುನೀರಿನೊಂದಿಗೆ ಬಾಯಿ ಮುಕ್ಕಳಿಸುವುದು ಮಾಡಬಹುದು.

ಆಲಂನ ಗುಣಲಕ್ಷಣಗಳು:

* ಇದು ಬ್ಯಾಕ್ಟೀರಿಯಾ ವಿರೋಧಿ

*ಇದು ಆಂಟಿಪ್ಲೇಟ್ಲೆಟ್

* ಇದು ಬೊಜ್ಜು ವಿರೋಧಿ

* ಇದು ಆಂಟಿ ಹೆಮರಾಜಿಕ್ (ರಕ್ತಸ್ರಾವವನ್ನು ನಿಲ್ಲಿಸುತ್ತದೆ)

* ಇದು ಅಸ್ತಮಾ-ವಿರೋಧಿ

English summary

Amazing Health Benefits of Fitkari or Alum Stone in Kannada

Story first published: Tuesday, July 18, 2023, 19:56 [IST]

Source link